Indian economical development rate willbe 8.1% -UNO reports

ಭಾರತದ ಆರ್ಥಿಕ ಬೆಳವಣಿಗೆ ದರ ಶೇ.8.1: ವಿಶ್ವಸಂಸ್ಥೆ
Published: 15 May 2015 11:16 AM IST

ನವದೆಹಲಿ: ಭಾರತದ ಪಾಲಿಗೊಂದು ಸಿಹಿ ಭವಿಷ್ಯ ನುಡಿ ತೇಲಿಬಂದಿದೆ. ಈ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ.8.1ರಷ್ಟು ಇರಲಿದೆ ಎಂದು ವಿಶ್ವಸಂಸ್ಥೆಯ ಸಮೀಕ್ಷೆ ವರದಿ ತಿಳಿಸಿದೆ. ಮೂಲಸೌಕರ್ಯ ಯೋಜನೆ ಗಳು, ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು ಹಾಗೂ ಇಳಿದಿರುವ ಹಣದುಬ್ಬರದ ನಡುವೆ ಗ್ರಾಹಕರ
ಕೊಳ್ಳುವಿಕೆಯ ಚಟುವಟಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಏರಿಕೆಯಾಗಲಿದೆಯೆಂದು ವಿಶ್ವಸಂಸ್ಥೆ ಅಂದಾಜಿಸಿದೆ. ಐಎಂಎಫ್ ಹಾಗೂ ವರ್ಲ್ಡ್ ಬ್ಯಾಂಕ್ ಕೂಡ ಶೇ.7.5 ಪ್ರಗತಿ ನಿರೀಕ್ಷಿಸಿದ್ದರೆ ಆರ್‍ಬಿಐ ಶೇ.7.8 ಬೆಳವಣಿಗೆಯ ಮುನ್ಸೂಚನೆ ನೀಡಿದೆ.
ವರದಿ ಏನನ್ನುತ್ತೆ?
ಬಂಡವಾಳ ಹೂಡಿಕೆಯಲ್ಲೂ ತೀವ್ರ ಹೆಚ್ಚಳ ನಿರೀಕ್ಷೆ 2015ರಲ್ಲಿ ಶೇ.8.1 ಹೆಚ್ಚಳ 2016ರಲ್ಲಿ ಶೇ8.2 ಏರಿಕೆ ವಿಶ್ವಾಸ ಭಾರತೀಯ ವಿತ್ತ ಸಚಿವಾಲಯ ನೀಡಿರುವ ವಿವರ ಆಧರಿಸಿ
ವಿಶ್ವಸಂಸ್ಥೆ ವರದಿ ಪ್ರಕಟ ಹಣದುಬ್ಬರದಲ್ಲಿ ಇಳಿಕೆ ಕಂಡರೂ ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಚನಾತ್ಮಕ
ಸುಧಾರಣೆಯಲ್ಲಿ ಭಾರಿ ಮುನ್ನಡೆ 120 ಹೊಸ ಬ್ಯಾಂಕ್ ಖಾತೆ ತೆರೆದದ್ದು ಆರ್ಥಿಕ ಪ್ರಗತಿಗೆ ಪೂರಕ ಮೇಕ್ ಇನ್ ಇಂಡಿಯಾ ಯೋಜನೆಯಿಂದ ಕೈಗಾರಿಕಾ ವಲಯದಲ್ಲಿ ಪ್ರಗತಿ
Posted by: Rashmi Kasaragodu| Source: Online Desk

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023