ನೌಕರಿ ಕನಸು ಸಾಕಾರಕ್ಕೆ ಏಕೀಕೃತ ಪೋರ್ಟಲ್ ಉದ್ಯೋಗ ಸಹಾಯವಾಣಿ - 18004251514

ನವದೆಹಲಿ: ಉತ್ಪಾದನೆ,
ಉದ್ಯೋಗಾವಕಾಶ, ಕೌಶಲ
ಹಾಗೂ ತಂತ್ರಜ್ಞಾನದ ಲಭ್ಯತೆ
ಹೆಚ್ಚಿಸುವ ಮೇಕ್ ಇನ್ ಇಂಡಿಯಾ,
ಡಿಜಿಟಲ್ ಇಂಡಿಯಾ, ಸ್ಕಿಲ್
ಇಂಡಿಯಾದಂಥ
ಯೋಜನೆಗಳನ್ನು ಈಗಾಗಲೇ
ಘೊಷಿಸಿರುವ ಪ್ರಧಾನಿ ನರೇಂದ್ರ
ಮೋದಿ, ಇದೀಗ
ಉದ್ಯೋಗಾಕಾಂಕ್ಷಿಗಳು
ಹಾಗೂ ಉದ್ಯೋಗದಾತರಿಗೆ
ಕೊಂಡಿಯಾಗಿ ಏಕೀಕೃತ
ವ್ಯವಸ್ಥೆಯೊಂದನ್ನು
ಆರಂಭಿಸಿದ್ದಾರೆ.
ಉದ್ಯೋಗ ಸಂಬಂಧಿ ಸಮಸ್ತ
ಮಾಹಿತಿ ಒದಗಿಸುವ ರಾಷ್ಟ್ರೀಯ
ವೃತ್ತಿ ಸೇವಾ ಪೋರ್ಟಲ್ (ಎನ್​
ಸಿಎಸ್) ಅನ್ನು ಕೇಂದ್ರ ಕಾರ್ವಿುಕ
ಸಚಿವಾ ಲಯ ರೂಪಿಸಿದ್ದು,
ನವದೆಹಲಿಯಲ್ಲಿ ಸೋಮ ವಾರ ನಡೆದ
46ನೇ ಭಾರತೀಯ ಕಾರ್ವಿುಕ
ಸಮಾವೇಶದಲ್ಲಿ ಮೋದಿ
ಚಾಲನೆ ನೀಡಿದರು.ಏನಿದು
ಏಕೀಕೃತ ಜಾಬ್ ಪೋರ್ಟಲ್?:
ನಿರುದ್ಯೋಗಿಗಳಿಗೆ ಹಾಗೂ
ಉದ್ಯೋಗಾ ಕಾಂಕ್ಷಿಗಳಿಗೆ
ಉದ್ಯೋಗ ಸಂಬಂಧಿತ ಮಾಹಿತಿ
ಒದಗಿಸಲು ಕೇಂದ್ರ ಸರ್ಕಾರದ ವಿವಿಧ
ಸಚಿವಾಲಯಗಳು ನೂರಾರು ವೃತ್ತಿ
ಸಂಬಂಧಿತ ವೆಬ್​ಸೈಟ್​ಗಳನ್ನು
ಹೊಂದಿವೆ. ಹಾಗಿದ್ದರೂ
ಇವುಗಳು ವಿವಿಧ ಇಲಾಖೆಗಳಲ್ಲಿ
ಹರಿದು ಹಂಚಿ
ಹೋಗಿರುವುದರಿಂದ
ಆಕಾಂಕ್ಷಿಗಳು ಸೂಕ್ತ ಮಾಹಿತಿ
ದೊರೆಯದೆ ಅವಕಾಶ
ವಂಚಿತರಾಗುವ ಸಾಧ್ಯತೆ ಹೆಚ್ಚಿದೆ.
ಹಾಗಾಗಿ ಸರ್ಕಾರಿ ಸ್ವಾಮ್ಯದ ಎಲ್ಲ
ಉದ್ಯೋಗ ಸಂಬಂಧಿತ ವೆಬ್​ಸೈಟ್​
ಗಳನ್ನು ಆಧುನೀಕರಿಸಿ ಒಂದೇ
ಪೋರ್ಟಲ್ ಅಡಿಯಲ್ಲಿ ತರುವ
ಉದ್ದೇಶದಿಂದಲೇ ರಾಷ್ಟ್ರೀಯ
ವೃತ್ತಿ ಸೇವಾ ಪೋರ್ಟಲ್
ಆರಂಭಿಸಲಾಗಿದೆ. ಇಂಗ್ಲೆಂಡ್​
ನಲ್ಲಿರುವ ಉದ್ಯೋಗ
ಪೋರ್ಟಲ್ ಮಾದರಿಯನ್ನೇ
ಇಲ್ಲೂ ಅನುಸರಿಸಲಾಗಿದ್ದು,
ಅತ್ಯಾಧುನಿಕ ತಂತ್ರಜ್ಞಾನ
ಅಳವಡಿಸಿಕೊಳ್ಳುವ ಮೂಲಕ
ಗತಕಾಲದ ಅಥವಾ ಹಳತಾದ
ಉದ್ಯೋಗ ಸೇವಾ ವಿಧಾನಕ್ಕೆ
ಅಂತ್ಯ ಹಾಡಲಾಗಿದೆ.
***
ಉಚಿತ, ಆದರೆ ಆಧಾರ್ ಕಡ್ಡಾಯ
ಆಸಕ್ತರು ಎನ್​ಸಿಎಸ್​ನಲ್ಲಿ ಉಚಿತವಾಗಿ
ನೋಂದಣಿ ಮಾಡಿಕೊಳ್ಳಬ
ಹುದು. ಆದರೆ, ಈ ಪೋರ್ಟಲ್​ನ
ದುರ್ಬಳಕೆ ತಪ್ಪಿಸುವ ಉದ್ದೇಶ ದಿಂದ
ವೆಬ್​ಸೈಟ್​ನಲ್ಲಿ ನೋಂದಣಿ
ಮಾಡಿಕೊಳ್ಳುವಾಗ ಆಧಾರ್
ಸಂಖ್ಯೆ ನಮೂದಿಸುವುದನ್ನು
ಕಡ್ಡಾಯವಾಗಿಸಲಾಗಿದೆ. ಜತೆಗೆ, ಸಂಸ್ಥೆ
ಅಥವಾ ಸಂಘಟನೆಗಳು ಈ
ಪೋರ್ಟಲ್​ನಲ್ಲಿ
ನೋಂದಾಯಿಸಿಕೊಳ್ಳಲು
ಸಂಸ್ಥೆಯ ನೋಂದಣಿ
ಪ್ರಮಾಣಪತ್ರದ ಪ್ರತಿ ಸಲ್ಲಿಸುವುದು
ಕಡ್ಡಾಯ.
www.dget.nic.in ನಲ್ಲಿ ವಿವರಗಳು
ಲಭ್ಯವಾಗಲಿವೆ.
***
ಸಿಗಲಿದೆ ವೃತ್ತಿ ಸಂಬಂಧಿ ಕೌನ್ಸೆಲಿಂಗ್
ಈ ಉದ್ಯೋಗ ಪೋರ್ಟಲ್
ಕೌನ್ಸೆಲಿಂಗ್ ಕೇಂದ್ರವಾಗಿಯೂ
ಕಾರ್ಯನಿರ್ವಹಿಸಲಿದೆ. ಉದ್ಯೋಗ
ಅರಸುವುದು ಮತ್ತು
ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ
ಜತೆಗೆ, ವೃತ್ತಿ ಸಂಬಂಧಿತ ಆಪ್ತ
ಸಮಾಲೋಚನೆಯನ್ನು
ಅಭ್ಯರ್ಥಿಗಳು
ಪಡೆದುಕೊಳ್ಳಬಹುದು. ಇದಕ್ಕಾಗಿ
ಕೌನ್ಸೆಲಿಂಗ್ ಕೇಂದ್ರಗಳು ಹಾಗೂ
ಸಹಾಯವಾಣಿ ಸಂಖ್ಯೆಗಳನ್ನು
ಆರಂಭಿಸಲಾಗುತ್ತದೆ.
***
ಒಂದು ಪೋರ್ಟಲ್ ಲಾಭ ಹಲವು
ಈ ಪೋರ್ಟಲ್​ನಲ್ಲಿ
ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲ
ಸೇವೆಗಳೂ ದೊರೆಯಲಿವೆ.
ಉದ್ಯೋಗಾಕಾಂಕ್ಷಿಗಳು
ಹಾಗೂ ಉದ್ಯೋಗದಾತರ
ನೊಂದಣಿ, ನೇಮಕಾತಿ,
ಮನೋಸಾಮರ್ಥ್ಯ ಪರಾಮರ್ಶೆ,
ಉದ್ಯೋಗ ಹೊಂದಿಸುವಿಕೆ,
ಶಿಕ್ಷಣ ಸಂಸ್ಥೆಗಳಲ್ಲಿರುವ ಕೋರ್ಸ್​
ಗಳ ಮಾಹಿತಿ, ತರಬೇತಿದಾತ ಸಂಸ್ಥೆಗಳ
ವಿವರ, ಸ್ವಉದ್ಯೋಗ
ಮಾರ್ಗದರ್ಶನ, ಉದ್ದಿಮೆ ಆರಂಭಿಸುವಿಕೆ
ಮತ್ತಿತರ ವಿವರಗಳೂ ಎನ್​ಸಿಎಸ್​ನಲ್ಲಿ
ದೊರೆಯಲಿವೆ.
***
ಪೋರ್ಟಲ್​ಗಾಗಿ - 190 ಕೋಟಿ
ರೂ. ವೆಚ್ಚ
982 ಉದ್ಯೋಗ ಪೋರ್ಟಲ್​
ಗಳಿದ್ದರೂ ಮೊದಲ ಹಂತದಲ್ಲಿ 100
ಪೋರ್ಟಲ್​ಗಳಿಗೆ ಕಾಯಕಲ್ಪ
ನೀಡಲು ಕೇಂದ್ರ ಸರ್ಕಾರ
ಮುಂದಾಗಿದೆ. ಖಾಲಿ ಹುದ್ದೆಗಳ
ಮಾಹಿತಿ ಸೇರಿ ಉದ್ಯೋಗ
ಕುರಿತ ಎಲ್ಲ ವಿವರಗಳನ್ನು ಎನ್​ಸಿಎಸ್​ನಲ್ಲಿ
ಹಂಚಿಕೊಳ್ಳುವಂತೆ ಕೇಂದ್ರ
ಸರ್ಕಾರದ ಎಲ್ಲ ಸಚಿವಾಲಯಗಳು,
ಇಲಾಖೆಗಳು ಹಾಗೂ ಸರ್ಕಾರಿ
ಸ್ವಾಮ್ಯದ ಉದ್ದಿಮೆಗಳಿಗೆ ಪ್ರಧಾನಿ
ಸೂಚಿಸಿದ್ದಾರೆ. ಈ
ಜವಾಬ್ದಾರಿಯನ್ನು ಕೌಶಲಾಭಿವೃದ್ಧಿ
ಮತ್ತು ಕೈಗಾರಿಕೋದ್ದಿಮೆ
ಸಚಿವಾಲಯ ಹಾಗೂ ಸಣ್ಣ, ಮಧ್ಯಮ
ಕೈಗಾರಿಕೆ ಸಚಿವಾಲಯಕ್ಕೆ
ವಹಿಸಲಾಗಿದ್ದು, ಪೋರ್ಟಲ್
ಆಧುನೀಕರಣಕ್ಕೆ 190 ಕೋಟಿ
ರೂ.ಗಳನ್ನು ಮೀಸಲಿರಿಸಲಾಗಿದೆ.
***
ವಿವಿಧ ಯೋಜನೆಗಳ ಸಹಯೋಗ
ಮೇಕ್ ಇನ್ ಇಂಡಿಯಾ, ಡಿಜಿಟಲ್
ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತಿತರ
ಪ್ರಮುಖ ಯೋಜನೆಗಳ
ಸಹಯೋಗದೊಂದಿಗೆ ಈ ಎನ್​ಸಿಎಸ್
ಪೋರ್ಟಲ್ ಕಾರ್ಯನಿರ್ವಹಿಸಲಿದೆ.
ಉತ್ಪಾದನೆ ಮತ್ತು ತಂತ್ರಜ್ಞಾನ
ಪೂರೈಕೆಯ ಮೂಲಕ
ಉದ್ಯೋಗ ಸೃಷ್ಟಿಗೆ ಗಮನ
ನೀಡುವ ಜತೆಗೆ ಕೌಶಲಯುತ ಯುವ
ಸಮುದಾಯವನ್ನು
ಸೃಷ್ಟಿಸುವುದು ಈ
ಯೋಜನೆಗಳ ಉದ್ದೇಶವಾದರೆ
ಅಗತ್ಯವಿರುವ
ಉದ್ಯೋಗಿಗಳನ್ನು
ಪೂರೈಸುವ ಕಾರ್ಯವನ್ನು ಎನ್​
ಸಿಎಸ್ ನಿಭಾಯಿಸಲಿದೆ. ಆ ಮೂಲಕ ಇದು,
ಔದ್ಯಮಿಕ ವಲಯ,
ಉದ್ಯೋಗಿಗಳು,
ಉದ್ಯೋಗದಾತರ
ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.
***
ಸಂಘಟನೆಗಳ ಸಹಮತ ಪಡೆದು ಕಾರ್ವಿುಕ
ಕಾನೂನು ತಿದ್ದುಪಡಿ
ಸರ್ಕಾರದ ಉದ್ದೇಶಿತ ಕಾರ್ವಿುಕ
ಕಾನೂನು ತಿದ್ದುಪಡಿಗೆ ಆರೆಸ್ಸೆಸ್
ಸೇರಿ ವಿವಿಧ ಸಂಘ ಸಂಸ್ಥೆಗಳಿಂದ
ವಿರೋಧ ವ್ಯಕ್ತವಾಗಿದ್ದರೂ
ಕಾರ್ವಿುಕ ಕಾನೂನು ತಿದ್ದುಪಡಿಗೆ
ಬದ್ಧತೆ ಪ್ರದರ್ಶಿಸಿರುವ ಪ್ರಧಾನಿ,
'ಕಾರ್ವಿುಕ ಸಂಘಟನೆಗಳ ಸಹಮತ
ಪಡೆದು ಕಾರ್ವಿುಕ ಕ್ಷೇತ್ರದ
ಸುಧಾರಣೆ ಮಾಡಲಾಗುವುದು'
ಎಂದಿದ್ದಾರೆ.
46ನೇ ಭಾರತೀಯ ಕಾರ್ವಿುಕ
ಸಮಾವೇಶಕ್ಕೆ ಚಾಲನೆ ನೀಡಿ
ಮತನಾಡಿದ ಅವರು, ಕಾರ್ವಿುಕ
ಕಾನೂನು ಸರಳೀಕರಿಸುವ
ನಿಟ್ಟಿನಲ್ಲಿ ಸರ್ಕಾರ ಮತ್ತು ಕಾರ್ವಿುಕ
ಸಂಘಟನೆಗಳ ನಡುವೆ ಮಾತುಕತೆ
ಪ್ರಗತಿಯಲ್ಲಿದೆ. ಕಾರ್ವಿುಕರು
ಸಂತಸದಿಂದ ಇರದಿದ್ದರೆ ದೇಶದ ಪ್ರಗತಿ
ಸಾಧ್ಯವಿಲ್ಲ ಎಂಬುದನ್ನು
ಸರ್ಕಾರ ಮರೆತಿಲ್ಲ ಎಂದರು.
ಇಎಸ್​ಐಸಿ ಸುಧಾರಣೆಗೆ ಮುನ್ನುಡಿ: ಇಎಸ್​
ಐಸಿ ಸುಧಾರಣೆಗೆ ಸಂಬಂಧಿಸಿದ 'ಇಎಸ್​
ಐಸಿ-2.0' ಸೇವೆಗೆ ಸಮಾವೇಶದಲ್ಲಿ
ಪ್ರಧಾನಿ ಮೋದಿ ಚಾಲನೆ
ನೀಡಿದರು. ಈ ಯೋಜನೆಯಂತೆ,
ಇಲೆಕ್ಟ್ರಾನಿಕ್ ಆರೋಗ್ಯ
ದಾಖಲಾತಿ, ವೈದ್ಯಕೀಯ ಸೇವೆ
ಕುರಿತು ದಿನದ 24 ಗಂಟೆಯೂ
ಸಹಾಯವಾಣಿ ಹಾಗೂ
ಅಂಗವಿಕಲರಿಗಾಗಿ ಪ್ರತ್ಯೇಕ ವಿಭಾಗ
ಮತ್ತು ದಿನದಲ್ಲಿ 2 ಗಂಟೆ ಕಾಲ
ವಿಶೇಷ ತಪಾಸಣೆ ವ್ಯವಸ್ಥೆಯನ್ನು
ಘೊಷಿಸಲಾಯಿತು.
ಕೌಶಲ್ಯವೂ ಸಂವಿಧಾನಾತ್ಮಕ
ಹಕ್ಕು?
ಮಾಹಿತಿ ಹಕ್ಕು, ಶಿಕ್ಷಣ
ಹಕ್ಕುಗಳಂತೆಯೇ ಇನ್ನು
ಕೌಶಲ್ಯವೂ ಮೂಲಭೂತ
ಹಕ್ಕುಗಳಲ್ಲಿ ಒಂದಾಗಲಿದೆ. ಇದನ್ನು
ಸಂವಿಧಾನಾತ್ಮಕ ಹಕ್ಕುಗಳಲ್ಲಿ
ಸೇರಿಸುವುದಕ್ಕೆಂದು ಕೇಂದ್ರ
ಸರ್ಕಾರ ಮಸೂದೆ ಸಿದ್ಧಪಡಿಸುತ್ತಿದೆ.
ದೇಶದ ಯುವಜನತೆ ವಿವಿಧ ಆರ್ಥಿಕ
ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿ
ತೊಡಗಿಸಿಕೊಳ್ಳುವುದಕ್ಕೆ ಇದು
ನೆರವಾಗಲಿದೆ. 15-45 ವರ್ಷದೊಳಗಿನ
ವ್ಯಕ್ತಿ ನಿರ್ದಿಷ್ಟ ಕೆಲಸದ ಬಗ್ಗೆ ಪಡೆಯಲು
ಇದರಿಂದ ಹೆಚ್ಚಿನ ಅವಕಾಶ ಸಿಗಲಿದೆ.
ಜರ್ಮನಿ, ಸ್ವಿಜರ್ಲೆಂಡ್ ಮತ್ತು ದಕ್ಷಿಣ
ಕೊರಿಯಾ ಸೇರಿದಂತೆ ಹಲವು
ದೇಶಗಳಲ್ಲಿ ಕೌಶಲ್ಯವೂ
ಮೂಲಭೂತ ಹಕ್ಕಾಗಿದೆ. ಛತ್ತೀಸ್​
ಗಢದಲ್ಲೂ ಕೌಶಲ್ಯ ಅಭಿವೃದ್ಧಿಯನ್ನು
ಮೂಲಭೂತ ಹಕ್ಕುಗಳಲ್ಲಿ ಒಂದು
ಎಂದು ಪರಿಗಣಿಸಲಾಗಿದೆ. ನೂತನ
ಯೋಜನೆಯ ಮೂಲಕ 2022ರ
ಹೊತ್ತಿಗೆ 40 ಕೋಟಿ ಜನರಿಗೆ ಕೌಶಲ್ಯ
ತರಬೇತಿ ನೀಡುವ ಗುರಿ
ಹೊಂದಲಾಗಿದೆ.
***
ಕೋಟ್ಯಂತರ ಜನರ ಆಶಾಕಿರಣ
ಸದ್ಯ ದೇಶದಲ್ಲಿ ಸರ್ಕಾರಿ
ಸ್ವಾಮ್ಯದ 982 ಉದ್ಯೋಗ
ಸಂಬಂಧಿತ ಪೋರ್ಟಲ್​ಗಳಿದ್ದು,
ಅವುಗಳಲ್ಲಿ 956 ಪೋರ್ಟಲ್​ಗಳು
ಸಕ್ರಿಯವಾಗಿವೆ. 4.47 ಕೋಟಿ
ಉದ್ಯೋಗಾಕಾಂಕ್ಷಿಗಳು
ಇವುಗಳಲ್ಲಿ ನೋಂದಣಿ
ಮಾಡಿಕೊಂಡಿದ್ದಾರೆ. ಇದರಲ್ಲಿ
2.68 ಕೋಟಿ ಜನತೆ 29
ವರ್ಷದೊಳಗಿನವರಾಗಿದ್ದಾರೆ.
ಈಗಾಗಲೇ ಚಾಲ್ತಿಯಲ್ಲಿ ರುವ
ವಿವಿಧ ಪೋರ್ಟಲ್​ಗಳಲ್ಲಿ
ನೋಂದಾಯಿಸಿಕೊಂಡಿರುವ
ಆಯ್ದ 2 ಕೋಟಿ
ಆಕಾಂಕ್ಷಿಗಳನ್ನು ನೂತನವಾಗಿ
ಆರಂಭಿಸಲಾಗಿರುವ ರಾಷ್ಟ್ರೀಯ
ವೃತ್ತಿಸೇವಾ ಪೋರ್ಟಲ್​ಗೆ
ಸೇರಿಸಿಕೊಳ್ಳುವ ಉದ್ದೇಶವನ್ನು
ಕಾರ್ವಿುಕ ಸಚಿವಾಲಯ ಹೊಂದಿದೆ.
ಅಲ್ಲದೆ, ಸುಮಾರು 9 ಲಕ್ಷ
ಸಂಸ್ಥೆಗಳನ್ನೂ ಎನ್​ಸಿಎಸ್ ವ್ಯಾಪ್ತಿಗೆ
ತರಲಾಗುತ್ತದೆ.
***
ಯಾರಿಗೆ ಅವಕಾಶ?
ನಿರುದ್ಯೋಗಿಗಳು, ವೃತ್ತಿ
ಸಂಬಂಧಿ ಕೌನ್ಸೆಲಿಂಗ್ (ಆಪ್ತ
ಸಮಾಲೋಚನೆ) ಬಯಸುವ
ವಿದ್ಯಾರ್ಥಿಗಳು, ಅನಕ್ಷರಸ್ಥರು,
ಮಾಜಿ ಸೈನಿಕರು, ಹಿರಿಯ
ನಾಗರಿಕರು, ಅಂಗವಿಕಲರು
ಉದ್ಯೋಗ ಸಹಾಯವಾಣಿ -
18004251514

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023