ಗಂಟೆಗೆ 603 ಕಿ.ಮೀ ವೇಗದಲ್ಲಿ ಚಲಿಸುವ ರೈಲು ಮೆಗ್ಲೆವ್:

ಉಳ್ಳವರು ವಿಮಾನದಲ್ಲಿ ಪ್ರಯಾಣಿಸಿದರೆ, ಬಡವರು
ರೈಲಿನಲ್ಲಿ ಸಂಚರಿಸುತ್ತಾರೆ. ಚೀನಾ,
ಜಪಾನ್, ಜರ್ಮನಿ ದೇಶಗಳಲ್ಲಿ ಚಾಲ್ತಿಯಲ್ಲಿರುವ
ಬುಲೆಟ್ ಮತ್ತು ಅತ್ಯಂತ ವೇಗದ ರೈಲಿನ
ಸರಾಸರಿ ವೇಗ ಗಂಟೆಗೆ 300 ಕಿ.ಮೀ.
ನಮ್ಮ ದೇಶದ ಅತೀ ವೇಗದ ಶತಾಬ್ದಿ
ರೈಲಿನ ವೇಗ ಗಂಟೆಗೆ 150 ಕಿ.ಮೀ.
ಮೆಗ್ಲೆವ್ ತಂತ್ರಜ್ಞಾನ ಬಳಸಿದ ರೈಲುಗಳು
ಗಂಟೆಗೆ 552 ಕಿ.ಮೀ., 590
ಕಿ.ಮೀ ವೇಗದವರೆಗೂ ಸಂಚರಿಸಿ ಹಳೆ
ದಾಖಲೆ ಮುರಿಯುತ್ತಾ, ಹೊಸ ದಾಖಲೆ
ನಿರ್ಮಿಸುತ್ತಾ ಬಂದಿವೆ.
ಈ ಮೆಗ್ಲೆವ್ ರೈಲು ಓಬಿರಾಯನ ಕಾಲದ ಚಕ್ರಗಳು
ಮತ್ತು ಹಳಿಗಳ ಮೇಲೆ ಚಲಿಸುವುದಿಲ್ಲ, ಇದು ಬಳಸು
ವುದು ಮ್ಯಾಗ್ನೆಟಿಕ್
ಲೀವಿಟೀಷನ್ (ಮೆಗ್+ಲೆವ್=
ಮೆಗ್ಲೆವ್) ತಂತ್ರಜ್ಞಾನವನ್ನು ಅಂದರೆ
ಅಯಸ್ಕಾಂತೀಯ ತತ್ವದಡಿ ಇದು
ಹಳಿಗಳ ಮೇಲೆ ತೇಲುತ್ತಾ ಸಾಗುತ್ತದೆ.
ನೂಕುಬಲ ಹೇಗೆ ಸಿಗುತ್ತದೆ?
ಎರಡು ಅಯಸ್ಕಾಂತದ ತುಂಡುಗಳನ್ನು
ತೆಗೆದುಕೊಂಡು
ಒಂದಕ್ಕೊಂದು ಜೋಡಿಸಲು
ಯತ್ನಿಸಿದರೆ ವಿರುದ್ಧ ಧ್ರುವಗಳು ಆಕರ್ಷಿಸಿದರೆ
ಸಮಾನ ಧ್ರುವಗಳು ದೂರಕ್ಕೆ ನೂಕುತ್ತವೆ. ಏಳು ಬೋಗಿಗಳನ್ನು
ಹೊಂದಿರುವ ಈ ರೈಲಿಗೆ
ಮುಂದೆ ನೂಕಲು ಎಂಜಿನ್ ಇರುವುದಿಲ್ಲ. ಇದು
ಎಲೆಕ್ಟ್ರೋ ಮ್ಯಾಗ್ನೆಟಿಕ್
(ವಿದ್ಯುತ್ಕಾಂತೀಯ) ಶಕ್ತಿಯನ್ನು
ಬಳಸಿಕೊಂಡು ತೇಲುತ್ತಾ
ಚಲಿಸುತ್ತದೆ. ವಿದ್ಯುತ್ಕಾಂತೀಯ
ಕ್ಷೇತ್ರವನ್ನು ಹಳಿಗಳು ಮತ್ತು ರೈಲಿನ ನಡುವೆ
ಸ್ಪಷ್ಟಿಸುತ್ತಾರೆ. ಕಾಂತೀಯ
ಕ್ಷೇತ್ರದಿಂದಾಗಿ ರೈಲು ಮತ್ತು ಹಳಿಗಳ ನಡುವೆ
ಏರ್ಪಡುವ ಆಕರ್ಷಕ ಶಕ್ತಿ (ಅಟ್ರ್ಯಾಕ್ಟಿವ್ ಫೋರ್ಸ್)
ಮತು ವಿಕರ್ಷಕ ಶಕ್ತಿಯಿಂದಾಗಿ (ರಿಪಲ್ಸಿವ್
ಫೋರ್ಸ್) ರೈಲು ಗಾಳಿಯಲ್ಲಿ ತೇಲುತ್ತಾ ಇರುವಂತೆಯೇ
ಮುಂದೆ ಸಾಗುತ್ತದೆ.
ವಿದ್ಯುತ್ಕಾಂತೀಯ ಕಾರ್ಯ ಹೇಗೆ?
ಒಂದು ಕಬ್ಬಿಣದ ಸಣ್ಣ ತುಂಡಿಗೆ
ತಾಮ್ರದ ತಂತಿಯನ್ನು ಸುರಳಿಯಂತೆ
ಸುತ್ತಿ ಒಂದು ಎಎ ಅಳತೆಯ ಬ್ಯಾಟರಿಯ
(ಪೆನ್ ಟಾರ್ಚ್ ಸೆಲ್) ಧನಾತ್ಮಕ (+) ತುದಿಗೂ ಮತ್ತು
ಇನ್ನೊಂದು ತುದಿಯನ್ನು
ನಕರಾತ್ಮಕ (-) ತುದಿಗೂ ಹಿಡಿದರೆ ಕಬ್ಬಿಣದ
ತುಂಡಿನ ಸುತ್ತ ಸುತ್ತಿರುವ ತಾಮ್ರದ
ತಂತಿಗಳ ಮೂಲಕ ವಿದ್ಯುತ್ ಪ್ರವಹಿಸಿ ತಾತ್ಕಾಲಿಕ
ಕಾಂತಕ್ಷೇತ್ರವನ್ನು ಸ್ಪಷ್ಟಿಸುತ್ತದೆ ಅಲ್ಲವೇ.
ಕಬ್ಬಿಣದ ತುಂಡಿಗೆ ಗುಂಡು ಸೂಜಿಯನ್ನು
ಹಿಡಿದರೆ ಕಾಂತಕ್ಷೇತ್ರದಿಂದಾಗಿ
ಆಕರ್ಷಿಸುತ್ತದೆ. ನೀವು
ಬ್ಯಾಟರಿಯಿಂದ ತಾಮ್ರದ ತಂತಿಯ
ತುದಿಯನ್ನು ತೆಗೆದರೆ ಆಕರ್ಷಿಸಿದ್ದ
ಗುಂಡುಸೂಜಿಗಳು ಕೆಳಕ್ಕೆ ಬೀಳುತ್ತವೆ.
ಇದೇ ರೀತಿ ರೈಲಿನ ತಳಕ್ಕೆ
ಅಯಸ್ಕಾಂತ ಅಳವಡಿ ಸಿರುತ್ತಾರೆ ಮತ್ತು ಲೋಹದ
ಸುರುಳಿ ಸುತ್ತಿದ ಲೈನಿಂಗ್
ಹೊಂದಿದ ಹಳಿಗಳ ನಡುವೆ
ವಿದ್ಯುತ್ ಹಾಯಿಸಿದಾಗ ತಾತ್ಕಾಲಿಕ ಕಾಂತಕ್ಷೇತ್ರ
ಸೃಷ್ಟಿಯಾಗಿ ಹಳಿಗಳಿಂತ ಮೇಲೆ ತೇಲುತ್ತಾ
ಇರುವಂತೆಯೇ ರೈಲು ಮುಂದೆ ಸಾಗುತ್ತದೆ. ಹಳಿ
ಮತ್ತು ಚಕ್ರಗಳ ಆಧಾರದಲ್ಲಿ ಚಲಿಸುವ ರೈಲಿಗೆ
ಹೋಲಿಸಿದರೆ ಇವುಗಳ ವೇಗ ಹೆಚ್ಚು. ಹಳಿ ಮತ್ತು ರೈಲಿನ
ದುರಸ್ತಿಗಾಗಿ ಬೇಕಾಗುವ ನಿರ್ವಹಣಾ ವೆಚ್ಚ ಕಡಿಮೆ.
ವಾತಾವರಣದಿಂದ ಹಳಿಗಳು ಹಾಳಾಗುವುದೂ ಕಡಿಮೆ.
ರೈಲು ಮತ್ತು ಹಳಿಗಳ ನಡುವೆ ಭೌತಿಕವಾಗಿ ಸಂಪರ್ಕ
ಇಲ್ಲದಿರುವುದರಿಂದ ಕಾರ್ಯಕ್ಷಮತೆ
ಚೆನ್ನಾಗಿರುತ್ತದೆ. ಚಲನೆಯ ವೇಳೆಯಲ್ಲಿಯೂ
ಅತ್ಯಂತ ಕಡಿಮೆ ಶಬ್ಧ
ಹೊಮ್ಮುತ್ತದೆ. ಈ ರೈಲುಗಳು
ಕಂಪ್ಯೂಟರ್
ನಿಯಂತ್ರಿತವಾಗಿರುವುದರಿಂದ ಸಿಗ್ನಲ್
ದೀಪಗಳ ಅವಶ್ಯಕತೆಯಿಲ್ಲ. ಯಾವ
ಸ್ಥಳದಲ್ಲಿ ಬೇಕೊ ಅಲ್ಲಯೇ
ರೈಲನ್ನು ನಿಖರವಾಗಿ ನಿಲ್ಲಿಸಬಹುದು. ರೈಲಿನ
ಹಳಿಗಳನ್ನು ಮತ್ತು ರೈಲನ್ನು ನಿರ್ಮಿಸಲು ಸಾವಿರಾರು ಕೋಟಿ
ರೂಪಾಯಿ ಖರ್ಚಾಗುತ್ತದೆ. ಹೆಚ್ಚಿನ
ಉಷ್ಣಾಂಶದಲ್ಲಿ ಅಯಸ್ಕಾಂತಗಳು
ಹಾಳಾಗುವ ಸಾಧ್ಯತೆ ಇರುತ್ತದೆ.
ಈ ರೈಲನ್ನು ಜಪಾನಿನ ಟೋಕಿಯೊ
ಮತ್ತು ಒಸಕಾ ನಗರಗಳ ನಡುವೆ ನಗೋಯ ನಗರದ
ಮಾರ್ಗವಾಗಿ ಓಡಿಸಲು ಯೋಚಿಸಲಾಗಿದೆ. 2027ಕ್ಕೆ
ಟೋಕಿಯೊ ಮತ್ತು ನಗೋಯ ನಗರಗಳ
ನಡುವೆ ರೈಲು ಸಂಚಾರ ಆರಂಭಿಸುವ
ನಿರೀಕ್ಷೆ ಇದೆ. ಟೋಕಿಯೊ
ಮತ್ತು ಒಸಕಾ ನಗರಗಳ ನಡುವೆ 2045ಕ್ಕೆ ಹಳಿಗಳ
ಕೆಲಸ ಮುಗಿಯಲಿದೆ ಎಂದು
ಅಂದಾಜಿಸಲಾಗಿದೆ. ಗಂಟೆಗೆ ಸರಾಸರಿ 72
ಕಿ.ಮೀ ವೇಗದಲ್ಲಿ ಹೋಗುವ ರೈಲು
ಬೆಂಗಳೂರಿನಿಂದ ದೆಹಲಿ ತಲುಪಲು ಮೂರು
ದಿನಗಳನ್ನು ತೆಗೆದುಕೊಳ್ಳುತ್ತದೆ.
ಮೆಗ್ಲೆವ್ ರೈಲು ಏನಾದರೂ ನಮ್ಮ ದೇಶದಲ್ಲಿ
ಬಂದರೆ ಬೆಂಗಳೂರಿನಿಂದ ದೆಹಲಿ
ತಲುಪಲು ನಾಲ್ಕು ಗಂಟೆಗಳು ಸಾಕು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023