Drop


Friday, July 10, 2015

ಜು.14ರಂದು ಪ್ಲೂಟೊ ಕಕ್ಷೆ ತಲುಪುವ ನಾಸಾ ಉಪಗ್ರಹ- ಹಾರಿಜಾನ್(it took 9yrs to reach)

:
ವಾಷಿಂಗ್ಟನ್ (ಐಎಎನ್ಎಸ್):
ಸುಮಾರು 9 ವರ್ಷಗಳ ಹಿಂದೆ ಅಮೆರಿಕದ
ಬಾಹ್ಯಾಕಾಶ ಸಂಶೋಧನಾ
ಸಂಸ್ಥೆ 'ನಾಸಾ' ಉಡಾವಣೆ
ಮಾಡಿರುವ 'ಹಾರಿಜಾನ್' ಗಗನನೌಕೆ
ಜುಲೈ 14 ರಂದು ಇದೇ
ಮೊದಲ ಬಾರಿಗೆ ಪ್ಲೂಟೊ ಗ್ರಹದ
ಅತ್ಯಂತ ಹತ್ತಿರಕ್ಕೆ ತಲುಪಲಿದೆ.
ಸೌರಮಂಡಲದಲ್ಲಿಯೇ ಅತ್ಯಂತ
ದೂರದಲ್ಲಿರುವ ಈ ಪುಟ್ಟ
ಗ್ರಹವನ್ನು ಅತ್ಯಂತ ಹತ್ತಿರದಿಂದ
ನೋಡುವ ಐತಿಹಾಸಿಕ ಕ್ಷಣಕ್ಕಾಗಿ
ಖಗೋಳ ವಿಜ್ಞಾನಿಗಳು ಎದುರು
ನೋಡುತ್ತಿದ್ದಾರೆ. ಪ್ಲೂಟೋ
ಕಕ್ಷೆಯನ್ನು ಪ್ರವೇಶಿಸಿರುವ ನೌಕೆ
ಗುರುವಾರ ಪ್ಲೂಟೊ ಮತ್ತು
ಅದರ ಉಪಗ್ರಹ ಚರೋನ್ ಅನ್ನು
ಅತ್ಯಂತ ಸಮೀಪದಿಂದ ಸೆರೆ ಹಿಡಿದಿದೆ.
ನಾಸಾ ಕೇಂದ್ರಕ್ಕೆ ನೌಕೆ
ರವಾನಿಸಿರುವ ಚಿತ್ರಗಳು ಸ್ಪಷ್ಟವಾಗಿವೆ.
9 ವರ್ಷಗಳ ಹಿಂದೆ ಪ್ಲೂಟೊದತ್ತ
ಪ್ರಯಾಣ ಕೈಗೊಂಡಿದ್ದ
ಗಗನನೌಕೆಯ ಕ್ಯಾಮೆರಾಗಳು ಇನ್ನೂ
ಕರಾರುವಾಕ್ಕಾಗಿ ಕೆಲಸ
ಮಾಡುತ್ತಿವೆ.
ಇಲ್ಲಿಯವರೆಗೆ ಸಣ್ಣ ಚುಕ್ಕೆಯಂತೆ
ಕಾಣುತ್ತಿದ್ದ ಪ್ಲೂಟೊ ಈಗೀಗ
ದೊಡ್ಡದಾಗಿ ಕಾಣುತ್ತಿದೆ. ನಾಸಾ
ಕೇಂದ್ರಕ್ಕೆ ರವಾನೆಯಾಗಿರುವ
ಚಿತ್ರಗಳಲ್ಲಿ ಬೃಹತ್ ಗ್ರಹದಂತೆ
ಗೋಚರಿಸುತ್ತಿದೆ. ನೌಕೆ ಹತ್ತಿರಕ್ಕೆ
ತೆರಳುತ್ತಿದ್ದಂತೆಯೇ ಮತ್ತಷ್ಟು
ದೊಡ್ಡದಾಗಿ, ಸ್ಪಷ್ಟವಾಗಿ
ಗೋಚರವಾಗುತ್ತಿದೆ.
1930ರಲ್ಲಿ ಈ ಗ್ರಹವನ್ನು ಮೊದಲು
ಟೆಲಿಸ್ಕೋಪ್ ಮೂಲಕ ಪತ್ತೆ ಹಚ್ಚಿದ
ಖಗೋಳ ವಿಜ್ಞಾನಿ ಕ್ಲೈಡ್ ಟಾಮ್ಬೌ
ಅವರ 109ನೇ 
ಜನ್ಮದಿನಾಚರಣೆಯಂದೇ
ಪ್ಲೊಟೊ ಹಾಗೂ ಚರೋನ್
ಚಿತ್ರಗಳು ಭೂಮಿಗೆ ತಲುಪಿವೆ.