Friday, May 8, 2015

ಬ್ರಿಟಿಷ್ ಪ್ರಧಾನಿಯಾಗಿ ಪುನರಾಯ್ಕೆಯಾದ:- ಡೇವಿಡ್ ಕ್ಯಾಮರಾನ್

ಬ್ರಿಟನ್‌ ಚುನಾವಣೆ: ಕ್ಯಾಮೆರಾನ್‌ಗೆ ಮತ್ತೆ ಗೆಲುವು

ಲಂಡನ್‌ (ಪಿಟಿಐ); ಬ್ರಿಟನ್‌ ಸಂಸತ್ತಿಗೆ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಬಿಬಿಸಿ ಸುದ್ದಿ ವಾಹಿನಿ ವರದಿ ಮಾಡಿದೆ.
ಡೇವಿಡ್‌ ಕ್ಯಾಮೆರಾನ್‌ ಅವರು ಪ್ರಧಾನಿಯಾಗಿ ಮತ್ತೆ ಐದು ವರ್ಷಗಳ ಕಾಲ ಅಧಿಕಾರ ನಡೆಸಲಿದ್ದಾರೆ.
ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷ ಮತ್ತು ಕನ್ಸರ್ವೇಟಿವ್‌ ಪಕ್ಷದ  ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು.  
650 ಕ್ಷೇತ್ರಗಳ ಪೈಕಿ ಕನ್ಸರ್ವೇಟಿವ್‌ ಪಕ್ಷ 325 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರೆ, ಲೇಬರ್‌ ಪಕ್ಷ 230 ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
323 ಸ್ಥಾನಗಳನ್ನು ಪಡೆದ ಪಕ್ಷ ಕೆಳ ಮನೆಯಲ್ಲಿ ಅಧಿಕಾರಕ್ಕೆ ಬರಲಿದೆ. 6.15 ಲಕ್ಷ ಭಾರತ ಮೂಲದ ಮತದಾರರು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ