Drop


Saturday, May 2, 2015

ಸಿಎನ್ಆರ್ ರಾವ್ ಮುಡಿಗೆ ಜಪಾನ್ ಅತ್ಯುನ್ನತ ನಾಗರೀಕ ಗೌರವ (PSGadyal)

ಸಿಎನ್ಆರ್ ರಾವ್ ಮುಡಿಗೆ ಜಪಾನ್ ಅತ್ಯುನ್ನತ ನಾಗರೀಕ ಗೌರವ (PSGadyal)

ಬೆಂಗಳೂರು, ಮೇ. 2: ಭಾರತರತ್ನ ವಿಜ್ಞಾನಿ ಸಿಎನ್ ಆರ್ ರಾವ್ ಜಪಾನ್ ದೇಶದ ಅತ್ಯುನ್ನತ ನಾಗರೀಕ ಗೌರವೊಂದಕ್ಕೆ ಪಾತ್ರರಾಗಿದ್ದಾರೆ. ಜಪಾನ್ ಆಡಳಿತ ಇದನ್ನು ದೃಢಪಡಿಸಿದೆ ಎಂದು ಜವಾಹರಲಾಲ್ ನೆಹರು ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ತಿಳಿಸಿದೆ. ಭಾರತ ಸರ್ಕಾರ ರಾವ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದೆ. ಸುಮಾರು 1600 ಕ್ಕೂ ಅಧಿಕ ಸಂಶೋಧನಾ ಪ್ರಭಂದಗಳನ್ನು ಮಂಡಿಸುರುವ ರಾವ್ 50 ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಪ್ರಧಾನ ಮಂತ್ರಿಯವರ ಪ್ರಮುಖ ವೈಜ್ಞಾನಿಕ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಜೂನ್ 30, 1934ರಲ್ಲಿ ಜನಿಸಿದ ಪ್ರೊ.ಸಿ.ಎನ್.ಆರ್. ರಾವ್ ಅವರ ಪೂರ್ಣ ಹೆಸರು ಚಿಂತಾಮಣಿ ನಾಗೇಶ ರಾಮಚಂದ್ರರಾವ್. ರಸಾಯನ ಶಾಸ್ತ್ರ ವಿಷಯದಲ್ಲಿ ಸಾಕಷ್ಟು ಸಂಶೋಧನೆ ಮಾಡಿರುವ ರಾವ್ ಅವರಿಗೆ ವಿವಿಧ ದೇಶಗಳಲ್ಲಿ ಪ್ರೋಫೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.[ಡಾ. ಸಿಎನ್ಆರ್ ರಾವ್ - ಕರ್ನಾಟಕ ವರ್ಷದ ವ್ಯಕ್ತಿ] ಪ್ರಾಧ್ಯಪಕರಾಗಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಆಕ್ಸಫರ್ಡ್, ಕೇಂಬ್ರಿಡ್ಜ್ ಗಳಲ್ಲಿ ರಾವ್ ಉಪನ್ಯಾಸ ನೀಡಿದ್ದಾರೆ. ರಸಾಯನಶಾಸ್ತ್ರ ವಿಷಯಕ್ಕೆ ಸಿ.ಎನ್.ಆರ್.ರಾವ್ ಬಹಳಷ್ಟು ಕೊಡುಗೆ ನೀಡಿದ್ದಾರೆ. ಯು.ಎಸ್.ನ್ಯಾಷನಲ್ ಅಕಾಡಮೆ ಪ್ರಶಸ್ತಿ, ಅಮೆರಿಕಾ ಅಕಾಡಮಿಯ ವಿಜ್ಞಾನಿ ಪ್ರಶಸ್ತಿಯನ್ನು ರಾವ್ ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚೆಗೆ ಬಸವಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.