ವರ್ಲ್ಡ್‌ ವೈಡ್‌ ವೆಬ್‌ ಮತ್ತು ಡೊಮೈನ್‌ ನೇಮ್

‌:
ವರ್ಲ್ಡ್‌ ವೈಡ್‌ ವೆಬ್‌ (www) ಎನ್ನುವುದರ ಸಂಕ್ಷಿಪ್ತ ರೂಪ w3. ಇಂಗ್ಲೆಂಡ್‌ನ ಗಣಕ ವಿಜ್ಞಾನಿ ತಿಮೊಥಿ ಜಾನ್‌ ಬರ್ನರ್ಸ್‌ ಲೀ (ಟಿಮ್‌ ಬರ್ನರ್ಸ್‌ ಲೀ) ಅವರು 1989ರ ದಶಕದಲ್ಲಿ ಹೈಪರ್‌ ಟೆಕ್ಟ್ಸ್‌ ಟ್ರಾನ್ಸ್‌ಫರ್‌ ಪ್ರೋಟೊಕಾಲ್‌ (http) ಪರಿಕಲ್ಪನೆ ಬಳಸಿಕೊಂಡು ಜಾಗತಿಕ ಜಾಲ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಪಡಿಸಿದರು.

ಮುಂದೆ ಇದೇ ವರ್ಲ್ಡ್‌ ವೈಡ್‌ ವೆಬ್‌ ಎಂದು ಜನಪ್ರಿಯವಾಯಿತು. ವರ್ಲ್ಡ್‌ ವೈಡ್‌ ವೆಬ್‌ ಅನ್ನು  (w3) ಮಾನವ ಜ್ಞಾನದ ಭಂಡಾರ ಎಂದೇ ಬಣ್ಣಿಸಲಾಗುತ್ತದೆ. ಅನೇಕರು ಅಂತರ್ಜಾಲ ಮತ್ತು ವರ್ಲ್ಡ್‌ ವೈಡ್‌ ವೆಬ್‌ ಒಂದೇ ಎಂದು ಭಾವಿಸಿದ್ದಾರೆ. ಆದರೆ, ಇವೆರಡು ಪದಗಳನ್ನು ಕೆಲವೊಮ್ಮೆ ಸಮನ್ವಯಗೊಳಿಸ­ಲಾಗುತ್ತದೆಯಾದರೂ, ಎರಡರ ಅರ್ಥ ಒಂದೇ ಅಲ್ಲ.

ಅಂತರ್ಜಾಲ ಎಂಬುದು ಅಂತರ್‌ ಸಂಪರ್ಕಿತ ಕಂಪ್ಯೂಟರ್‌ ಜಾಲಗಳ ಒಂದು ಜಾಗತಿಕ ವ್ಯವಸ್ಥೆಯಾದರೆ, ವೆಬ್‌ ಎಂಬುದು ಅಂತರ್ಜಾಲದ ಮೇಲೆ ನಡೆಯುವ ಒಂದು ಸೇವೆ. ಇದನ್ನು ಹೈಪರ್‌ ಲಿಂಕ್‌ಗಳು ಮತ್ತು ಯುಆರ್‌ಎಲ್‌ಗಳಿಂದ ಸಂಪರ್ಕಿಸ ಲಾಗಿರುತ್ತದೆ. ಬ್ರೌಸರ್‌ ತೆರೆದು ಅದರಲ್ಲಿ ವಿಳಾಸ  ಟೈಪಿಸುವ ಮೂಲಕ ವರ್ಲ್ಡ್‌ ವೈಡ್‌ ವೆಬ್‌ನ ಮೇಲೆ ಒಂದು ವೆಬ್‌ ಪುಟ ವೀಕ್ಷಿಸುವ ಕಾರ್ಯ ಆರಂಭವಾಗುತ್ತದೆ.

ವಿಳಾಸ ಟೈಪಿಸಿ ಎಂಟರ್‌ ಬಟನ್‌ ಅದುಮುತ್ತಿದ್ದಂತೆ ಬ್ರೌಸರ್‌ನ ಹಿಂದೆ ತೆರೆಯ ಮರೆಯಲ್ಲಿ ಸಂವಹನಾ ಸಂದೇಶಗಳ ಒಂದು ಸರಣಿಯೇ ತೆರೆದುಕೊಳ್ಳುತ್ತದೆ. ಈ ಸಂದೇಶಗಳ ಪ್ರಕ್ರಿಯೆ ಪೂರ್ಣಗೊಂಡಾಗ ನಾವು ವೀಕ್ಷಿಸಲು ಬಯಸಿದ ವೆಬ್‌ ಪುಟ ತೆರೆಯ ಮೇಲೆ ಸಂಪೂರ್ಣವಾಗಿ ತೆರೆದುಕೊಳ್ಳುತ್ತದೆ.

ಡೊಮೈನ್‌ ನೇಮ್‌: ಈ ಪ್ರಕ್ರಿಯೆಯಲ್ಲಿ ಡೊಮೈನ್‌ ನೇಮ್‌ ಸಿಸ್ಟಂ (DNA) ಪಾತ್ರ ಪ್ರಮುಖವಾದದ್ದು. ಇಲ್ಲಿಯವರೆಗೆ ಅಂತರ್ಜಾಲ ವಿಳಾಸಗಳು ಡಾಟ್ ಕಾಂ (.com)  ಅಥವಾ ಡಾಟ್‌ ನೆಟ್ (.net)net ಡಾಟ್ ಇನ್ (.in)ವಿಳಾಸದೊಂದಿಗೆ ಅಂತ್ಯಗೊಳ್ಳುತ್ತಿದ್ದವು. ಆದರೆ, ಈಗ ಪ್ರಪಂಚ ಯಾವುದೇ ಭಾಷೆಯಲ್ಲಿ, ಯಾವುದೇ ಹೆಸರಿನಲ್ಲಿ ವೆಬ್ ವಿಳಾಸಗಳನ್ನು (ಟಿಎಲ್‌ಡಿ) ಅಂತ್ಯಗೊಳಿಸಲು  ಜಾಗತಿಕ ಇಂಟರ್‌ನೆಟ್ ಸಲಹಾ ಸಂಸ್ಥೆ 'ದ ಇಂಟರ್‌ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ್‌  ಆ್ಯಂಡ್ ನಂಬರ್ಸ್‌ (ICANN) ಒಪ್ಪಿಗೆ ನೀಡಿದೆ.

ವರ್ಲ್ಡ್‌ ವೈಡ್‌ ವೆಬ್‌ ಪರಿಕಲ್ಪನೆ ರೂಪುಗೊಂಡ ಎರಡು  ದಶಕಗಳ ನಂತರ ಆಗಿರುವ ಮಹತ್ವದ ಬದಲಾವಣೆ ಇದು. ಅಂದರೆ, ಇನ್ನು ಮುಂದೆ ಕಂಪೆನಿಗಳು ತಮಿಗಿಷ್ಟ ಬಂದ ಹೆಸರಿನೊಂದಿಗೆ ಡೊಮೈನ್ ವಿಳಾಸ ಅಂತ್ಯಗೊಳಿಸಬಹುದು.

ಸದ್ಯ 22 ಮುಂಚೂಣಿ ಡೊಮೈನ್‌ ನೇಮ್‌ಗಳನ್ನು 250ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲಾಗುತ್ತದೆ. ಆಯಾ ರಾಷ್ಟ್ರಗಳಿಗೆ ಸಂಬಂಧಿಸಿದ ಡಾಟ್ ಯುಕೆ, ಡಾಟ್ ಇನ್, ಡಾಟ್ ಡೆ, ಡಾಟ್ ಜಿಒವಿ ಎನ್ನುವ ಹೆಸರುಗಳೂ ಅಸ್ತಿತ್ವದಲ್ಲಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023