ಜೂನ್ನಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ(ಮೇ ೨ ಕ್ಕೆ ಕೊನೆಗೊಳ್ಳದ)


ಬೆಂಗಳೂರು, ಮೇ 3- ರಾಜ್ಯ ಸರ್ಕಾರಿ ನೌಕರರ
ಸಾರ್ವತ್ರಿಕ ವರ್ಗಾವಣೆಗೆ ನಿಗದಿ ಪಡಿಸಿದ್ದ ಗಡುವು
ನಿನ್ನೆ ಮುಕ್ತಾಯವಾಗಿದ್ದು, ಮತ್ತೆ ಜೂನ್ನಲ್ಲಿ
ಅವಕಾಶ ನೀಡಲು ಸರ್ಕಾರ ಉದ್ದೇಶಿಸಿದೆ.
ಏ.20ರಿಂದ ಮೇ 2ರವರೆಗೆ ಸಾರ್ವತ್ರಿಕ ವರ್ಗಾವಣೆಗೆ
ಅವಕಾಶ ಕಲ್ಪಿಸಲಾಗಿತ್ತಾದರೂ ಸಮರ್ಪಕವಾಗಿ
ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಗ್ರಾಪಂ
ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಜೂನ್
ಮೊದಲ ವಾರದಲ್ಲಿ ಮತ್ತೆ ಸಾರ್ವತ್ರಿಕ ವರ್ಗಾವಣೆಗೆ
ಅವಕಾಶ ಕಲ್ಪಿಸಲಾಗುತ್ತದೆ ಎಂದು ಸರ್ಕಾರದ
ಉನ್ನತ ಮೂಲಗಳು ತಿಳಿಸಿವೆ.
ಗ್ರಾಮ ಪಂಚಾಯ್ತಿ ಚುನಾವಣೆ
ಪೂರ್ಣಗೊಂಡ ಬಳಿಕ ಎರಡು ವಾರಗಳ ಕಾಲ
ವರ್ಗಾವಣೆಗೆ ಅವಕಾಶ ನೀಡಲು
ಉದ್ದೇಶಿಸಲಾಗಿದೆ. ಈಗಾಗಲೇ ನೀಡಿದ್ದ
ಸೀಮಿತ ಗಡುವಿನಲ್ಲಿ ವರ್ಗಾವಣೆ ಪ್ರಕ್ರಿಯೆ
ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಜತೆಗೆ
ಕೆಲವೊಂದು ಇಲಾಖೆಗಳಲ್ಲಿ ವರ್ಗಾವಣೆ ಪ್ರಕ್ರಿಯೆ
ಪ್ರಾರಂಭವಾಗಿಲ್ಲ. ಹೀಗಾಗಿ ವರ್ಗಾವಣೆಗೆ
ಕಾಲಾವಕಾಶ ನೀಡಬೇಕೆಂಬ ಬೇಡಿಕೆ
ಸರ್ಕಾರಿ ನೌಕರರಿಂದ ಬಂದಿದೆ. ಮತ್ತೆ ವರ್ಗಾವಣೆ
ಗಡುವನ್ನು ವಿಸ್ತರಿಸಿದರೆ ಗ್ರಾಪಂ ಚುನಾವಣೆ
ಪ್ರಕ್ರಿಯೆ ಆರಂಭವಾಗಲಿದ್ದು,
ತೊಡಕುಂಟಾಗಲಿದೆ ಎಂದು ಲೆಕ್ಕಾಚಾರ
ಹಾಕಲಾಗಿದೆ.
ಆಯಾ ಇಲಾಖೆ ಮುಖ್ಯಸ್ಥರ ಮೂಲಕ
ಕಾರ್ಯನಿರತ ಸಿಬ್ಬಂದಿಯ ಶೇ.6ರಷ್ಟನ್ನು
ಮೀರದಂತೆ ವರ್ಗಾವಣೆ ಮಾಡಲು ಸರ್ಕಾರ
ಅವಕಾಶ ನೀಡಿತ್ತು. ಪರಸ್ಪರ ವರ್ಗಾವಣೆಯನ್ನು
ಸೇವಾ ಅವಧಿಯಲ್ಲಿ ಒಂದು ಬಾರಿ ಮಾತ್ರ
ಮಾಡಲು ಅವಕಾಶ ಕಲ್ಪಿಸಲಾಗಿತ್ತು. ನಿವೃತ್ತಿ
ಅಂಚಿನ ಕೊನೆಯ ಎರಡು ವರ್ಷ ಸೇವಾ ಅವಧಿ
ಉಳಿದಿರುವ ಅಧಿಕಾರಿ ಮತ್ತು ನೌಕರರನ್ನು ವರ್ಗಾವಣೆ
ಮಾಡುವಂತಿಲ್ಲ. ಪತಿ-ಪತ್ನಿ ಇಬ್ಬರೂ ಸರ್ಕಾರಿ
ನೌಕರರಾಗಿದ್ದರೆ ಸಮೀಪದ ಸ್ಥಳಕ್ಕೆ ವರ್ಗಾವಣೆ
ಮಾಡಲು ಆದ್ಯತೆ ನೀಡುವುದು, ವಿಧವೆ,
ಅವಿವಾಹಿತೆ, ವಿಚ್ಛೇದನ ಪಡೆದ ಮಹಿಳೆ ಸರ್ಕಾರಿ
ನೌಕರಿಯಲ್ಲಿದ್ದರೆ ವರ್ಗಾವಣೆ ಸಂದರ್ಭದಲ್ಲಿ ಆದ್ಯತೆ
ನೀಡಬೇಕು. ಎ ಮತ್ತು ಬಿ ಗುಂಪಿನ
ಹುದ್ದೆಗಳಿಗೆ ಕನಿಷ್ಠ 3 ವರ್ಷ, ಸಿ ಗುಂಪಿನ ಹುದ್ದೆಗಳಿಗೆ
ಕನಿಷ್ಠ 4 ವರ್ಷ ಹಾಗೂ ಡಿ ಗುಂಪಿನ ಹುದ್ದೆಗಳಿಗೆ
ಕನಿಷ್ಠ 7 ವರ್ಷ ಸೇವಾವಧಿ ಪೂರೈಸಿದವರಿಗೆ
ವರ್ಗಾವಣೆ ಮಾಡಬೇಕು. ಜತೆಗೆ ಇಲಾಖೆಯಲ್ಲಿ
ಸಮತೋಲನ ಕಾಪಾಡಿಕೊಳ್ಳಬೇಕು.
ವಿಕಲಚೇತನರನ್ನು ಸಹಾನುಭೂತಿಯಿಂದ
ನೋಡಬೇಕು ಮೊದಲಾದ ಷರತ್ತುಗಳನ್ನು
ಸಾರ್ವತ್ರಿಕ ವರ್ಗಾವಣೆ ಸಂದರ್ಭದಲ್ಲಿ
ಪರಿಗಣಿಸುವಂತೆ ಸೂಚಿಸಲಾಗಿತ್ತು. ಉಳಿದ
ಅವಧಿಯಲ್ಲಿ ವರ್ಗಾವಣೆ ಮಾಡಲು ಆಯಾ
ಇಲಾಖಾ ಸಚಿವರು ಹಾಗೂ ಮುಖ್ಯಮಂತ್ರಿ
ಅವರ ಪೂರ್ವಾನುಮತಿ ಕಡ್ಡಾಯವಾಗಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023