ಉತ್ತೀರ್ಣಗೊಂಡವರಿಗೆ ಒಂದು ದಾರಿಫೇಲಾದವರಿಗೆ ನೂರು ದಾರಿ


ಬುಧವಾರ - ಮೇ -13-2015
ಎಸೆಸೆಲ್ಸಿ ಫಲಿತಾಂಶ ಹೊರಬಿದ್ದಿದೆ. ಎಂದಿನಂತೆಯೇ ಕುಸ್ತಿ ಪಟುಗಳನ್ನು ಗುರುತಿಸುವಂತೆ ಮೇಲುಗೈಯಾದವರ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಒಳ್ಳೆಯ ಕೊಯ್ಲು ಎನ್ನುವಂತೆ ಉತ್ತಮ ಲಿತಾಂಶ ಎಂಬಿತ್ಯಾದಿ ಅಳತೆಗಳೂ ನಡೆದಿವೆ. ಮಕ್ಕಳು ಬಾಚಿಕೊಂಡ ಅಂಕಗಳು ಸುದ್ದಿಯಾಗುತ್ತಿವೆ. ಆ ಜಿಲ್ಲೆ ಪ್ರಥಮ, ಈ ಜಿಲ್ಲೆ ಅಂತಿಮ ಎಂಬಿತ್ಯಾದಿ ಗುರುತಿಸುವಿಕೆಯೂ ನಡೆದಿದೆ. ಉಡುಪಿ ಎಂದಿನಂತೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡ 8ನೆ ಸ್ಥಾನವನ್ನು ಪಡೆದುಕೊಂಡಿದೆ. ಚಿಕ್ಕೋಡಿ ದ್ವಿತೀಯ ಸ್ಥಾನವನ್ನು ಪಡೆದು ಎಲ್ಲರ ಬೆರಗುಗಣ್ಣಿಗೆ ಕಾರಣವಾಗಿದೆ. ಅತ್ಯುತ್ತಮ ಎಸೆಸೆಲ್ಸಿ ಲಿತಾಂಶ ಶಿಕ್ಷಣದ ಸುಧಾರಣೆಯನ್ನು ತೋರಿಸುತ್ತದೆ ನಿಜ. ಹಾಗೆಂದು, ಅದುವೇ ಎಲ್ಲ ಅಲ್ಲ. ಅತ್ಯುತ್ತಮ ಅಂಕಗಳನ್ನು ಪಡೆದವರೆಲ್ಲ ಅಭಿನಂದನಾರ್ಹರು. ಹಾಗೆಂದು, ಅವರಿಂದಲೇ ಈ ಸಮಾಜಕ್ಕೆ ಭವಿಷ್ಯ ಎನ್ನಲಾಗದು. ಯಾಕೆಂದರೆ ಈ ವಿಶ್ವದ ಬಹುತೇಕ ಸಾಧಕರ ಇತಿಹಾಸವನ್ನು ಅವಲೋಕಿಸಿದಾಗ ಅವರಲ್ಲಿ ೇಲಾದವರೇ ಅಕ. ಹಲವರು ಅರ್ಧದಲ್ಲೇ ಶಾಲೆ ತೊರೆದವರಿದ್ದಾರೆ. ಆದರೆ ಇದು ಅವರ ಸಾಧನೆಗೆ ಯಾವ ಅಡ್ಡಿಯನ್ನೂ ತರಲಿಲ್ಲ. ಇದೇ ಸಂದರ್ಭದಲ್ಲಿ ಕಳೆದ ಮೂರು ದಶಕಗಳಲ್ಲಿ ನೂರಾರು ರ್ಯಾಂಕ್ ವಿದ್ಯಾರ್ಥಿಗಳು ಹುಟ್ಟಿ ಬಂದಿದ್ದಾರೆ. ರ್ಯಾಂಕ್ ಪಡೆದು ಪತ್ರಿಕೆಗಳಲ್ಲಿ ೆಟೋಗಳು ಪ್ರಕಟವಾಗಿದ್ದು ಬಿಟ್ಟರೆ, ಬಳಿಕ ಅವರಲ್ಲಿ ಬಹುತೇಕರು ಮೂಲೆಗುಂಪಾಗಿದ್ದಾರೆ. ಅಂಕಗಳಷ್ಟೇ ವಿದ್ಯಾರ್ಥಿಯ ಪ್ರತಿಭೆಗೆ ಅಳತೆಗೋಲು ಅಲ್ಲ ಎನ್ನುವುದನ್ನು ಇದು ಎತ್ತಿ ಹಿಡಿಯುತ್ತದೆ. ಅತ್ಯಂತ ವಿಷಾದನೀಯ ಸಂಗತಿಯೆಂದರೆ ಈ ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಸುದ್ದಿಯಾಗದೇ ಇರುವುದು. ಈ ದೇಶದಲ್ಲಿ ರೈತರ ಆತ್ಮಹತ್ಯೆಯಷ್ಟೇ ವೇಗದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯೂ ನಡೆಯುತ್ತಿದೆ. ಅನುತ್ತೀರ್ಣವೇ ಈ ಆತ್ಮಹತ್ಯೆಗೆ ಕಾರಣವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳು ವಿದ್ಯಾರ್ಥಿಗಳ ಪಾಲಿಗೆ ಕರಾಳ ಮಾಸವಾಗಿ ಪರಿವರ್ತನೆಯಾಗುತ್ತಿದೆ. ಮಾನಸಿಕ ಒತ್ತಡದಿಂದ ಖಿನ್ನತೆಗೊಳಗಾಗಿ ಆಸ್ಪತ್ರೆಗೆ ಸೇರುವ ವಿದ್ಯಾರ್ಥಿಗಳು ಸುದ್ದಿಯೇ ಆಗುವುದಿಲ್ಲ. ಇದೇ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಈ ಒತ್ತಡವನ್ನು ಎದುರಿಸಲಾರದೆ ಮನೆ ಬಿಟ್ಟು ಓಡಿ ಹೋಗುತ್ತಾರೆ. ಪರೀಕ್ಷೆ ಬರೆದು ಮನೆಗೆ ಮರಳದ ಎಷ್ಟೋ ವಿದ್ಯಾರ್ಥಿಗಳು ಪತ್ರಿಕೆಗಳ ಒಳಪುಟಗಳಲ್ಲಿ ಸುದ್ದಿಯಾಗುತ್ತಿರುತ್ತಾರೆ. ಲಿತಾಂಶಕ್ಕೆ ಮೊದಲೇ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಎಷ್ಟೋ. ಲಿತಾಂಶದ ಬಳಿಕವೂ ಸಮಾಜಕ್ಕೆ, ಕುಟುಂಬಕ್ಕೆ ಹೆದರಿ, ಅವಮಾನಕ್ಕೊಳಗಾಗಿ ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಇದೊಂದು ಸಮಸ್ಯೆ ಎಂದು ಸಮಾಜವಾಗಲಿ, ಸರಕಾರವಾಗಲಿ ಭಾವಿಸಿಯೇ ಇಲ್ಲ. ಇಷ್ಟಕ್ಕೂ ಈ ಆತ್ಮಹತ್ಯೆ ಖಿನ್ನತೆ, ಜಿಗುಪ್ಸೆ ಮೊದಲಾದ ಕಾರಣಗಳೊಂದಿಗೆ ಮುಗಿದು ಹೋಗುತ್ತದೆ. ಆ ಮಗುವನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಯಾವುದೇ ವ್ಯಕ್ತಿಯ ಮೇಲೆ ಕೇಸು ದಾಖಲಾಗುವುದಿಲ್ಲ. ಯಾಕೆಂದರೆ ಒಂದು ವೇಳೆ ಕೇಸು ದಾಖಲಿಸುವುದೇ ಆದರೆ, ಮೊತ್ತ ಮೊದಲು ಆತ್ಮಹತ್ಯೆಗೈದ ವಿದ್ಯಾರ್ಥಿಯ ಪಾಲಕರ ಮೇಲೆ ಮೊಕದ್ದಮೆ ದಾಖಲಿಸಬೇಕಾಗುತ್ತದೆ. ಬಳಿಕ, ಆತನಿಗೆ ಅಂತಹ ಸನ್ನಿವೇಶವನ್ನು ನಿರ್ಮಿಸಿದ ಶಾಲೆಯ ಮೇಲೆ ಪ್ರಕರಣ ದಾಖಲಿಸಬೇಕು. ಜೊತೆಗೆ ಇಡೀ ಶಿಕ್ಷಣ ವ್ಯವಸ್ಥೆಯೂ ಆರೋಪಿ ಸ್ಥಾನದಲ್ಲಿ ನಿಲ್ಲುತ್ತದೆ. ಒಂದು ರೀತಿಯಲ್ಲಿ ಈ ಮಕ್ಕಳ ಪರವಾಗಿ ಮಾತನಾಡುವ ಧ್ವನಿಯೇ ಇಲ್ಲ.

ಉತ್ತೀರ್ಣರಾದವರ, ರ್ಯಾಂಕ್ ಪಡೆದವರ ಅತಿ ವೈಭವೀಕರಣವೂ ಇಂತಹ ಆತ್ಮಹತ್ಯೆಗಳಿಗೆ ಮುಖ್ಯ ಕಾರಣ. ಇದು ಮಕ್ಕಳಲ್ಲಿ ಸಹಜವಾಗಿಯೇ ಕೀಳರಿಮೆಯನ್ನು ಹುಟ್ಟಿಸುತ್ತದೆ. ನಿಷ್ಪ್ರಯೋಜಕರು ಎಂಬ ಭಾವನೆ ಆಳವಾಗಿ ಅವರನ್ನು ಇರಿಯುತ್ತಿರುತ್ತದೆ. ಇದರ ಜೊತೆಗೆ ಮನೆಯೊಳಗೆ ಸಮಾಜದೊಳಗೂ ಇವರ ಕುರಿತಂತೆ ಒಂದು ರೀತಿಯ ಉಪೇಕ್ಷೆ, ಉತ್ತೀರ್ಣರಾದವರ ಜೊತೆ, ರ್ಯಾಂಕ್ ಪಡೆದವರ ಜೊತೆಗೆ ಹೋಲಿಕೆ ಅವರನ್ನು ಖಿನ್ನತೆಗೆ ತಳ್ಳುತ್ತದೆ. ತಮಗಿನ್ನು ಭವಿಷ್ಯವೇ ಇಲ್ಲ ಎಂಬಂತಹ ಮನಸ್ಥಿತಿ ಅವರಲ್ಲಿ ಸೃಷ್ಟಿಯಾಗಿ, ಆತ್ಮಹತ್ಯೆಯಂತಹ ಕೃತ್ಯಕ್ಕೆ ಇಳಿಯುತ್ತಾರೆ. ಹಾಗೆ ನೋಡಿದರೆ ೇಲಾದವರು ಮತ್ತು ಉತ್ತೀರ್ಣರಾದವರ ನಡುವೆ ದೊಡ್ಡ ವ್ಯತ್ಯಾಸವೇನೂ ಇಲ್ಲ. ೇಲಾದವರಿಗೆ ಮುಂದೆ ಕಾಲೇಜಿಗೆ ತೆರಳಲು ದಾರಿ ಇಲ್ಲ ನಿಜ. ಆದರೆ ಭವಿಷ್ಯದ ದಾರಿ ಮುಚ್ಚಿರುವುದಿಲ್ಲ. ಉತ್ತೀರ್ಣರಾದವರಿಗೆ ಒಂದು ದಾರಿ ಮಾತ್ರ ತೆರೆಯುತ್ತದೆ. ಆ ನಿರ್ದಿಷ್ಟ ದಾರಿಯಲ್ಲೇ ಹೋಗಬೇಕಾದ ಅನಿವಾರ್ಯತೆಗೆ ಅವರು ಸಿಲುಕಿಕೊಳ್ಳುತ್ತಾರೆ. ಆದರೆ ೇಲಾದವರಿಗೆ ನೂರಾರು ದಾರಿಗಳು ಮುಕ್ತವಾಗಿ ತೆರೆದಿರುತ್ತವೆ. ಈವರೆಗೆ ಅವರು ತಂದೆತಾಯಿಗಳ, ಸಮಾಜದ ಕಟ್ಟುಪಾಡಿಗೆ ಒಳಗಾಗಿ ನಾಲ್ಕುಗೋಡೆಗಳ ನಡುವೆ ಕಲಿಯಬೇಕಾಗಿತ್ತು. ಈಗ ದಾರಿ ಮುಕ್ತವಾಗಿರುವುದರಿಂದ, ತನ್ನ ಆಸಕ್ತಿಯನ್ನು ಗುರುತಿಸಿ ಆ ದಾರಿಯಲ್ಲಿ ಮುನ್ನಡೆಯುವ ಅವಕಾಶವಿದೆ. ಉತ್ತಮ ಸಂಗೀತಗಾರ, ಕಲಾವಿದ, ವೃತ್ತಿಪರ ಕೌಶಲ್ಯ ಇವುಗಳಲ್ಲಿ ಆಸಕ್ತಿಯಿದ್ದರೆ ಅದು ಆ ಕ್ಷೇತ್ರದಲ್ಲಿ ಭಾರೀ ಸಾಧನೆ ಮಾಡಲು ಇದೊಂದು ದೊಡ್ಡ ಅವಕಾಶ. ಒಂದು ರೀತಿಯಲ್ಲಿ ಆತ ಅನುತ್ತೀರ್ಣನಾದುದೇ ಅವನ ಭವಿಷ್ಯದ ಬಾಗಿಲು ತೆರೆದುಕೊಳ್ಳುವುದಕ್ಕೆ ಕಾರಣವಾಗಬಹುದು. ಆದುದರಿಂದ ಫೇಲಾದವರು ಯಾವ ಕಾರಣಕ್ಕೂ ಖಿನ್ನರಾಗದೆ ಮತ್ತೆ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗಬೇಕು. ಜೊತೆಗೆ ಮುಕ್ತವಾಗಿರುವ ಸಮಯವನ್ನು ಸದುಪಯೋಗಪಡಿಸಿಕೊಂಡು, ತಮ್ಮ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಜಗತ್ತಿನ ಬಹುತೇಕ ಸಾಧಕರು ರ್ಯಾಂಕ್ ವಿಜೇತರಲ್ಲ ಎನ್ನುವುದನ್ನು ನೆನಪಿಲ್ಲಿಟ್ಟುಕೊಂಡು ಇನ್ನಷ್ಟು ಆತ್ಮವಿಶ್ವಾಸದಿಂದ ೇಲಾದ ವಿದ್ಯಾರ್ಥಿಗಳು ಹೆಜ್ಜೆಯನ್ನು ಮುಂದಿಡಬೇಕು. ೇಲಾದ ವಿದ್ಯಾರ್ಥಿಗಳಿಗೂ ಅಭಿನಂದನೆಗಳು.

Via vartabharti

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023