Drop


Saturday, May 16, 2015

Gandhi study center inaugurated by Modi in Shanghai :-

ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟಿಸಿದ
ಮೋದಿ
ಶಾಂಘೈ: ಚೀನಾದ ಫುಡಾನ್ ವಿಶ್ವವಿದ್ಯಾಲಯದಲ್ಲಿ
ಹೊಸದಾಗಿ ಸ್ಥಾಪಿಸಲಾದ ಗಾಂಧಿ ಅಧ್ಯಯನ
ಕೇಂದ್ರವನ್ನು ಪ್ರಧಾನಿ ನರೇಂದ್ರ
ಮೋದಿ ಶನಿವಾರ ಉದ್ಘಾಟಿಸಿ
ವಿದ್ಯಾರ್ಥಿಗಳೊಂದಿಗೆ ಸಂವಾದ
ನಡೆಸಿದರು.
ಪವಿತ್ರ ಸಂದರ್ಭದಲ್ಲಿ ನಿಮ್ಮೊಂದಿಗೆ
ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ
ಅವಕಾಶ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯ. ನಿಜಕ್ಕೂ ಇದು
ನನ್ನಲ್ಲಿ ಖುಷಿಯನ್ನುಂಟುಮಾಡಿದೆ. ಮಹಾತ್ಮಾಗಾಂಧಿ
ಜನಿಸಿದ್ದು ಭಾರತದಲ್ಲಿ. ಅವರು ವಿಶ್ವಕ್ಕೇ ಆದರ್ಶವಾಗಿ ಬೆಳೆದರು.
ಗಾಂಧೀಜಿ ಅವರ ಸಿದ್ಧಾಂತಗಳು ಇಂದಿಗೂ ನಮಗೆ
ದಾರಿ ದೀಪವಾಗಿದೆ. ಅವರೊಬ್ಬ ಯುಗಪುರುಷ
ಎಂದು ಸ್ಮರಿಸಿದರು.