Drop


Wednesday, May 13, 2015

ಭಾರತದ ಪ್ರೊಫೆಸರ್ ಗೆ USA ದ ಶ್ರೇಷ್ಠ ಬೋಧನಾ ಪ್ರಶಸ್ತಿ


ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ರಸಾಯನಶಾಸ್ತ್ರ ಪ್ರೊಫೆಸರ್ ಒಬ್ಬರಿಗೆ ಶ್ರೇಷ್ಠ ಬೋಧನೆಗಾಗಿ ಅಮೆರಿಕ ಯುನಿವರ್ಸಿಟಿ ಆಫ್ ಕರೋಲಿನಾ ನೀಡುವ 2015ರ ಪ್ರಶಸ್ತಿ ಲಭಿಸಿದೆ.

ಮೂಲತಃ ತಮಿಳುನಾಡಿನವರಾದ ಡಾ. ಸಿವನಾದನೆ (ಸಿವ) ಮಾಂಡ್ಜಿನಿ ಅವರು ಬೋಧನೆಯ ಮಹತ್ವವನ್ನು ಎತ್ತಿಹಿಡಿದವರಿಗೆ ನೀಡಲಾಗುವ ವಾರ್ಷಿಕ ಪ್ರಶಸ್ತಿ ಲಭಿಸಿದ್ದು ಅಮೆರಿಕದ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ 17 ಮಂದಿಯಲ್ಲಿ ಅವರೂ ಒಬ್ಬರಾಗಿದ್ದಾರೆ.

ಈ ಪ್ರಶಸ್ತಿಯು ಕಂಚಿನ ಸ್ಮಾರಕದ ಜೊತೆಗೆ 12,500 ಡಾಲರ್ ನಗದು ಬಹುಮಾನವನ್ನು ಒಳಗೊಂಡಿದೆ.

ಪ್ರಶಸ್ತಿಯನ್ನು ಪ್ರಕಟಿಸಿದ ಯುಎನ್ ಸಿ ಪೆಂಬ್ರೋಕ್ ಕುಲಪತಿ ಕೈಲ್ ಆರ್ ಕಾರ್ಟರ್ ಅವರು ಬೋಧನೆ ಬಗೆಗಿನ ಮಾಂಡ್ಜಿನಿ ಅವರ ನಿಷ್ಠೆಯನ್ನು, ತರಗತಿಯಲ್ಲಿ ಪಾಠ ಮಾಡುವಾಗಿನ ಅವರ ಉತ್ಸುಕತೆಯನ್ನು, ವಿದ್ಯಾರ್ಥಿಗಳ ಯಶಸ್ಸಿನ ಕುರಿತ ಅವರ ಬದ್ಧತೆ ಮತ್ತು ಎಂದೂ ಕ್ಯಾಂಪಸ್ ಗೆ ಬರುವುದನ್ನು ತಪ್ಪಿಸದ ಅವರ ನಡೆಯನ್ನು ಶ್ಲಾಘಿಸಿದರು.