Drop


Sunday, July 26, 2015

ಹಿಮಾಲಯದ 5260 ಶೃಂಗಕ್ಕೆ ನಳಿನಿ ಸೇನ್‍ಗುಪ್ತಾ ಹೆಸರು


Himalayan peak to be named after veteran mountaineer Nalini
ಸಾಂದರ್ಭಿಕ ಚಿತ್ರ
ಪುಣೆ: ಹಿಮಾಲಯದ ಹಮ್ಟಾ ಪಾಸ್ಪ್ರದೇಶದ 5260 ಪರ್ವತ ಶೃಂಗಕ್ಕೆ ಖ್ಯಾತ ಪರ್ವತಾರೋಹಿ ನಳಿನಿ ಸೇನ್‍ಗುಪ್ತಾ ಅವರ ಹೆಸರಿಡಲಾಗಿದೆ.

ಗಿರಿಪ್ರೇಮಿ ಎಂಬಪರ್ವತಾರೋಹಣ ಸಂಸ್ಥೆಯ ತಂಡ ವೊಂದು ಇತ್ತೀಚೆಗೆ 5260 ಶೃಂಗಕ್ಕೆ ತಲುಪಿದ್ದು, ಇದಕ್ಕೆ `ಮೌಂಟ್ ನಳಿನಿ' ಎಂದು ನಾಮಕರಣ ಮಾಡಿದ್ದಾರೆ. ಹಿಮಾಲಯದ ಹೊಸ ಪರ್ವತ ಶೃಂಗಕ್ಕೆ ಯಾವ ತಂಡ ಮೊದಲು ಏರುತ್ತದೋ ಆ ತಂಡವೇ ಪರ್ವತಶ್ರೇಣಿಗೆ ನಾಮಕರಣ ಮಾಡುತ್ತದೆ.

ಅದರಂತೆ, ಗಿರಿಪ್ರೇಮಿ ತಂಡವು 70ರ ದಶಕದ ಖ್ಯಾತ ಪರ್ವತಾರೋಹಿ ನಳಿನಿ ಅವರಿಗೆ ಈ ಗೌರವ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಳಿನಿ, ``ನನಗಂತೂ ಖುಷಿಯಾಯಿತು. ನಾನು ಆದಷ್ಟು ಬೇಗಬೇಸ್‍ಕ್ಯಾಂಪ್‍ಗೆ ಹೋಗುತ್ತೇನೆ. ಈಗ ವಯಸ್ಸಾಗಿರುವ ಕಾರಣ ನನಗೆ ಪರ್ವತಾ ರೋಹಣ ಸಾಧ್ಯವಿಲ್ಲ'' ಎಂದಿದ್ದಾರೆ.