Follow by Email

Monday, May 18, 2015

ಕಾಲೇಜ್ ಹಾಸ್ಟೆಲ್’ನಲ್ಲಿ ಅಟೆಂಡರ್’ನ ಗುಂಡಿಗೆ ಬಲಿಯಾಗಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ ಗೌತಮಿ ಪ್ರಥಮ ದರ್ಜೆಯಲ್ಲಿ ಪಾಸ್.

ಕಾಲೇಜ್ ಹಾಸ್ಟೆಲ್'ನಲ್ಲಿ ಅಟೆಂಡರ್'ನ ಗುಂಡಿಗೆ ಬಲಿಯಾಗಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ ಗೌತಮಿ ಪ್ರಥಮ ದರ್ಜೆಯಲ್ಲಿ ಪಾಸ್. (PSGadyal Teacher Vijayapur)

ಕಾಲೇಜ್ ಹಾಸ್ಟೆಲ್'ನಲ್ಲಿ ಅಟೆಂಡರ್'ನ ಗುಂಡಿಗೆ ಬಲಿಯಾಗಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ ಗೌತಮಿ ಪ್ರಥಮ ದರ್ಜೆಯಲ್ಲಿ ಪಾಸ್

ಬೆಂಗಳೂರು (ಮೇ 18) : ಇಂದು 2014-15ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಆದರೆ ಇತ್ತೀಚಿಗೆ ಬೆಂಗಳೂರಿನ ಹಾಸ್ಟೆಲ್ ಒಂದರಲ್ಲಿ ನಡೆದಿದ್ದ ಶೂಟ್ ಔಟ್'ನಲ್ಲಿ ಮೃತಪಟ್ಟಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗೌತಮಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾಳೆ. ಪ್ರಗತಿ ಕಾಲೇಜಿನಲ್ಲಿ ಅಟೆಂಡರ್‌'ನಿಂದ ಹತ್ಯೆಯಾಗಿದ್ದ ಗೌತಮಿ, 472 ಅಂಕ ಗಳಿಸಿದ್ದಾಳೆ.

ಮಾರ್ಚ್ 31ರ ರಾತ್ರಿ ವಿದ್ಯಾರ್ಥಿನಿ ಗೌತಮಿಯನ್ನು ಪ್ರಗತಿ ಪಿಯು ಕಾಲೇಜು ಹಾಸ್ಟೆಲ್‌'ಗೆ ನುಗ್ಗಿ ಅದೇ ಕಾಲೇಜಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ಕೊಲೆ ಮಾಡಿದ್ದ. ಆ ನತದೃಷ್ಟ ವಿದ್ಯಾರ್ಥಿನಿ ಗಳಿಸಿರುವ ಅಂಕಗಳು ಹೀಗಿದೆ ನೋಡಿ