ಕನ್ನಡದ ವಿಜ್ಞಾನಿ ಬಾಳಿಗಾಗೆ ರಷ್ಯಾ ದೇಶದ ಪ್ರತಿಷ್ಠಿತ ‘ಗ್ಲೋಬಲ್ ಎನರ್ಜಿ’ ಪ್ರಶಸ್ತಿ


Wed , 06 / 24 / 2015 - 01 :00
ರಷ್ಯಾ ದೇಶದ ಪ್ರತಿಷ್ಠಿತ
'ಗ್ಲೋಬಲ್ ಎನರ್ಜಿ' ಪ್ರಶಸ್ತಿ
ಸೇಂಟ್ ಪೀಟರ್ಸ್ಬರ್ಗ್ ( ಐಎಎನ್ಎಸ್ ) :
ಅಮೆರಿಕದಲ್ಲಿ ನೆಲೆಸಿರುವ ಕರ್ನಾಟಕ
ಮೂಲದ ವಿಜ್ಞಾನಿ ಬಿ . ಜಯಂತ್
ಬಾಳಿಗಾ ಅವರು ರಷ್ಯಾ
ದೇಶವು ತಂತ್ರಜ್ಞಾನ
ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ
ಪ್ರಶಸ್ತಿ ಪಡೆದಿದ್ದಾರೆ .
ರಷ್ಯಾ ನೀಡುವ ಈ ಪ್ರಶಸ್ತಿಯನ್ನು
ನೊಬೆಲ್ ಗೌರವಕ್ಕೆ ಸರಿಸಮಾನವಾಗಿ
ಪರಿಗಣಿಸಲಾಗುತ್ತದೆ . ವಿಜ್ಞಾನ ಮತ್ತು
ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ
ಸಾಧನೆಯನ್ನು ಪರಿಗಣಿಸಿ ಬೆಂಗಳೂರಿನ
ಜಾಲಹಳ್ಳಿಯಲ್ಲಿ ಬೆಳೆದ ಬಾಳಿಗಾ ಅವರಿಗೆ
ಪ್ರತಿಷ್ಠಿತ 'ಗ್ಲೋಬಲ್ ಎನರ್ಜಿ' ಪ್ರಶಸ್ತಿ
ನೀಡಿ ಗೌರವಿಸಿದೆ .
ಬಾಳಿಗಾ ಜತೆ ಜಪಾನ್ ಮೂಲದ
ವಿಜ್ಞಾನಿ ಶುಜಿ ನಕಮುರ ಅವರಿಗೂ ಈ
ಗೌರವ ದೊರೆತಿದೆ . ರಷ್ಯಾ ಅಧ್ಯಕ್ಷ
ವ್ಲಾಡಿಮಿರ್ ಪುಟಿನ್ ಅವರು
ಶುಕ್ರವಾರ ಇಲ್ಲಿ ನಡೆದ
ಸಮಾರಂಭದಲ್ಲಿ ಇಬ್ಬರಿಗೂ ಪ್ರಶಸ್ತಿ
ಪ್ರದಾನ ಮಾಡಿದರು .
ನಾರ್ತ್ ಕೆರೊಲಿನಾ
ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್
ಆಗಿರುವ ಬಾಳಿಗಾ ಅವರು 2011ರಲ್ಲಿ
ಅಮೆರಿಕ ಸರ್ಕಾರದ ರಾಷ್ಟ್ರೀಯ
ವಿಜ್ಞಾನ ಪದಕ ಪಡೆದಿದ್ದರು . ಈ
ಪದಕವನ್ನು ಅಮೆರಿಕ ಅಧ್ಯಕ್ಷ ಬರಾಕ್
ಒಬಾಮ ಪ್ರಧಾನ ಮಾಡಿದ್ದರು .
'ಸೆಮಿಕಾಂಡಕ್ಟರ್ ಕ್ಷೇತ್ರದಲ್ಲಿ
ಕ್ರಾಂತಿಗೆ ಕಾರಣರಾದ ಎಂಟು
ಹೀರೊಗಳಲ್ಲಿ ಒಬ್ಬರು ' ಎಂದು
'ಸೈಂಟಿಫಿಕ್ ಅಮೆರಿಕನ್ '
ನಿಯತಕಾಲಿಕೆಯು ಬಾಳಿಗಾ
ಅವರನ್ನು ಶ್ಲಾಘಿಸಿತ್ತು . ಅದೇ
ರೀತಿ ಎಲೆಕ್ಟ್ರಿಕಲ್ ಮತ್ತು
ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಗಳ ಸಂಸ್ಥೆ
(ಐಇಇಇ ) ನೀಡುವ ಪದಕವನ್ನು ಅವರು
2014 ರಲ್ಲಿ ಪಡೆದಿದ್ದರು .
ಐಐಟಿ ಮದ್ರಾಸ್ನಲ್ಲಿ ಶಿಕ್ಷಣ ಪಡೆದಿರುವ
ಬಾಳಿಗಾ ಆ ಬಳಿಕ ಅಮೆರಿಕದಲ್ಲಿ ಉನ್ನತ
ವ್ಯಾಸಂಗ ಮಾಡಿದ್ದರಲ್ಲದೆ , 15
ವರ್ಷಗಳ ಕಾಲ ನ್ಯೂಯಾರ್ಕ್ನ ಜನರಲ್
ಎಲೆಕ್ಟ್ರಿಕಲ್ ಕಂಪೆನಿಯಲ್ಲಿ ಸೇವೆ
ಸಲ್ಲಿಸಿದ್ದಾರೆ .
ಈ ಅವಧಿಯಲ್ಲಿ ಅವರು ಆವಿಷ್ಕರಿಸಿದ್ದ
ಇನ್ಸುಲೇಟೆಡ್ ಗೇಟ್
ಬೈಪೊಲಾರ್ ಟ್ರಾನ್ಸಿಟರ್ (ಐಜಿಬಿಟಿ )
ಅಥವಾ ' ಡಿಜಿಟಲ್ ಸ್ವಿಚ್' ತಂತ್ರಜ್ಞಾನ
ಕ್ಷೇತ್ರದಲ್ಲಿ ಹೊಸ ಕ್ರಾಂತಿ
ಉಂಟುಮಾಡಿತ್ತು

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023