Drop


Tuesday, May 26, 2015

ಕಿಯೋನಿಕ್ಸ್ - ಎನ್ಇಸಿ ಜತೆ ದೇಶದ ಪ್ರಥಮ ಸೈಬರ್ ತರಬೇತಿ ಕೇಂದ್ರ


Published 26-May-2015 14:14 IST
ಮಂಗಳೂರು: ರಾಜ್ಯದ ಕಿಯೋನಿಕ್ಸ್ ಹಾಗೂ ಜಪಾನಿನ ಎನ್ಇಸಿ
ಸಂಸ್ಥೆಗಳ ಸಹಭಾಗಿತ್ವದಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆ
ಬೆಂಗಳೂರು ಮತ್ತು ಮಂಗಳೂರಿನಲ್ಲಿ ಸೈಬರ್ ತರಬೇತಿ
ಕೇಂದ್ರವನ್ನು ಪ್ರಾರಂಭಿಸಲಿದೆ.
ಈ ಕುರಿತಂತೆ ನಗರದ ಕೊಟ್ಟಾರದಲ್ಲಿರುವ ಕಿಯೋನಿಕ್ಸ್
ಸಂಸ್ಥೆಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ
ಕಿಯೋನಿಕ್ಸ್ ಅಧ್ಯಕ್ಷ ಯು. ಬಿ. ವೆಂಕಟೇಶ್ ಮಾಹಿತಿ
ನೀಡಿದ್ದಾರೆ.
ಕಿಯೋನಿಕ್ಸ್ ಹಾಗೂ ಜಪಾನ್ನ ನ್ಯಾಶನಲ್ ಎಲೆಕ್ಟ್ರಾನಿಕ್
ಕಾರ್ಪೊರೇಶನ್ ಜತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ
ಪ್ರಾಥಮಿಕ ಹಂತದ ಮಾತುಕತೆ ನಡೆದಿದ್ದು ಮುಂದಿನ 3
ತಿಂಗಳಲ್ಲಿ ಸೈಬರ್ ತರಬೇತಿ ಕೇಂದ್ರ
ಆರಂಭಿಸಲಾಗುವುದು. ನಂತರ ದೇಶದ ಇತರ ರಾಜ್ಯಗಳಿಗೂ
ವಿಸ್ತರಿಸುವುದಾಗಿ ತಿಳಿಸಿದ್ದಾರೆ.
ಅಲ್ಲದೇ ನಗರದ ಎ.ಜೆ. ಮಂಗಳೂರಿನ ಎ.ಜೆ. ಆಸ್ಪತ್ರೆ
ಹಿಂಭಾಗದಲ್ಲಿರುವ ಕಿಯೋನಿಕ್ಸ್ ಹೊಂದಿರುವ
ಐದು ಎಕರೆ ಜಮೀನಿನಲ್ಲಿ ಮೂರು ಎಕರೆಯಲ್ಲಿ ಐಟಿ
ಪಾರ್ಕ್, ಒಂದೂವರೆ ಎಕರೆ ಪ್ರದೇಶದಲ್ಲಿ ಎಸ್ಟಿಪಿಐ ಪಾರ್ಕ್ಗಳನ್ನು
ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು ಎಂದರು.
ಈ ಸಂದರ್ಭ ಕಿಯೋನಿಕ್ಸ್ ಮಂಗಳೂರು ಕೇಂದ್ರದ
ಮ್ಯಾನೇಜರ್ ಸದಾನಂದ, ಸುಧಾಕರ ನಾಯಕ್,
ಪ್ರವೀಣ್ಚಂದ್ರ, ಮತ್ತಿತರ ಪ್ರಮುಖರು
ಉಪಸ್ಥಿತರಿದ್ದರು