Drop


Friday, May 15, 2015

ಭಾರತದ ಶಾಂತಿ ಪಾಲನಾ ಪಡೆಗೆ ವಿಶ್ವಸಂಸ್ಥೆ ಪ್ರಶಸ್ತಿ

ಭಾರತದ ಶಾಂತಿ ಪಾಲನಾ ಪಡೆಗೆ ವಿಶ್ವಸಂಸ್ಥೆ ಪ್ರಶಸ್ತಿ

ವಾಷಿಂಗ್ಟನ್‌(ಪಿಟಿಐ):  ವಿಶ್ವಸಂಸ್ಥೆಯ  ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ  ನೀಡಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಇಲ್ಲಿನ ಕ್ಯಾಪಿಟಲ್‌ ಹಿಲ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಪಡೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸುಮಾರು 1.80 ಲಕ್ಷ ಪಡೆಗಳನ್ನು ಕೊಡುಗೆಯಾಗಿ ನೀಡುವ ಮೂಲಕ, ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಭಾರತ ಗಮನಾರ್ಹ ಕೊಡುಗೆ ನೀಡಿದೆ. ಇತರೆ ರಾಷ್ಟ್ರಗಳಿಗಿಂತ ಹೆಚ್ಚಿನ ಪಡೆಗಳನ್ನು ನೀಡಿರುವ ಕೀರ್ತಿ ಭಾರತಕ್ಕೆ ಸಲ್ಲುತ್ತದೆ.

ಅಮೆರಿಕ–ಭಾರತ ವಾಣಿಜ್ಯ ಮಂಡಳಿ  ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ವಿಶ್ವಸಂಸ್ಥೆ ರಾಯಭಾರಿ ಅರುಣ್‌ ಕೆ. ಸಿಂಗ್‌ ಪ್ರಶಸ್ತಿ ಸ್ವೀಕರಿಸಿದರು.

ವಿಶ್ವಸಂಸ್ಥೆಯ 69 ಕಾರ್ಯಾಚರಣೆಗಳ ಪೈಕಿ 44ಕ್ಕೂ ಅಧಿಕ ಕಾರ್ಯಾಚರಣೆಯಲ್ಲಿ ಭಾರತೀಯ ಪಡೆ ಭಾಗವಹಿಸಿದೆ.