Record: Criss Gail is the first player to hit 500 sixes in t20 cricket

ಟಿ20ಯಲ್ಲಿ 500 ಸಿಕ್ಸರ್‌ಗಳನ್ನು ಬಾರಿಸಿದ ಪ್ರಥಮ ಆಟಗಾರ ಕ್ರಿಸ್ ಗೇಲ್

ಬೆಂಗಳೂರು, ಗುರುವಾರ, 30 ಏಪ್ರಿಲ್ 2015 (13:54 IST)

ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಫೋಟಕ ಆಟಗಾರ ಎನಿಸಿರುವ ಕ್ರಿಸ್ ಗೇಲ್ ಟಿ20 ವೃತ್ತಿಜೀವನದ 500ನೇ ಸಿಕ್ಸ್ ಬಾರಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಾಧನೆ ಮಾಡಿದ್ದಾರೆ. ಜಮೈಕಾದ ಆಟಗಾರ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಆದಾಗ್ಯೂ  ಬೆಂಗಳೂರಿನಲ್ಲಿ ಸತತ ಮಳೆಯಿಂದ ಪಂದ್ಯವು ಯಾವುದೇ ಫಲಿತಾಂಶ ನೀಡುವಲ್ಲಿ ವಿಫಲಗೊಂಡಿದೆ. 

ಇದು ಗೇಲ್ ಅವರ 201ನೇ ಟಿಟ್ವೆಂಟಿ ಪಂದ್ಯವಾಗಿದೆ.  ಗೇಲ್ ಬಳಿಕ ಅತ್ಯಧಿಕ ಟಿ 20 ಸಿಕ್ಸರುಗಳನ್ನು ಬಾರಿಸಿದ ಎರಡನೇ ಆಟಗಾರ ಕೀರಾನ್ ಪೋಲಾರ್ಡ್ 348 ಸಿಕ್ಸರುಗಳನ್ನು ಬಾರಿಸಿದ್ದಾರೆ.  

 ಗೇಲ್ ಈಗಾಗಲೇ ಐಪಿಎಲ್ ಇತಿಹಾಸದಲ್ಲಿ 200ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.  ಎಡಗೈ ಆಟಗಾರ ಏಕ ದಿನ ಪಂದ್ಯಗಳಲ್ಲಿ ಅತೀ ವೇಗದ ದ್ವಿಶತಕ ಸ್ಕೋರ್ ಮಾಡಿದ ದಾಖಲೆ ನಿರ್ಮಿಸಿದ್ದಾರೆ.  ವಿಶ್ವಕಪ್ ಪೂಲ್ ಬಿ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 138 ಎಸೆತಗಳಲ್ಲಿ ದ್ವಿಶತಕದ ಸಾಧನೆ ಮಾಡಿ ದಾಖಲೆ ಪುಸ್ತಕದಲ್ಲಿ ಸೇರಿದ್ದರು. ಏಕದಿನ ಪಂದ್ಯಗಳ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್, ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ನಂತರ ದ್ವಿಶತಕ ಬಾರಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಅವರ ದ್ವಿಶತಕದಲ್ಲಿ 10 ಬೌಂಡರಿಗಳು ಮತ್ತು 16 ಸಿಕ್ಸರ್‌ಗಳಿದ್ದವು.  

 ಗೇಲ್ 269 ಏಕದಿನ ಪಂದ್ಯಗಳಲ್ಲಿ ಸರಾಸರಿ 37.33 ರೊಂದಿಗೆ 9221 ರನ್ ಸ್ಕೋರ್ ಮಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ  ಅತೀ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ  ಮೂರನೇ ಸ್ಥಾನದಲ್ಲಿದ್ದು,  ಪಟ್ಟಿಯಲ್ಲಿ ಟಾಪರ್ ಶಾಹಿದ್ ಅಫ್ರಿದಿ(351) ಮತ್ತು ಶ್ರೀಲಂಕಾ ಖ್ಯಾತ ಆಟಗಾರ ಜಯಸೂರ್ಯ(270) ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನದಲ್ಲಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023