ಐಬಿಪಿಎಸ್ ಆಯ್ಕೆಯಲ್ಲಿ ಕನ್ನಡಿಗರಿಗೆ ಅನ್ಯಾಯ


ಐಬಿಪಿಎಸ್ ಸಂದರ್ಶನ ವಿಭಾಗದಲ್ಲಿ ಹಣಕಾಸಿನ ಲಾಬಿ: ನೊಂದ ಅಭ್ಯರ್ಥಿPublished: 11 May 2015 03:22 PM IST | Updated: 11 May 2015 03:33 PM ISTಐಬಿಪಿಎಸ್ ಸಂದರ್ಶನ ವಿಭಾಗದಲ್ಲಿ ಅವ್ಯವಹಾರ ನಡೆದಿದೆ ಎಂದು ಪತ್ರಿಕಾಗೋಷ್ಠಿ ನಡೆಸಿದ ನೊಂದ ಅಭ್ಯರ್ಥಿ ಧನರಾಜು, ವಿರೇಶ್
ಬೆಂಗಳೂರು: ಸರಕಾರಿ ಬ್ಯಾಂಕ್‌ಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡುವ ಸಂಸ್ಥೆಯಾದ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (ಐಬಿಪಿಎಸ್) ಸಮಿತಿ ರಾಜ್ಯದ ಅಭ್ಯರ್ಥಿಗಳನ್ನು ಕಡೆಗಣಿಸಿದೆ.
ಐಬಿಪಿಎಸ್ ಸಂದರ್ಶನ ವಿಭಾಗದಲ್ಲಿ ಲಾಭಿ ನಡೆದಿದೆ. ಲಿಖಿತ ಪರೀಕ್ಷೆ ಹೊರ ರಾಜ್ಯದ ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕವನ್ನು ನಾವು ಪಡೆದಿದ್ದರೂ, ಸಂದರ್ಶನದಲ್ಲಿ ನಮಗೆ ಉದ್ದೇಶಕ ಪೂರ್ವಕವಾಗಿ ಕಡಿಮೆ ಅಂಕಗಳನ್ನು ನೀಡಿ ಐಬಿಪಿಎಸ್ ಸಂದರ್ಶನ ವಿಭಾಗ ಅಕ್ರಮವೆಸಗಿದೆ ಎಂದು ನೊಂದ ಅಭ್ಯರ್ಥಿ ಧನರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 2014 ರಲ್ಲಿ ಕ್ಲರಿಕಲ್ 1990 ಹುದ್ದೆಗಳಿಗಾಗಿ ಐಬಿಪಿಎಸ್ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 1200ಕ್ಕಿಂತ ಹೆಚ್ಚು ಆಂಧ್ರಪ್ರದೇಶ ಹಾಗೂ ತೆಲಂಗಾಣದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯದ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಅಭ್ಯರ್ಥಿಗಳು ನಮಗಿಂತಲೂ ಸಾಕಷ್ಟು ಅಂಕಗಳ ಅಂತರ ಹೊಂದಿದ್ದಾರೆ. ಆದರೆ, ಸಂದರ್ಶನ ವೇಳೆ ಹಣಕಾಸು ಲಾಭಿ ನಡೆಸಿ ಅವರಿಗೆ ಹೆಚ್ಚು ಅಂಕಗಳನ್ನು ನೀಡಿ, ನಮ್ಮ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂದರ್ಶನ ಸಮಯದಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ ಕಡಿಮೆ ಅಂಕ ನೀಡಿರುವುದಲ್ಲದೇ, ಇನ್ನೂ ಕೆಲವು ಅಭ್ಯರ್ಥಿಗಳನ್ನು ಅನರ್ಹಗೊಳಿಸಿದೆ. ಇದರಿಂದ ನಮ್ಮ ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯಾವಾಗುತ್ತಿದೆ. ಕೂಡಲೇ ಈ ಕುರಿತು ಕ್ರಮ ಸರ್ಕಾರ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023