Waterloo War: 18June 1815..read complete story here...

ನೆಪೋಲಿಯನ್ ಬೋನಾಪಾರ್ಟೆ ಎಂದರೆ
ಯೂರೋಪ್ ಕಂಡ ಪ್ರಚಂಡ ಪರಾಕ್ರಮಿಗಳಲ್ಲಿ
ಒಬ್ಬ. ಅವನ ಸಮರೋತ್ಸಾಹಕ್ಕೆ ಎಣೆಯೇ ಇರಲಿಲ್ಲ
. ಆದರೆ ಅಂಥ ಸಾಹಸಶೀಲನು ಕೂಡ ಒಂದು
ಮಹಾಪತನವನ್ನು ಕಂಡ. ಅದೇ ವಾಟರ್ಲೂ
ಕದನ! ಈ ಯುದ್ಧವಾಗಿ ಇಂದಿಗೆ 200 ವರ್ಷ. ಆದರೆ
ಇಂದಿಗೂ ಅದು ಕಂಡುಕೇಳರಿಯದಂಥ
ಸೋಲಿಗೆ ಇನ್ನೊಂದು ಹೆಸರಾಗಿದೆ. ---
-ವಾಟರ್ಲೂ ಕದನಕ್ಕೆ 200 ವರ್ಷ- -ಯೂರೋಪ್
ಇತಿಹಾಸ ಬದಲಿಸಿದ ಧೀಮಂತ-
1815ರ ಜೂನ್ 18 -ಇದು ಯೂರೋಪ್ನ ಇತಿಹಾಸ
ಬದಲಿಸಿದ ದಿನ. ಇಂದಿಗೆ(ಜೂ.18) ಅಂದರೆ,
ಬರೋಬ್ಬರಿ 200 ವರ್ಷಗಳ ಹಿಂದೆ ಬೆಲ್ಜಿಯಂನ
ವಾಟರ್ಲೂ ಕದನದಲ್ಲಿ ಫ್ರಾನ್ಸ್ ನ ಚಕ್ರವರ್ತಿ
ನೆಪೋಲಿಯನ್ ಬೋನಾಪಾರ್ಟೆ ಸೋತು,
ಬ್ರಿಟನ್ ಮೈತ್ರಿಪಡೆಯ ನಾಯಕ ವೆಲ್ಲಿಂಗ್ಟನ್ಗೆ
ಶರಣಾಗಿದ್ದ. ಬಹುಶಃ ವಾಟರ್ಲೂ ಕದನದಲ್ಲಿ
ನೆಪೋಲಿಯನ್ ಸೋಲದಿದ್ದರೆ ಇಂದಿನ
ಯೂರೋಪ್ನ ಚಿತ್ರಣವೇ ಬೇರೆಯದೇ
ಆಗಿರುತ್ತಿತ್ತೇನೋ? ಆದರೆ ಯೂರೋಪ್
ಖಂಡದಲ್ಲೇ ಅತಿ ದೊಡ್ಡ ಸಾಮ್ರಾಜ್ಯ
ಸ್ಥಾಪಿಸಿದ್ದ ನೆಪೋಲಿಯನ್ಗೆ ಬೆಲ್ಜಿಯಂನ ಬ್ರಸೆಲ್ಸ್
ಅನ್ನು ವಶಪಡಿಸಿಕೊಳ್ಳಲು ಮಾತ್ರ
ಸಾಧ್ಯವಾಗಲಿಲ್ಲ.
'Impossible is a word to be found
only in the dictionary of fools. '
ಎನ್ನುತ್ತಿದ್ದ ನೆಪೋಲಿಯನ್
ಯೂರೋಪ್ ಕಂಡ ಅತ್ಯಂತ
ಮಹತ್ವಾಕಾಂಕ್ಷಿ ನಾಯಕ.
1804ರಿಂದ 1814ರವರೆಗೆ(1813ರ
ಯುದ್ಧದಲ್ಲಿ ಸೋತ
ನೆಪೋಲಿಯನ್ನನ್ನು 1814ರ
ಏಪ್ರಿಲ್ನಲ್ಲಿ ಎಲ್ಬಾ ದ್ವೀಪಕ್ಕೆ
ಗಡಿಪಾರು ಮಾಡಲಾಗುತ್ತದೆ.
ಅಲ್ಲಿಂದ ಆತ ತಪ್ಪಿಸಿಕೊಂಡು
ಬಂದು 1815ರ ಜೂನ್ನಲ್ಲಿ
ಮೈತ್ರಿ ಪಡೆ ವಿರುದ್ಧ ಮತ್ತೆ
ಯುದ್ಧ ಸಾರುತ್ತಾನೆ.)
ಫ್ರಾನ್ಸ್ ನ ಚಕ್ರವರ್ತಿಯಾಗಿ ಜನಪರ ಆಡಳಿತವನ್ನು
ನೀಡಿದ್ದನ್ನು ಇತಿಹಾಸಕಾರರು
ಗುರುತಿಸುತ್ತಾರೆ. ಸುಮಾರು ಎರಡು ದಶಕಗಳ
ಕಾಲ ನೆಪೋಲಿಯನ್ ಯೂರೋಪ್ ಮೇಲೆ
ಸಂಪೂರ್ಣ ನಿಯಂತ್ರಣ ಸಾಧಿಸಿದ್ದ.
ಯೂರೋಪ್ನ ಇತರೆ ರಾಷ್ಟ್ರಗಳ ವಿರುದ್ಧದ
ಱನೆಪೋಲಿಯನಿಕ್ ಯುದ್ಧೞಗಳ ಸರಣಿಯಲ್ಲಿ
ಬಹುತೇಕವನ್ನು ಗೆದ್ದು ಬೀಗಿದ್ದ. ಒಂದು
ರೀತಿಯಲ್ಲಿ ಈತನನ್ನುಯಾರೂ ತಡೆಯಲಾರರು
ಎಂಬ ಮಟ್ಟಿಗೆ ಯೂರೋಪಿನಾದ್ಯಂತ
ದಂತಕತೆಗಳು ಹುಟ್ಟಿಕೊಂಡಿದ್ದವು. ಈತನ
ಯುದ್ಧತಂತ್ರಗಳನ್ನು ಭೇದಿಸುವುದು
ಕಷ್ಟಕರವಾಗಿತ್ತು. ಈಗಲೂ ನೆಪೋಲಿಯನ್
ಯುದ್ಧತಂತ್ರಗಳನ್ನು ಅನೇಕ
ಸೇನಾಶಾಲೆಗಳಲ್ಲಿ ಕಲಿಸಲಾಗುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ನೆಪೋಲಿಯನ್ ಕೇವಲ
ಯುದ್ಧ ವ್ಯಾಮೋಹಿಯಾಗಿರಲಿಲ್ಲ. ಆತ
ಜನಪರ ಆಡಳಿತಗಾರನೂ ಹೌದು. ಆತನ ಆಳ್ವಿಕೆಯಲ್ಲಿ
ಫ್ರಾನ್ಸ್ ಸೇರಿದಂತೆ ಯೂರೋಪಿನ ಅನೇಕ
ರಾಷ್ಟ್ರಗಳು ಹಲವು ಸುಧಾರಣೆಗಳನ್ನು
ಕಂಡವು. ವಿಶೇಷವಾಗಿ ಪ್ರಗತಿಪರ ಚಿಂತನೆಗಳನ್ನು
ಯೂರೋಪಿನಾದ್ಯಂತ ಬಿತ್ತಿದ. ಸಾರ್ವಜನಿಕ
ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದ. ಆಗಷ್ಟೆ
ಪ್ರವರ್ಧಮಾನಕ್ಕೆ ಬರುತ್ತಿದ್ದ ಮಧ್ಯಮ ವರ್ಗದ ಹಿತ
ಕಾಯುವುದಕ್ಕಾಗಿ ಕಾಯಿದೆಗಳನ್ನು ರೂಪಿಸಿ,
ಜಾರಿಗೆ ತಂದ. ಯಹೂದಿಗಳು ಸೇರಿದಂತೆ
ಧಾರ್ಮಿಕ ಅಲ್ಪಸಂಖ್ಯಾತರನ್ನು
ಗುಲಾಮಗಿರಿಯಿಂದ ಬಿಡುಗಡೆ ಮಾಡಿ, ಅವರಿಗೆ
ಸ್ವಾಭಿಮಾನದ ಬದುಕು ಕಲ್ಪಿಸಿದ. ಇನ್ನೂ
ಒಂದು ಹೆಜ್ಜೆ ಮುಂದೆ ಹೋಗಿ,
ಯೂರೋಪಿನಾದ್ಯಂತ ಬೇರುಬಿಟ್ಟಿದ್ದ
ಊಳಿಗಮಾನ್ಯ ವ್ಯವಸ್ಥೆಯನ್ನು ಕಿತ್ತೊಗೆದ.
ನ್ಯಾಯ ವ್ಯವಸ್ಥೆಯಲ್ಲೂ ಅಪಾರ
ಸುಧಾರಣೆಗಳನ್ನು ತಂದು ಜನಪ್ರಿಯನಾದ. ಆತನ
ನ್ಯಾಯ ಸುಧಾರಣೆಗಳನ್ನು ಱನೆಪೋಲಿಯನಿಕ್
ಕೋಡ್' ಎಂದು ಕರೆಯಲಾಗುತ್ತದೆ. ಈ
ನ್ಯಾಯ ಸುಧಾರಣೆಗಳನ್ನು ಜಗತ್ತಿನಾದ್ಯಂತ
ಇಂದಿಗೂ ಅನೇಕ ರಾಷ್ಟ್ರಗಳು
ಬಳಸಿಕೊಳ್ಳುತ್ತಿವೆ ಎಂದರೆ ಅವುಗಳ ಮಹತ್ವ
ಅರಿವಾಗುತ್ತದೆ.
ಇಂಥ ಪ್ರಗತಿಪರ ಚಿಂತನೆಯ ನೆಪೋಲಿಯನ್
ಹುಟ್ಟಿದ್ದು 1769ರ ಆಗಸ್ಟ್ 15ರಂದು
ಕೋರ್ಸಿಕಾ ದ್ವೀಪದಲ್ಲಿ. ತಂದೆ ಕಾರ್ಲೋ
ಬೋನಾಪಾರ್ಟೆ, ತಾಯಿ ಮೇರಿ ಲೆಟಿಜಿಯಾ
ರಾಮೊಲಿನೋ. ನೆಪೋಲಿಯನ್ ಫ್ರೆಂಚ್
ಸೇನೆಯಲ್ಲಿ ಫಿರಂಗಿ ದಳದ ಅಧಿಕಾರಿಯಾಗಿ
ಕಾರ್ಯನಿರ್ವಹಿಸುತ್ತಲೇ 1789ರಲ್ಲಿ
ಸ್ಫೋಟಗೊಂಡ ಫ್ರೆಂಚ್ ಕ್ರಾಂತಿಗೆ ಬೆಂಬಲ
ನೀಡುತ್ತಿದ್ದ. ಇದರ ಪರಿಣಾಮವಾಗಿ
ನೆಪೋಲಿಯನ್ನನ್ನು 1793ರಲ್ಲಿ ಕೋರ್ಸಿಕಾ
ದ್ವೀಪದಿಂದ ಗಡಿಪಾರು ಮಾಡಲಾಯಿತು.
ಇದಾದ ಎರಡು ವರ್ಷಗಳ ಬಳಿಕ ಱ13 ವೆಂಡೆಮಿಯರ್'
ಎಂದು ಕರೆಯಲಾಗುವ ಪರ್ಷಿಯನ್ ದಂಗೆಯಿಂದ
ಫ್ರೆಂಚ್ ಸರಕಾರವನ್ನು ರಕ್ಷಿಸಿದ. ಆಗ ಅವನಿಗೆ 26 ವರ್ಷ.
ಇದರಿಂದ ಸಂಪ್ರೀತವಾದ ಫ್ರಾನ್ಸ್ ಆಡಳಿತ
ಆತನನ್ನು ಇಟಲಿಯ ಸೇನಾ ಜನರಲ್ನಾಗಿ ನೇಮಕ
ಮಾಡಿತು. 1796ರಲ್ಲಿ ಜನರಲ್ ಆಗಿ ನೆಪೋಲಿಯನ್
ತನ್ನ ಮೊದಲ ಯುದ್ಧವನ್ನು ಆಸ್ಟ್ರಿಯಾ
ವಿರುದ್ಧ ಸಾರಿ,ಯಶಸ್ವಿಯಾದ. ಇದಾದ ಬಳಿಕ ಆತ
ಹಿಂದಿರುಗಿ ನೋಡಲೇ ಇಲ್ಲ. ಇಲ್ಲಿಂದ
ಬಹುತೇಕ ಯುದ್ಧಗಳನ್ನು ಗೆದ್ದು
ನೆಪೋಲಿಯನ್ ಯೂರೋಪಿನಾದ್ಯಂತ
ಜನಪ್ರಿಯನಾದ. 1804ರಲ್ಲಿ ಫ್ರಾನ್ಸ್ನ ಸೆನೆಟ್,
ನೆಪೋಲಿಯನ್ನನ್ನು ಚಕ್ರವರ್ತಿ ಎಂದು
ಘೋಷಿಸಿತು. ಅಧಿಕಾರಕ್ಕೇರಿದ ಮೇಲೂ
ಅನೇಕ ಯುದ್ಧಗಳನ್ನು ಎದುರಿಸಿದ. ತನ್ನ ಹತ್ತು
ವರ್ಷಗಳ ಅಧಿಕಾರವಧಿಯಲ್ಲಿ ತಾನೊಬ್ಬ ಕೇವಲ
ಯುದ್ಧ ವ್ಯಾಮೋಹಿಯಲ್ಲ ಎಂಬುದನ್ನೂ
ನಿರೂಪಿಸಿದ. ಪ್ರಗತಿಪರ ಚಿಂತನೆಗಳನ್ನು ಹೊಂದಿದ್ದ
ನೆಪೋಲಿಯನ್ ಪಾಶ್ಚಿಮಾತ್ಯ ಇತಿಹಾಸದಲ್ಲಿ
ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ. ಆತ
ಅವಸಾನ ಕಂಡಿದ್ದು 1815ರಲ್ಲಿ. ಆದರೆ,
ನಿರ್ಣಾಯಕವಾಗಿದ್ದ ವಾಟರ್ಲೂ ಕದನದಲ್ಲಿ
ಸೋತು ಶರಣಾದ. ಅಲ್ಲಿಗೆ ನೆಪೋಲಿಯನ್ ಶಕೆ
ಸಮಾಪ್ತಿಗೊಂಡಿತು. ಸೆರೆ ಸಿಕ್ಕ ಬಳಿಕ
ನೆಪೋಲಿಯನ್ನನ್ನು ಸೇಂಟ್ ಹೆಲೆನಾ
ದ್ವೀಪಕ್ಕೆ ರವಾನಿಸಲಾಯಿತು. ತನ್ನ 51ನೇ
ವಯಸ್ಸಿನಲ್ಲಿ ಅಂದರೆ, 1821ರಲ್ಲಿ ಕೊನೆಯುಸಿರೆಳೆದ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023