Drop


Saturday, May 2, 2015

"ಸಡಕ್ ಚಾಸ್" ್ಕಿರುಚಿತ್ರ ಕಯಾನ್ ಚಲನಚಿತ್ರೋತ್ಸವಕ್ಕೆ ಆಯ್ಕೆ

ಮೈಸೂರಿನ ಯುವ ನಿರ್ದೇಶಕಿಯ ಕಿರುಚಿತ್ರ ಕಾನ್ಸ್ ಚಿತ್ರೋತ್ವಕ್ಕೆ ಆಯ್ಕೆ

Anvita Sudarshan
ಅನ್ವಿತಾ ಸುದರ್ಶನ್
ಮೈಸೂರಿನ ಯುವ ಚಿತ್ರ ನಿರ್ದೇಶಕಿ ಅನ್ವಿತಾ ಸುದರ್ಶನ್ ಅವರ ಕಿರುಚಿತ್ರ 'ಸಡಕ್ ಚಾಸ್‌' ಫ್ರಾನ್ಸ್‌ನ ಕಾನ್ಸ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಮೇ 13ರಿಂದ ಮೇ 24ರವರೆಗೆ ನಡೆಯುವ ಫ್ರಾನ್ಸ್‌ನ ಕಾನ್ಸ್ ಚಿತ್ರೋತ್ಸವದಲ್ಲಿ ಈ ಕಿರುಚಿತ್ರ ಪ್ರದರ್ಶನಗೊಳ್ಳಲಿದೆ. ನ್ಯೂಯಾರ್ಕ್ ಚಿತ್ರ ಅಕಾಡೆಮಿಯಿಂದ ಚಲನಚಿತ್ರ ತಯಾರಿಕೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅನ್ವಿತಾ ಅವರು ಈ ಕಿರುಚಿತ್ರದ ನಿರ್ದೇಶನವಷ್ಟೆ ಅಲ್ಲದೆ, ಇದರ ಕಥೆ, ಚಿತ್ರಕಥೆ ಮತ್ತು ಎಡಿಟಿಂಗ್ ಕೂಡಾ ತಾವೇ ಮಾಡಿದ್ದಾರೆ.

ಮುಂಬೈನ ನೊಮಾಡ್ಸ್ ಚಿತ್ರಸಂಸ್ಥೆ ಕಾನ್ಸ್ ಚಿತ್ರೋತ್ಸವದಲ್ಲಿ ಆಯ್ಕೆಗೊಂಡಿರುವ ಈ ಕಿರುಚಿತ್ರದ ನಿರ್ಮಾಪಕರು. ಮುಂಬೈನ ಬಂಡವಾಳಶಾಹಿ ಜಗತ್ತಿನಲ್ಲಿ ವಿದ್ಯಾವಂತ ನಿರುದ್ಯೋಗಿಯೊಬ್ಬ ಭಿಕ್ಷೆ ಬೇಡುವುದು ಈ ಚಿತ್ರದ ವಿಡಂಬನಾತ್ಮಕ ಕಥಾ ಹಿನ್ನೆಲೆ. ಈ ಚಿತ್ರವನ್ನು ಹಿಂದಿ ಭಾಷೆಯಲ್ಲಿ ತಯಾರಿಸಲಾಗಿದ್ದು, ಇಂಗ್ಲಿಷ್ ಭಾಷೆಯ ಉಪಶೀರ್ಷಿಕೆ ಒದಗಿಸಲಾಗಿದೆ.

ಅನ್ವಿತಾ ಅವರು ಇದುವರೆಗೆ ಆರು ಕಿರುಚಿತ್ರಗಳನ್ನು ಹೊರತಂದಿದ್ದಾರೆ. 2014ರಲ್ಲಿ ಲಾಸ್ ಎಂಜಲೀಸ್‌ನ ವಾರ್ನರ್ ಬ್ರದರ್ಸ್ ಚಿತ್ರಮಂದರಿದಲ್ಲಿ ಕೂಡ ಇವರ ಕಿರುಚಿತ್ರವೊಂದು ಪ್ರದರ್ಶನಗೊಂಡಿತ್ತು.