Drop


Friday, May 1, 2015

ಕ್ಯಾನ್ಸರ್ ನಿವಾರಣೆಗೆ ಜೀವ ರಸಾಯನ ಪತ್ತೆ : ಕೃಷಿ ವಿವಿಗೆ ಪೇಟೆಂಟ್:-

ಧಾರವಾಡ, ಮೇ 1- ಪಶ್ಚಿಮ ಘಟ್ಟದಲ್ಲಿ ಹೇರಳವಾಗಿ ಬೆಳೆಯುವ
ಕೆಂಪು ದೇವದಾರು ವೃಕ್ಷದಿಂದ ಡೈಸೋಲಿನ್ ಎಂಬ
ಅಪರೂಪದ ಜೀವ ರಸಾಯನವನ್ನು ಧಾರವಾಡ ಕೃಷಿ ವಿeನಿ ಡಾ.
ಆರ್. ವಾಸುದೇವ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು
ಕುಲಪತಿ ಡಾ. ಡಿ.ಪಿ. ಬಿರಾದಾರ ಹೇಳಿದರು. ಡೈಸೋಲಿನ್ ಎಂಬ
ಜೀವರಸಾಯನ ಕ್ಯಾನ್ಸರ್ ರೋಗಕ್ಕೆ ಸೂಕ್ತ ಚಿಕಿತ್ಸೆ
ನೀಡಲು ಅತ್ಯಂತ ಪರಿಣಾಮಕಾರಿ ಔಷಧಿ. ಈ
ಸಂಶೋಧನೆಗೆ ಜಾಗತಿಕ ಪೇಟೆಂಟ್ ಕೂಡಾ
ದೊರಕಿದೆ. ಈ ಸಂಶೋಧನೆಯಲ್ಲಿ ಭಾರತದ ನಾಲ್ಕು
ಪ್ರಮುಖ ಸಂಸ್ಥೆಗಳು ಪಾಲ್ಗೊಂಡಿದ್ದು,
ನಮ್ಮ ಕೃಷಿ ವಿವಿ ಶಿರಸಿ ಅರಣ್ಯ ಕಾಲೇಜಿನ ತಜ್ಞ ಡಾ.
ಆರ್.ವಾಸುದೇವ ಸಹ ಒಬ್ಬರು ಎಂದು ತಿಳಿಸಿದರು.
ಕರ್ನಾಟಕ ಜೈವಿಕ ತಂತ್ರeನ ಮಾಹಿತಿ ತಂತ್ರeನ ಸೇವೆಗಳ
ಸಂಸ್ಥೆಯ ಜೊತೆಗೆ ಒಪ್ಪಂದ
ಮಾಡಿಕೊಂಡಿದ್ದು ಜೈವಿಕ ತಂತ್ರeನ
ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು.
ಅದಕ್ಕೆ 6.50 ಕೋಟಿ ಅನುದಾನ ದೊರೆತಿದೆ ಎಂದರು.
ಧಾರವಾಡದ ಕೃಷಿ ವಿವಿ ಬೀಜೋತ್ಪಾದನೆ ಮಾಡುವಲ್ಲಿ ತನ್ನ
ಸ್ಥಾನವನ್ನು ಇನ್ನಷ್ಟು
ಗಟ್ಟಿಗೊಳಿಸಿಕೊಂಡಿದೆ.
ಚೀನಾ ಹಾಗೂ ಆಫ್ರಿಕಾ ಖಂಡದ ಕೆಲ
ದೇಶಗಳೊಂದಿಗೆ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ
ಸಹಾಯ ಸಹಕಾರ ನೀಡುವ ಮೂಲಕ ಸಾಗರದ ಆಚೆಗೆ ತನ್ನ ಸೇವೆ
ವಿಸ್ತರಿಸಿಕೊಂಡಿದೆ ಎಂದರು.
ಹೊಸ-ಹೊಸ ಯೋಜನೆಗಳ ಮೂಲಕ
ಹೊಸ ಸಂಶೋಧನೆ ಹಾಗೂ ಅಭಿವೃದ್ಧಿ
ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಾಷ್ಟ್ರ-
ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ,
ಸಮ್ಮೇಳನ ಹಾಗೂ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ರೈತರಿಗೆ ಅನುಕೂಲವಾಗುವ ಪ್ರಕಟಣೆಗಳನ್ನು ವಿವಿ ಪ್ರಕಟಿಸಿದೆ
ಎಂದು ಡಾ. ಬಿರಾದಾರ ಹೇಳಿದರು.