ಶಶಿ ಕಪೂರ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

:-

ಬಾಲಿವುಡ್‌ನ ಹಿರಿಯ ನಟ, ನಿರ್ಮಾಪಕ ಶಶಿ ಕಪೂರ್ ಅವರಿಗೆ ಇಂದು  2014ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 2011ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ಪಡೆದಿದ್ದರು. 

ಮುಂಬೈನ ಪೃಥ್ವಿ ಟಾಕೀಸ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಹಿರಿಯ ನಟನಿಗೆ ಪ್ರಶಸ್ತಿಯನ್ನು ನೀಡಿದರು.

ಪ್ರಶಸ್ತಿಯು 10 ಲಕ್ಷ ರೂಪಾಯಿ ನಗದು ಹಾಗೂ ಪದಕವನ್ನು ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಗ್ ಬಿ ಅಮಿತಾಬ್‌, ರೇಖಾ, ಹೇಮಾಮಾಲಿನಿ, ಜಯಪ್ರದಾ, ರಣ್‌ಬೀರ್‌ ಕಪೂರ್‌, ಸೈಫ್‌ ಅಲಿಖಾನ್‌, ಕರಿಷ್ಮಾ, ಶಬಾನಾ ಅಜ್ಮಿ, ನಟಿ ಜಿನತ್‌ ಅಮಾನ್‌, ಕಪೂರ್‌ ಕುಟುಂಬದ ಬಹುತೇಕ ಸದಸ್ಯರು ಸೇರಿದಂತೆ ಬಾಲಿವುಡ್‌‌ನ ಹಿರಿಯ, ಕಿರಿಯ ದಿಗ್ಗಜರು ಶಶಿಕಪೂರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಮೇ 3ರಂದು ದೆಹಲಿಯಲ್ಲಿ ನಡೆದ 62ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಶಿ ಕಪೂರ್‌ ಅವರಿಗೆ ಈ ಪ್ರಶಸ್ತಿ ನೀಡಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅವರು ದೆಹಲಿಗೆ ತೆರಳಲು ಸಾಧ್ಯವಾಗದಿದ್ದುದರಿಂದ ಇಂದು ಮುಂಬೈನ ಪೃಥ್ವಿ ಚಿತ್ರಮಂದಿರದಲ್ಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಳೆದ ನಾಲ್ಕು ದಶಕಗಳಿಂದ ಹಿಂದಿ ಚಿತ್ರರಂಗಕ್ಕೆ ಅನುಪಮ ಕೊಡುಗೆ ಸಲ್ಲಿಸುತ್ತಾ ಬಂದಿರುವ 77 ವರ್ಷದ ಶಶಿ ಕಪೂರ್‌ ಅವರಿಗೆ ನೀಡಲಾಗಿರುವ ಈ ಉನ್ನತ ಪ್ರಶಸ್ತಿ 10 ಲಕ್ಷ ರೂ. ನಗದು ಮತ್ತು ಸ್ವರ್ಣ ಕಮಲದ ಪದಕವನ್ನೂ ಒಳಗೊಂಡಿದೆ.

ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಚಿತ್ರ ಸಾಧಕರಿಗೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕಪೂರ್ ಕುಟುಂಬದಲ್ಲಿ ಈ ಪುರಸ್ಕಾರಕ್ಕೆ ಪಾತ್ರರಾದವರಲ್ಲಿ ಶಶಿ ಮೂರನೆಯವರು. ಅವರ ತಂದೆ ಪೃಥ್ವಿರಾಜ್ ಕಪೂರ್, ಸಹೋದರ ರಾಜ್ ಕಪೂರ್ ಅವರಿಗೂ ಫಾಲ್ಕೆ ಗೌರವ ಸಂದಿತ್ತು.

'ಜಬ್ ಜಬ್ ಫೂಲ್ ಕಿಲೆ', 'ದೀವಾರ್', ''ನ್ಯೂ ಡೆಲ್ಲಿ ಟೈಮ್ಸ್ ' , 'ಕಾಲಪತ್ಥರ್', 'ತ್ರಿಶೂಲ್' ಶಶಿ ಅವರು ಅಭಿನಯಿಸಿದ ಕೆಲ ಜನಪ್ರಿಯ ಸಿನಿಮಾಗಳಾಗಿವೆ. 

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಶಶಿ ಕಪೂರ್,  ನಿಯಮಿತವಾಗಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದು, ಗಾಲಿ ಕುರ್ಚಿಯನ್ನು ಆಶ್ರಯಿಸಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023