11 ಸಾವಿರ ಶಿಕ್ಷಕರ ನೇಮಕಾತಿಗೆ 2 ತಿಂಗಳೊಳಗಾಗಿ ಆದೇಶ:


ಬೆಳಗಾವಿ, ಜು.3-ಪ್ರಾಥಮಿಕ
ಶಾಲೆಗಲ್ಲಿ ಖಾಲಿ ಇರುವ 11 ಸಾವಿರ
ಶಿಕ್ಷಕರ ನೇಮಕಾತಿಗೆ 2
ತಿಂಗಳೊಳಗಾಗಿ ಆದೇಶ
ನೀಡಲಾಗುವುದೆಂದು
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ
ಕಿಮ್ಮನೆ ರತ್ನಾಕರ ವಿಧಾನಪರಿಷತ್ನಲ್ಲಿ
ತಿಳಿಸಿದರು. ಸದಸ್ಯ
ಜಿ.ಎಸ್.ನ್ಯಾಮೇಗೌಡ ಅವರ ಪ್ರಶ್ನೆಗೆ
ಉತ್ತರಿಸಿದ ಅವರು ಈಗಾಗಲೇ 11
ಸಾವಿರ ಶಿಕ್ಷಕರ ನೇಮಕಾತಿಗೆ ಸಿಇಟಿ
ಪರೀಕ್ಷೆ ನಡೆಸಲಾಗಿದೆ. 2 ತಿಂಗಳೊಳಗೆ
ನೇಮಕಾತಿ ಆದೇಶ ಪೂರ್ಣ
ಮಾಡಲಾಗುವುದು. ಜತೆಗೆ 14
ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೂ
ಮುಖ್ಯಮಂತ್ರಿ ಸಮ್ಮತಿ
ಸೂಚಿಸಿದ್ದಾರೆ ಎಂದು ಹೇಳಿದರು.
ಸರ್ಕಾರಿ ಅನುದಾನಿತ ಶಾಲೆಗಳಲ್ಲಿ
ನಕಲು ತಡೆಗಟ್ಟುವ ಉದ್ದೇಶದಿಂದ
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ
ಸಿಸಿಟಿವಿ ಅಳವಡಿಸುವುದಾಗಿ ಹೇಳಿಕೆ
ನೀಡಿದ್ದೆ. ವಾಸ್ತವವಾಗಿ ಇದು
ಸಾಧ್ಯವಿಲ್ಲ ಎಂದು ಗೊತ್ತಿತ್ತು.
ಏಕೆಂದರೆ ಎಲ್ಲ ಶಾಲೆಗಳಿಗೆ ಸಿಸಿಟಿವಿ
ಅಳವಡಿಸಿದರೆ ಆರ್ಥಿಕ
ಹೊರೆಯಾಗುತ್ತದೆ. ಆದರೆ ನಾನು
ಹೇಳಿಕೆ ಕೊಟ್ಟ ಪರಿಣಾಮ ನಕಲು
ಪ್ರಮಾಣ ಕಡಿಮೆಯಾಗಿ
ಖಾಸಗಿಯೇತರ ಶಾಲೆಗಿಂತ ಸರ್ಕಾರಿ
ಶಾಲೆಗಳಲ್ಲಿ ಉತ್ತಮ ಫಲಿತಾಂಶ
ಬಂದಿದೆ ಎಂದರು. ಕೆಲವು
ಸಂದರ್ಭಗಳಲ್ಲಿ ಮಕ್ಕಳಿಗೆ ನಕಲು
ಮಾಡುವುದನ್ನು ಪೋಷಕರೇ
ಹೇಳಿಕೊಡುತ್ತಾರೆ.
ಶಾಸಕರೊಬ್ಬರು ತಮ್ಮ ಪುತ್ರನಿಗೆ
ನಕಲು ಮಾಡಲು ಪ್ರೋತ್ಸಾಹ
ನೀಡಿದ್ದು ನನ್ನ ಮುಂದಿದೆ. ಆದರೆ
ಅವರ ಹೆಸರನ್ನು ಬಹಿರಂಗ
ಪಡಿಸುವುದಿಲ್ಲ ಎಂದು ತಿಳಿಸಿದರು.
ನಕಲು ತಡೆಗಟ್ಟುವ ಉದ್ದೇಶದಿಂದ
ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ 3300 ಸಿಸಿಟಿವಿ
ಅಳವಡಿಸುವುದಾಗಿ ಹೇಳಿದ್ದು
ಸದ್ಯಕ್ಕೆ 800 ರಿಂದ 9000 ಸಿಸಿಟಿವಿ
ಕ್ಯಾಮೆರಾಗಳನ್ನು
ಅಳವಡಿಸಲಾಗುವುದು. ಹಂತ
ಹಂತವಾಗಿ ಎಲ್ಲಾ ಪರೀಕ್ಷಾ
ಕೇಂದ್ರಗಳಿಗೂ ಇದು ಕಡ್ಡಾಯ
ಮಾಡುವುದಾಗಿ ಘೋಷಿಸಿದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023