Drop


Thursday, July 16, 2015

ಕೃಷಿ ಭೂಮಿ ಖರೀದಿ ಆದಾಯ ಮಿತಿ 2 ಲಕ್ಷ ದಿಂದ 25 ಲಕ್ಷ ರೂ.ಗೆ ಏರಿಸಲು ಸಂಪುಟ ತೀರ್ಮಾನ


ಉದಯವಾಣಿ, Jul 16, 2015, 3:40 AM IST
ವಿಧಾನಪರಿಷತ್: ಹೊಸ ಪಹಣಿದಾರರು
(ಕೃಷಿಕರಲ್ಲದವರು) ಕೃಷಿ ಭೂಮಿ ಖರೀದಿಸಲು
ಇರುವ ಆದಾಯ ಮಿತಿಯನ್ನು 2 ಲಕ್ಷ
ರೂ.ನಿಂದ 25 ಲಕ್ಷ ರೂ.ಗೆ ಹೆಚ್ಚಿಸಲು
ಶೀಘ್ರದಲ್ಲೇ ಭೂಸುಧಾರಣಾ ಕಾಯ್ದೆಗೆ
ತಿದ್ದುಪಡಿ ತರಲಾಗುವುದು ಎಂದು ಕಂದಾಯ
ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದ್ದಾರೆ.
ಆದಾಯ ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಿಸುವ
ಬಗ್ಗೆ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ
ಕೈಗೊಂಡ ತೀರ್ಮಾನಕ್ಕೆ ಸಚಿವ
ಸಂಪುಟವೂ ಒಪ್ಪಿಗೆ ನೀಡಿದೆ.
ಅದರಂತೆ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ
ತಂದು ಇದನ್ನು ಜಾರಿಗೊಳಿಸಲಾಗುವುದು. ಪ್ರಸಕ್ತ
ಅಧಿವೇಶನದಲ್ಲೇ ತಿದ್ದುಪಡಿ ವಿಧೇಯಕ
ಮಂಡಿಸಲಾಗುವುದು ಎಂದು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬುಧವಾರ ಬಿಜೆಪಿ
ಸದಸ್ಯ ಅಶ್ವತ್ಥನಾರಾಯಣ ಅವರ ಪ್ರಶ್ನೆಗೆ
ಉತ್ತರಿಸಿದ ಸಚಿವರು, ಪ್ರಸ್ತುತ ಕಾನೂನಿನಲ್ಲಿ 2 ಲಕ್ಷ
ರೂ.ಗಿಂತ ಕಡಿಮೆ ಆದಾಯ
ಹೊಂದಿರುವ
ಹೊಸ ಪಹಣಿದಾರರು ಮಾತ್ರ ಕೃಷಿ ಭೂಮಿ
ಖರೀದಿಸಲು ಅವಕಾಶವಿದೆ. ಆದರೆ, ಭೂಮಿ
ಬೆಲೆ ಹೆಚ್ಚಾಗಿರುವುದರಿಂದ ಮತ್ತು ಹಣದುಬ್ಬರ
ಕಾರಣದಿಂದ ಆದಾಯ ಮಿತಿ ಹೆಚ್ಚಿಸಬೇಕು
ಎಂಬ ಒತ್ತಡ ಇದೆ. ಈ ಹಿನ್ನೆಲೆಯಲ್ಲಿ
ಸಂಪುಟ ಉಪಸಮಿತಿ ರಚಿಸಲಾಗಿತ್ತು. ಅದು
ಆದಾಯ ಮಿತಿ ಯನ್ನು 2 ಲಕ್ಷದಿಂದ 25
ಲಕ್ಷಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ.
ಅದರಂತೆ ಸರ್ಕಾರ ಸೂಕ್ತ ತೀರ್ಮಾನ
ಕೈಗೊಳ್ಳಲಿದೆ ಎಂದರು.