ಕೇರಳ ಆಯುರ್ವೇದ ಉತ್ಪನ್ನಗಳ ರಾಯಭಾರಿಯಾಗಿ ಸ್ಟೆಫ್ಫಿ ಗ್ರಾಫ್ ನೇಮಕ

ತಿರುವನಂತಪುರ: ಟೆನ್ನಿಸ್ ದಂತಕತೆ
ಸ್ಟೆಫ್ಪಿಗ್ರಾಫ್, ಕೇರಳ ಆಯುರ್ವೇದ
ಉತ್ಪನ್ನಗಳ  ಬ್ರಾಂಡ್ ಅಂಬಾಸಿಡರ್
ಆಗಿ ನೇಮಕಗೊಂಡಿದ್ದಾರೆ. ಸಚಿವ
ಸಂಪುಟ ಸಭೆಯಲ್ಲಿ ಈ ನಿರ್ಧಾರ
ಕೈಗೊಳ್ಳಲಾಗಿದೆ ಎಂದು ಕೇರಳ
ಮುಖ್ಯಮಂತ್ರಿ ಒಮನ್ ಚಾಂಡಿ
ಹೇಳಿದ್ದಾರೆ,
ಕೇರಳ ಭೇಟಿ ಯೋಜನೆಯಡಿ
ಕೇರಳ ಪ್ರವಾಸೋದ್ಯಮ ಇಲಾಖೆ
ಸ್ಟೆಫ್ಪಿಗ್ರಾಫ್ ಅವರನ್ನು
ಆಯುರ್ವೇದ ಉತ್ಪನ್ನಗಳ
ರಾಯಭಾರಿಯನ್ನಾಗಿ ನೇಮಕ
ಮಾಡಿದ್ದು, ಶೀಘ್ರವೇ ಅವರಿಂದ
ಒಪ್ಪಂದಕ್ಕೆ ಸಹಿ
ಹಾಕಿಸಿಕೊಳ್ಳಲಾಗುವುದು
ಎಂದು ಚಾಂಡಿ ತಿಳಿಸಿದ್ದಾರೆ.
ಹೀಗಾಗಲೇ ಪ್ರವಾಸೋದ್ಯಮ
ಇಲಾಖೆ ಜರ್ಮನಿ ಆಟಗಾರ್ತಿ
ಸ್ಟೆಫ್ಪಿಗ್ರಾಫ್ ಅವರೊಂದಿಗೆ
ಮಾತುಕತೆ ನಡೆಸಿದ್ದು, ಒಪ್ಪಂದದ ಬಗ್ಗೆ
ಅವರಿಗೆ ವಿವರಿಸಲಾಗಿದೆ ಎಂದು
ಹೇಳಿದರು.
ಟೆನ್ನಿಸ್ ನಲ್ಲಿ 22 ಗ್ರಾಂಡ್ ಸ್ಲಾಮ್
ಗಳನ್ನು ಪಡೆದುಕೊಂಡಿರುವ 46
ವರ್ಷದ ಸ್ಟೆಫ್ಪಿಗ್ರಾಫ್1999 ರಲ್ಲಿ ಟೆನ್ನಿಸ್
ನಿಂದ ನಿವೃತ್ತಿಯಾದರು, ನಂತರ
2001 ಅಕ್ಟೋಬರ್ ನಲ್ಲಿ ವಿಶ್ವದ
ನಂಬರ್.1 ಟೆನ್ನಿಸ್ ಆಟಗಾರ ಆಂಡ್ರೆ
ಆಗಾಸೆ ಅವರನ್ನು
ವಿವಾಹವಾಗಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023