Drop


Friday, May 29, 2015

ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಫರ್ಧೆ ಟೈ ನಲ್ಲಿ ಅಂತ್ಯ (ಯು ಎಸ್ ಎ)


Posted by: Madhusoodhan Hegde
| Fri, May 29, 2015, 15:49 [IST]
ವಾಷಿಂಗ್ ಟನ್, ಮೇ 29: ರಾಷ್ಟ್ರೀಯ
ಸ್ಪೆಲ್ಲಿಂಗ್ ಬೀ ಸ್ಫರ್ಧೆ ಟೈ ನಲ್ಲಿ ಅಂತ್ಯವಾಗಿದೆ.
ಇಂಡೋ-ಅಮೇರಿಕನ್ ವನ್ಯಾ ಶಿವಶಂಕರ್
ಮತ್ತು ಗೋಕುಲ್ ವೆಂಕಟಾಚಲಂ
ವಿಜಯಿಯಾಗಿ ಹೊರಹೊಮ್ಮಿದ್ದಾರೆ.
ಸುಮಾರು 54 ವರ್ಷದ ನಂತರ ಕಳೆದ ವರ್ಷ(2014)
ರಲ್ಲಿ ಸ್ಪೆಲ್ಲಿಂಗ್ ಬೀ ಟೈ ನಲ್ಲಿ
ಅಂತ್ಯವಾಗಿತ್ತು. ಈ ಸಾರಿಯೂ ಇಬ್ಬರು
ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.
ಸಹೋದರಿಯರ ಸಾಧನೆ
ಈ ಬಾರಿ ಪ್ರಶಸ್ತಿ ಪಡೆದುಕೊಂಡ ವನ್ಯಾ
ಶಿವಶಂಕರ್(13) ಅಕ್ಕ ಕಾವ್ಯಾ 2009ರಲ್ಲಿ
ಸ್ಪೆಲ್ಲಿಂಗ್ ಬೀ ವಿಜೇತರಾಗಿದ್ದರು. ಕಾನ್ ಸಾಸ್
ನಿವಾಸಿಯಾಗಿರುವ ವನ್ಯಾ ಅಕ್ಕನ
ಸಾಧನೆಯನ್ನು ಸರಿಗಟ್ಟಿದ್ದಾಳೆ.
14 ವರ್ಷದ ವೆಂಕಾಟಾಚಲಂ ಸಾಧನೆ
ಅಮೆರಿಕದ ಚೆಸ್ಟರ್ ಫೀಲ್ಡ್ ನಿವಾಸಿ ಗೋಕುಲ್
ವೆಂಕಟಾಚಲಂ ಅವರಿಗೂ ಇದು ಕೊನೆಯ
ಅವಕಾಶವಾಗಿತ್ತು. ಇಬ್ಬರು ಸ್ಫರ್ಧಾಳುಗಳು
ಐದನೇ ಬಾರಿ ಸ್ಪೆಲ್ಲಿಂಗ್ ಬೀ ನಲ್ಲಿ
ಭಾಗಿಯಾಗಿದ್ದರು.
ವನ್ಯಾ ಶಿವಕುಮಾರ್ ತನ್ನ ಗೆಲುವನ್ನು ಆಕೆಯ
ಅಜ್ಜಿಗೆ ಅರ್ಪಿಸಿದ್ದಾಳೆ. ಕಠಿಣ ಪರಿಶ್ರಮ ಈ ಸಾಧನೆಗೆ
ಕಾರಣವಾಯಿತು ಎಂದು ವನ್ಯಾ
ಹೇಳುತ್ತಾರೆ. ಕೊನೆಯ ಸುತ್ತು ಎಂದು
ನಾನು ಮೊದಲು ಸ್ವಲ್ಪ ಆತ್ಮವಿಶ್ವಾಸ
ಕಳೆದಯಕೊಂಡಿದ್ದೆ. ಆದರೆ ನಂತರ ತುರುಸಿನಿಂದ
ಭಾಗವಹಿಸಿದೆ ಎಂದು ಗೋಕುಲ್ ಹೇಳಿದ್ದಾರೆ.
ಅಂತಿಮ ಸುತ್ತಿನಲ್ಲಿ ವನ್ಯಾ ಮತ್ತು ಗೋಕುಲ್
ನಡುವೆ 10 ಸುತ್ತುಗಳು ನಡೆದವು. ಆದರೆ
ಅಂತಿವಾಗಿ ಒಂದೊಂದು ಶಬ್ದದ ಅರ್ಥ ವಿವರಣೆ
ನೀಡಲು ಸಾಧ್ಯವಾಗದೇ ಪ್ರಶಸ್ತಿ
ಹಂಚಿಕೊಂಡರು. 14 ವರ್ಷದ ಕೋಲೆ ಶಫಿರ್
ರಾಯ್ ನಂತರದ ಪ್ರಶಸ್ತಿ ಪಡೆದುಕೊಂಡರು.