Drop


Sunday, May 17, 2015

ಹಸ್ತಪ್ರತಿ ಕೊಟ್ಟು ಕುದುರೆ ಪಡೆದ ನರೇಂದ್ರ ಮೋದಿ.

ಹಸ್ತಪ್ರತಿ ಕೊಟ್ಟು ಕುದುರೆ ಪಡೆದ ನರೇಂದ್ರ ಮೋದಿ.

ಉಲಾನ್ ಬಟರ್, ಮೇ.17: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಂಗೋಲಿಯಾದ ಅಧ್ಯಕ್ಷ ತ್ಸಖಿಯಾಗಿನ್ ಎಲ್ಬೆಗ್ದೊರ್ಜ್ ಅವರಿಗೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. 13ನೇ ಶತಮಾನದ ಹಸ್ತಪ್ರತಿಯನ್ನು ಉಡುಗೊರೆ ನೀಡಿದ ಮೋದಿ ಅವರಿಗೆ ಮುದ್ದಾದ ಕುದುರೆ ಪ್ರತಿಯಾಗಿ ಸಿಕ್ಕಿದೆ.

13ನೇ ಶತಮಾನದ ಮಂಗೋಲ್ ಚರಿತ್ರೆ ಸಾರುವ ಹಸ್ತಪ್ರತಿ ರಾಮಪುರದ ರಾಜಾ ಗ್ರಂಥಾಲಯದಿಂದ ಪಡೆಯಲಾಗಿದೆ. 80ಕ್ಕೂ ಅಧಿಕ ಪುಟ್ಟ ದೃಷ್ಟಾಂತಗಳನ್ನು ಒಳಗೊಂಡ ಅಮೂಲ್ಯ ರಚನೆ ಇದಾಗಿದೆ. ಜಮಾಯಿತ್ ತವಾರಿಖ್ ಎಂದು ಕರೆಯಲಾಗುವ ಈ ಯೋಜನೆ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಮೋದಿ ಅವರು ವಿವರಣೆ ನೀಡಿದ್ದಾರೆ.

ಇದಕ್ಕೆ ಬದಲಾಗಿದೆ ನರೇಂದ್ರ ಮೋದಿ ಅವರಿಗೆ ಮಂಗೋಲಿಯಾ ಸರ್ಕಾರ ಮುದ್ದಾದ ಕುದುರೆಯನ್ನು ಗಿಫ್ಟ್ ಆಗಿ ನೀಡಿದೆ. ಉಲಾನ್ ಬಟರ್ ನಲ್ಲಿ ನಡೆದ ಮಿನಿ ನಾದಾಮ್ ಹಬ್ಬದಲ್ಲಿ ಪಾಲ್ಗೊಂಡ ಮೋದಿ ಆವರು ಮಂಗೋಲಿಯಾ ಸಾಂಪ್ರದಾಯಿಕ ಉಡುಪು ತೊಟ್ಟು ಅಲ್ಲಿನ ಸಂಗೀತವಾದ್ಯಗಳನ್ನು ನುಡಿಸಿದರು.