ಬಾಲ ಕಾರ್ಮಿಕ ಕಾಯಿದೆ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಅಸ್ತು.

ಬಾಲ ಕಾರ್ಮಿಕ ಕಾಯಿದೆ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಅಸ್ತು.
(PSGadyal Teacher Vijayapur)

ಹೊಸದಿಲ್ಲಿ: 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೌಟಂಬಿಕ ಕೆಲಸ ಕಾರ್ಯಗಳೂ ಸೇರಿದಂತೆ ಅಪಾಯಕಾರಿಯಲ್ಲದ ವೃತ್ತಿಗಳಲ್ಲಿ ತೊಡಗಿಕೊಳ್ಳಲು ಅನುವಾಗುವಂತೆ ಬಾಲ ಕಾರ್ಮಿಕ ಕಾಯಿದೆಗೆ ತಿದ್ದುಪಡಿ ತರುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅಸ್ತು ಎಂದಿದೆ.

ಆದಷ್ಟು ಬೇಗ ಬಾಲ ಕಾರ್ಮಿಕ ಕಾಯಿದೆ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ- 2012ಅನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಸಂಪುಟ ಸಭೆ ಅನುಮೋದನೆಯ ಬೆನ್ನಿಗೇ ಮಕ್ಕಳ ಹಕ್ಕುಗಳ ಹೋರಾಟಗಾರರು ಇದು ಬಾಲ ಕಾರ್ಮಿಕ ಪದ್ಧತಿ ಉತ್ತೇಜಿಸಲಿದೆ ಎಂದು ಟೀಕಿಸಿದ್ದಾರೆ. ಈ ಮಾತನ್ನು ಒಪ್ಪದ ಉದ್ದಿಮೆದಾರರು, ಮಕ್ಕಳಿಗೆ ಪಾರಂಪರಿಕ ಕಲೆಯನ್ನು ಬಾಲ್ಯದಿಂದಲೇ ಕಲಿಸಬೇಕು. ಇಲ್ಲವಾದಲ್ಲಿ ನೇಯ್ಗೆ, ಹೊಲಿಗೆಯಂಥ ಕೌಶಲ್ಯಗಳು ಒಲಿಯುವುದಿಲ್ಲ. ಹಾಗಾಗಿ ತಿದ್ದುಪಡಿ ಸ್ವಾಗತಾರ್ಹ ಎಂದಿದ್ದಾರೆ.

ಮೂಲ ಕಾಯಿದೆಯಡಿ 14ರಿಂದ 18 ವರ್ಷದೊಳಗಿನ ಮಕ್ಕಳು ಯಾವುದೇ 18 ಅಪಾಯಕಾರಿ ಉದ್ಯಮಗಳಲ್ಲಿ ದುಡಿಯುವುದನ್ನು ನಿಷೇಧಿಸಲಾಗಿತ್ತು. ಈ ಹೊಸ ತಿದ್ದುಪಡಿಯಲ್ಲೂ ಇದು ಮುಂದುವರಿದಿದೆ. ಆದರೆ ಈ ತಿದ್ದುಪಡಿಯಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಪಾಯಕಾರಿಯಲ್ಲದ ಉದ್ಯಮದಲ್ಲಿ ಶಾಲೆಯ ರಜೆ ನಂತರ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಒಂದಷ್ಟು ಷರತ್ತುಗಳನ್ನೂ ವಿಧಿಸಿದೆ. ಜತೆಗೆ, ನಿಯಮ ಉಲ್ಲಂಘಿಸಿದ ಉದ್ಯೋಗದಾತರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬಹುದಾಗಿದೆ.

ಈ ತಿದ್ದುಪಡಿ ಪ್ರಸ್ತಾವನೆಯಲ್ಲಿ ಸರ್ಕಸ್ ಹೊರತುಪಡಿಸಿ ಜಾಹೀರಾತು, ಸಿನಿಮಾ, ಧಾರಾವಾಹಿ ಹಾಗೂ ಇಂಥ ಇತರ ಶ್ರಾವ್ಯ-ದೃಶ್ಯ ಮನರಂಜನೆ ಅಥವಾ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಬಾಲ ಕಲಾವಿದರಿಗೆ ಷರತ್ತು ಬದ್ಧ ವಿನಾಯಿತಿ ನೀಡಲಾಗಿದೆ. ಜತೆಗೆ, ಸುರಕ್ಷತೆಯ ಸೂಕ್ತ ಮಾನದಂಡ ಪಾಲಿಸುವಂತೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ.

ಪೋಷಕರಿಗೂ ದಂಡ ಈ ತಿದ್ದುಡಪಿ ಪ್ರಸ್ತಾವನೆಯಲ್ಲಿ ಬಾಲ ಕಾರ್ಮಿಕ ಕಾಯಿದೆ ಉಲ್ಲಂಘನೆಯ ಮೊದಲ ಪ್ರಕರಣದಲ್ಲಿ ಪೋಷಕರಿಗೆ ಯಾವುದೇ ದಂಡ ವಿಧಿಸುವುದಿಲ್ಲ. ಆದ ೆಉದ್ಯೋಗದಾತರಿಗೆ ಬಾರಿ ದಂಡ ವಿಧಿಸಬಹುದಾಗಿದೆ. ತಪ್ಪು ಪುನರಾವರ್ತನೆಯಾದಲ್ಲಿ ಮಾತ್ರ ಪೋಷಕರಿಗೆ 10,000ರೂ.ವರೆಗೆ ದಂಡ ವಿಧಿಸಬಹುದಾಗಿದೆ.

ಮೊದಲ ಪ್ರಕರಣದಲ್ಲಿ, ಉದ್ಯೋಗದಾತರಿಗೆ ವಿಧಿಸುವ ದಂಡವನ್ನು 20 ರಿಂದ 50 ಸಾವಿರಕ್ಕೆ ಏರಿಸಲಾಗಿದೆ. ಎರಡನೇ ಬಾರಿ ಹಾಗೂ ಅದರ ನಂತರ ತಪ್ಪು ಪುನರಾವರ್ತನೆ ಆದಲ್ಲಿ ಉದ್ಯೋಗದಾತರಿಗೆ ಕನಿಷ್ಠ 1 ವರ್ಷದಿಂದ ಗರಿಷ್ಠ 3 ವರ್ಷದವರೆಗೆ ಶಿಕ್ಷೆ ವಿಧಿಸಬಹುದಾಗಿದೆ. ಮೂಲ ಕಾಯಿದೆಯಲ್ಲಿ ಈ ಶಿಕ್ಷೆಯ ಪ್ರಮಾಣ ಕನಿಷ್ಠ 6 ತಿಂಗಳಿಂದ ಗರಿಷ್ಠ 2 ವರ್ಷದವರೆಗೆ ಇತ್ತು

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023