The Indian Army on Tuesday scripted a major milestone when it inducted the home-grown surface-to-air missile system Akash

ಭಾರತೀಯ ಸೇನೆಗೆ ಬಲ ತಂದ ಸ್ವದೇಶಿ ಆಕಾಶ್ ಕ್ಷಿಪಣಿ Written by: ಅನಂತಕೃಷ್ಣನ್| Tue, May 5, 2015, 18:09 [IST] ನವದೆಹಲಿ, ಮೇ 5: ನೆಲದಿಂದ ಆಗಸದೆಡೆಗೆ ಚಿಮ್ಮುವ ಭಾರತದ ಮಹತ್ವಾಕಾಂಕ್ಷೆಯ ಆಕಾಶ್ ಕ್ಷಿಪಣಿ ಭಾರತೀಯ ಸೇನೆಗೆ ಮಂಗಳವಾರ ಸೇರ್ಪಡೆಗೊಂಡಿದೆ. ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿಗೆ ಅಗತ್ಯ ತಂತ್ರಜ್ಞಾನವನ್ನು ಡಿಆರ್ ಡಿಒ ಒದಗಿಸಿದೆ. ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಡ್ರೋಣ್‌ಗಳು ಮತ್ತು ಮಾನವ ರಹಿತ ವಾಯುದಾಳಿಗಳನ್ನು ಸಮರ್ಥವಾಗಿ ಎದುರಿಸಿ ಅವುಗಳನ್ನು ನಾಶ ಮಾಡಬಲ್ಲ ಸಾಮರ್ಥ್ಯ ಆಕಾಶ್ ಕ್ಷಿಪಣಿ ಹೊಂದಿದೆ. ಇನ್ನೂ ಎರಡು ಕ್ಷಿಪಣಿಗಳನ್ನು ಬರುವ ಎರಡು ವರ್ಷಗಳಲ್ಲಿ ಸಿದ್ಧಪಡಿಸಿ ಸೇನೆಗೆ ಸೇರ್ಪಡೆ ಮಾಡಲಾಗುವುದು ಎಂದು ಡಿಆರ್‌ಡಿಒ ವಿಜ್ಞಾನಿಗಳು ತಿಳಿಸಿದ್ದಾರೆ. ಆಕಾಶ್ ಕ್ಷಿಪಣಿ ಸೇರ್ಪಡೆಯಿಂದ ಭಾರತೀಯ ಸೇನಾಪಡೆಯ ಶಕ್ತಿ ಗಣನೀಯವಾಗಿ ಹೆಚ್ಚಿದಂತಾಗಿದೆ ಎಂದು ಸೇನೆಯ ಡೈರೆಕ್ಟರ್ ಜನರಲ್ (ಆರ್ಮಿ ಏರ್ ಡಿಫೆನ್ಸ್) ಲೆ.ಜ.ವಿ.ಕೆ.ಸಕ್ಸೇನಾ ಹೇಳಿದ್ದಾರೆ ಆಕಾಶ್ ಕ್ಷಿಪಣಿ ವ್ಯವಸ್ಥೆ ವಿಶೇಷಗಳು: * 25ಕಿ.ಮೀ. ವ್ಯಾಪ್ತಿಯಲ್ಲಿ 20 ಕಿ.ಮೀ. ಎತ್ತರಕ್ಕೆ ಹಾರಿ ವೈರಿ ವಿಮಾನಗಳನ್ನು ನೆಲಕ್ಕುರುಳಿಸುವ ಸಾಮರ್ಥ್ಯ ಹೊಂದಿದೆ. * ಸುಮಾರು 32 ವರ್ಷಗಳ ಸುದೀರ್ಘ ಅವಧಿಯ ಬಳಿಕ ಸೇನೆಗೆ ಸೇರ್ಪಡೆ ಮಾಡಲಾಗಿದೆ. * ಎರಡು ಮೂರು ಟಾರ್ಗೆಟ್ ಗಳನ್ನು ಏಕ ಕಾಲಕ್ಕೆ ನಿಭಾಯಿಸಬಲ್ಲ ವ್ಯವಸ್ಥೆ ಹೊಂದಿದೆ. * ಸುಸಜ್ಜಿತ ರೆಡಾರ್ ವ್ಯವಸ್ಥೆ ಜೊತೆಗೆ ಆಕಾಶ್ ಕ್ಷಿಪಣಿ ನಿರ್ವಹಿಸುವುದರಿಂದ ನಿಖರ ಗುರಿ ತಲುಪುತ್ತದೆ. * ಡಿಆರ್ ಡಿಒ ನಿಂದ ವಿನ್ಯಾಸ ಹಾಗೂ ಅಭಿವೃದ್ಧಿ ಹೊಂದಿದ ವ್ಯವಸ್ಥೆ ಇದಾಗಿದೆ. * ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸೇನೆಯ ಅಗತ್ಯಕ್ಕೆ ತಕ್ಕಂತೆ ಆಕಾಶ್ ಕ್ಷಿಪಣಿ ರೂಪಿಸಿದೆ. * ಬಿಇಎಲ್, ಇಸಿಐಎಲ್, ಎಚ್ಎಎಲ್, ಟಾಟಾ ಪವರ್ ಎಸ್ ಇಡಿ ಹಾಗೂ ಎಲ್ ಅಂಡ್ ಟಿ ಕೂಡಾ ಕ್ಷಿಪಣಿ ನಿರ್ಮಾಣದಲ್ಲಿ ಕೈ ಜೋಡಿಸಿವೆ. * ಒಟ್ಟಾರೆ ಭಾರತದ 61 ಪಬ್ಲಿಕ್ ಹಾಗೂ ಪ್ರೈವೇಟ್ ವಲಯದ ಸಂಸ್ಥೆಗಳು ಆಕಾಶ್ ಕ್ಷಿಪಣಿ ವ್ಯವಸ್ಥೆ ನಿರ್ಮಿಸುವಲ್ಲಿ ಯಶಸ್ವಿಯಾಗಿವೆ. (ಒನ್ ಇಂಡಿಯಾ ಸುದ್ದಿ)

Read more at: http://kannada.oneindia.com/news/india/indian-army-inducts-home-grown-akash-weapon-system-093592.html

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023