ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಯಾವಾಗ? ಮರು ಮೌಲ್ಯಮಾಪನ ಹೇಗೆ?


Posted by: Madhusoodhan Hegde | Tue, May 12, 2015, 17:31 [IST]
ಬೆಂಗಳೂರು, ಮೇ. 12: ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯನ್ನು ಜೂನ್ 15 ರಿಂದ 22 ರವರೆಗೆ ನಡೆಸಲಾಗುವುದು ಎಂದು ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ.
ಎಲ್ಲ ಶಾಲೆಗಳಿಗೆ ಫಲಿತಾಂಶದ ಜತೆಗೆ ಅನುತ್ತೀರ್ಣರಾದ ವಿದ್ಯಾರ್ಥಿಗಳ ರೋಲ್ ನಂಬರ್ ಕಳುಹಿಸಿಕೊಡಲಾಗಿದೆ. ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಮರು ಮೌಲ್ಯಮಾಪನಕ್ಕೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೂ ಸಹ ಫಲಿತಾಂಶಕ್ಕೆ ಕಾಯದೇ ಪೂರಕ ಪರೀಕ್ಷೆ ತೆಗೆದುಕೊಳ್ಳಬಹುದು ಎಂದು ಮಂಡಳಿ ಸ್ಪಷ್ಟವಾಗಿ ತಿಳಿಸಿದೆ. [SSLC ಫಲಿತಾಂಶ: ಉಡುಪಿ ಫಸ್ಟ್, ಗದಗ ಲಾಸ್ಟ್]
ಪೂರಕ ಪರೀಕ್ಷೆ ವಿವರಗಳು
* ನಿಗದಿತ ಶುಲ್ಕದೊಂದಿಗೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ಮೇ 21 ಕೊನೆ ದಿನ
* ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಶುಲ್ಕ ಪಾವತಿ ಮಾಡಬೇಕು
* ಒಂದು ವಿಷಯಕ್ಕೆ 200 ರು.
* ಎರಡು ವಿಷಯಕ್ಕೆ 250
* ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಕ್ಕೆ 315
ಮರು ಮೌಲ್ಯಮಾಪನ ಮತ್ತು ಛಾಯಾ ಪ್ರತಿ ಅರ್ಜಿ ಸಲ್ಲಿಕೆ ವಿವರ
* ಛಾಯಾ ಪ್ರತಿಗಾಗಿ ಅರ್ಜಿ ಸಲ್ಲಿಸಲಿ ಕೊನೆ ದಿನ ಮೇ 22
* ಛಾಯಾ ಪ್ರತಿ ಇಲ್ಲವೇ ಮರು ಮರು ಮೌಲ್ಯಮಾಪನ ಯಾವುದಾದರೂ ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು.
* ಒಂದು ವಿಷಯ ಮರು ಎಣಿಕೆಗೆ-150 ರು
* ಒಂದು ವಿಷಯ ಛಾಯಾಪ್ರತಿಗೆ-300 ರು[ಎಸ್ ಎಸ್ ಎಲ್ ಸಿ ಫಲಿತಾಂಶದ ಹೈಲೈಟ್ಸ್]
* ಮರು ಮೌಲ್ಯಮಾಪನ ಒಂದು ವಿಷಯಕ್ಕೆ - 700 ರು
* ರಾಜ್ಯದ ಎಲ್ಲ ಕರ್ನಾಟಕ 1 ಮತ್ತು ಬೆಂಗಳೂರು 1 ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.
* ಛಾಯಾ ಪ್ರತಿ ಪಡೆದ 7 ದಿನದ ಒಳಗಾಗಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕು

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023