Drop


Wednesday, May 6, 2015

Famous director admitted to hospital due to HEART ATTACK ..

ಮಣಿರತ್ನಂ ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು 

Maniratnam
ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಲಘು ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಲಘು ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಮಣಿರತ್ನಂ ಕುಸಿದು ಬಿದ್ದರು ಎನ್ನಲಾಗಿದ್ದು ತಕ್ಷಣ ಅವರನ್ನು ದೆಹಲಿಯ ಇಂದ್ರಪ್ರಸ್ಥ ಬಳಿಯ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಮಣಿರತ್ನಂ ಆರೋಗ್ಯ ಸ್ಥಿತಿ ಕುರಿತು ಕುಟುಂಬ ವರ್ಗ ಅಥವಾ ವೈದ್ಯರು ಇಲ್ಲಿಯವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಚಿತ್ರನಟಿ ಸುಹಾಸಿನಿ ಅವರ ಪತಿಯಾಗಿರುವ ಮಣಿರತ್ನಂ ಕನ್ನಡ ಸಿನಿಮಾ ಪಲ್ಲವಿ ಅನುಪಲ್ಲವಿ ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು  ಮೌನರಾಗಂ, ನಾಯಗನ್, ತಳಪತಿ, ರೋಜಾ ಸೇರಿ 20ಕ್ಕೂ ಅಧಿಕ ಸಿನಿಮಾ ನಿರ್ದೇಶನ ಮಾಡಿದ್ದಾರೆ.