Coming soon!! One SIM with 9 separate mobile Numbers.

ಒಂದೇ ಸಿಮ್‌ ಕಾರ್ಡಿಗೆ 9 ಪ್ರತ್ಯೇಕ ಮೊಬೈಲ್‌ ನಂಬರ್‌!
ಉದಯವಾಣಿ, May 10, 2015, 3:40 AM IST

ನವದೆಹಲಿ: ಒಂದೇ ಮೊಬೈಲ್‌ನಲ್ಲಿ ಎರಡು ಸಿಮ್‌ ಕಾರ್ಡ್‌ ಬಳಸುವುದು, ತನ್ಮೂಲಕ ಎರಡು ಪ್ರತ್ಯೇಕ ಮೊಬೈಲ್‌ ದೂರವಾಣಿ ಸಂಖ್ಯೆಗಳನ್ನು ಉಪಯೋಗಿಸುವುದು ಈಗ ಮಾಮೂಲಿ ಎಂಬಂತಾಗಿದೆ. ಆದರೆ ಒಂದೇ ಸಿಮ್‌ ಕಾರ್ಡ್‌ ಮೂಲಕ ಒಂಬತ್ತು ಪ್ರತ್ಯೇಕ ನಂಬರ್‌ಗಳನ್ನು ಬಳಸುವಂತಾದರೆ....?

ಆ ಕಾಲವಿನ್ನು ದೂರವಿಲ್ಲ. ಬಹುತೇಕ ವರ್ಷಾಂತ್ಯದ ವೇಳೆಗೆ ಇಂತಹ ಸೇವೆಯೊಂದು ಚಾಲನೆ ಪಡೆದುಕೊಳ್ಳುವ ನಿರೀಕ್ಷೆ ಇದೆ.

ಕೆನಡಾ ಮೂಲದ ಮೊಬೈಲ್‌ ಹ್ಯಾಂಡ್‌ಸೆಟ್‌ ತಯಾರಕ ಕಂಪನಿ ಬ್ಲ್ಯಾಕ್‌ಬೆರ್ರಿ ಇಂತಹದ್ದೊಂದು ತಂತ್ರಜ್ಞಾನವನ್ನು ಭಾರತೀಯರಿಗೆ ಪರಿಚಯಿಸಲು ಹೊರಟಿದೆ.

ಈ ಹೊಸ ಸೇವೆಗೆ ಕೇಂದ್ರ ಸರ್ಕಾರದ ಅನುಮತಿ ಕೋರಲಾಗುತ್ತಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಅನುಮತಿ ಬೇಡಲಾಗುತ್ತಿದೆ.

ಇದೇ ವೇಳೆ, ದೇಶೀಯ ಮೊಬೈಲ್‌ ಸೇವಾದಾರ ಕಂಪನಿಗಳ ಜತೆ ಸೇರಿಕೊಂಡು ಇದರ ಪ್ರಾಯೋಗಿಕ ಪರೀಕ್ಷೆಯನ್ನೂ ಆರಂಭಿಸಲಾಗಿದೆ. ವರ್ಷಾಂತ್ಯದ ವೇಳೆಗೆ ವರ್ಚುವಲ್‌ ಸಿಮ್‌ ಸಲ್ಯೂಷನ್‌ಗೆ ಚಾಲನೆ ಸಿಗುವ ಸಾಧ್ಯತೆ ಇದೆ ಎಂದು ಬ್ಲ್ಯಾಕ್‌ಬೆರ್ರಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸುನೀಲ್‌ ಲಲವಾನಿ ತಿಳಿಸಿದ್ದಾರೆ. ಆದರೆ ಯಾವ ಸೇವಾದಾರ ಕಂಪನಿಗಳ ಜತೆ ಒಪ್ಪಂದ ಏರ್ಪಡಲಿದೆ ಎಂಬ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

ಈಗಾಗಲೇ ಈ ಸೇವೆ ಆಫ್ರಿಕಾದ ಕೆಲವು ಭಾಗಗಳಲ್ಲಿ ಈ ಸೇವೆ ಆರಂಭವಾಗಿದೆ. ಯುರೋಪ್‌ ಮತ್ತು ಏಷ್ಯಾ ಪೆಸಿಫಿಕ್‌ ದೇಶಗಳಲ್ಲಿ ಆರಂಭಿಸಲು ಯತ್ನ ನಡೆದಿವೆ ಎಂದು ಅವರು ಹೇಳಿದ್ದಾರೆ.
ಏನಿದು ವರ್ಚುವಲ್‌ ಸಿಮ್‌?:

ಈ ಹೊಸ ಸೇವೆಯ ಹೆಸರು ವರ್ಚುವಲ್‌ ಸಿಮ್‌ ಸಲ್ಯೂಷನ್ಸ್‌. ಇದರಡಿ, ಒಂದೇ ಸಿಮ್‌ಕಾರ್ಡ್‌ ಬಳಸುವ ಮೂಲಕ ಒಂಬತ್ತು ಪ್ರತ್ಯೇಕ ಮೊಬೈಲ್‌ ನಂಬರ್‌ಗಳನ್ನು ಹೊಂದಬಹುದಾಗಿದೆ. ಇದಕ್ಕೆ ಹೊಸ ರೀತಿಯ ಸಿಮ್‌ಕಾರ್ಡ್‌ಗಳು ಬೇಕಾಗುತ್ತವೆ.

ವರ್ಚುವಲ್‌ ಸಿಮ್‌ ಸಲ್ಯೂಷನ್ಸ್‌ನಡಿ ಒಂದು ಸಿಮ್‌ನಲ್ಲೇ ವೈಯಕ್ತಿಕ, ವ್ಯಾವಹಾರಿಕ ಉದ್ದೇಶ ಸೇರಿದಂತೆ 9 ಪ್ರತ್ಯೇಕ ನಂಬರ್‌ಗಳನ್ನು ಹೊಂದಬಹುದು. ಕರೆ, ಇಂಟರ್ನೆಟ್‌, ಎಸ್‌ಎಂಎಸ್‌ಗಳಿಗಾಗಿ ಪ್ರತ್ಯೇಕ ಸಿಮ್‌ ಬಳಸಬಹುದು. ಪ್ರತಿ ನಂಬರಿಗೂ ಪ್ರತ್ಯೇಕ ಬಿಲ್‌ ಬರುತ್ತದೆ. ಇದರಿಂದ ಹಲವಾರು ಸಿಮ್‌ ಅಥವಾ ಫೋನ್‌ಗಳನ್ನು ಹೊಂದುವುದು ತಪ್ಪಲಿದೆ ಎಂದು ಬ್ಲ್ಯಾಕ್‌ಬೆರ್ರಿ ಅಧಿಕಾರಿಗಳು ವಿವರಿಸಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023