ಕನಿಷ್ಠ ದಿನಗೂಲಿ ವೇತನ 137ರಿಂದ 160 ರೂ.ಗೆ ಏರಿಕೆ

(wef July1)
:
ಹೊಸದಿಲ್ಲಿ,ಜು.8: ಎರಡು ವರ್ಷಗಳ
ಬಳಿಕ ಕೇಂದ್ರ ಸರಕಾರವು ಮಂಗಳವಾರ
ಕಾರ್ಮಿಕರ ಕನಿಷ್ಠ ದಿನಗೂಲಿ ವೇತನವನ್ನು 23
ರೂ.ನಷ್ಟು ಹೆಚ್ಚಿಸುವ ಮೂಲಕ 160 ರೂ.ಗೆ ಏರಿಕೆ
ಮಾಡಿದೆ. ಜುಲೈ 1ರಿಂದ
ಪೂರ್ವಾನ್ವಯವಾಗುವಂತೆ ದಿನಗೂಲಿ ಏರಿಕೆ ಜಾರಿಗೆ
ಬರಲಿದೆ. ಚಿಲ್ಲರೆ ಹಣದುಬ್ಬರ ಹೆಚ್ಚಳವಾಗಿರುವ
ಹಿನ್ನೆಲೆ ಯಲ್ಲಿ ಕಾರ್ಮಿಕರ ಕನಿಷ್ಠ ದಿನಗೂಲಿ
ವೇತನವನ್ನು ಮೇಲ್ಮುಖವಾಗಿ ಪರಿಷ್ಕ ರಿಸುವ
ನಿರ್ಧಾರವನ್ನು ಕೈಗೊಂಡಿರುವುದಾಗಿ
ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ
ಸಹಾಯಕ ಸಚಿವ ಬಂಡಾರು ದತ್ತಾತ್ರೇಯ
ತಿಳಿಸಿದ್ದಾರೆ.
2015ರ ಜುಲೈ 1ರಿಂದ
ಅನ್ವಯವಾಗುವಂತೆ ಎಲ್ಲ ಅಧಿಸೂಚಿತ
ಉದ್ಯೋಗಗಳ ಕನಿಷ್ಠ ದಿನಗೂಲಿ ವೇತನವನ್ನು ಈಗ
ಇರುವ 137 ರೂ.ಗಳಿಂದ 160 ರೂ.ಗೆ ಏರಿಕೆ
ಮಾಡಲು ಅಗತ್ಯ ಕ್ರಮಗಳನ್ನು
ಕೈಗೊಳ್ಳುವಂತೆ ರಾಜ್ಯಗಳು ಹಾಗೂ
ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ
ನೀಡಲಾಗಿದೆಯೆಂದು ಸಚಿವರು
ತಿಳಿಸಿದ್ದಾರೆ.
2012ರ ಎಪ್ರಿಲ್ನಿಂದ ಮಾರ್ಚ್ 2013ರ
ಅವಧಿಯಲ್ಲಿ 215.17ರಷ್ಟಿದ್ದ ಗ್ರಾಹಕ ದರ
ಸೂಚ್ಯಂಕ (ಕೈಗಾರಿಕಾ ಕಾರ್ಮಿಕರು)ವು ಎಪ್ರಿಲ್
2014ರಿಂದ ಮಾರ್ಚ್ 2015ರ ಅವಧಿಯಲ್ಲಿ
250.83ಕ್ಕೇರಿತ್ತು. ಗ್ರಾಹಕ ದರ
ಸೂಚ್ಯಂಕದಲ್ಲಿ ಆಗಿರುವ ಈ
ಗಣನೀಯ ಹೆಚ್ಚಳವನ್ನು
ಗಮನದಲ್ಲಿಟ್ಟುಕೊಂಡು
ಕಾರ್ಮಿಕರ ದಿನಗೂಲಿ ವೇತನವನ್ನು ಏರಿಕೆ
ಮಾಡಲಾಗಿದೆಯೆಂದು ಬಂಡಾರು
ದತ್ತಾತ್ರೇಯ ತಿಳಿಸಿದರು.
ಕೇಂದ್ರ ಸರಕಾರವು ಈ ಮೊದಲು
2013ರ ಜುಲೈ 1ರಂದು ಕಾರ್ಮಿಕರ ಕನಿಷ್ಠ
ದಿನಗೂಲಿ ವೇತನವನ್ನು 137 ರೂ.ಗಳಿಂದ 115
ರೂ.ಗೇರಿಸಿತ್ತು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023