ಫಾರ್ಚ್ಯೂನ್ ಪಟ್ಟಿಗೆ ಭಾರತದ 7 ಕಂಪೆನಗಳು


ನ್ಯೂಯಾರ್ಕ್ (ಪಿಟಿಐ):
ಫಾರ್ಚ್ಯೂನ್ ಸಿದ್ಧಪಡಿಸಿರುವ ವಿಶ್ವದ
500 ಬೃಹತ್ ಕಂಪೆನಿಗಳ ಪಟ್ಟಿಯಲ್ಲಿ
ಭಾರತದ ಏಳು ಕಂಪೆನಿಗಳೂ ಸ್ಥಾನ
ಪಡೆದುಕೊಂಡಿವೆ.
ಭಾರತೀಯ ತೈಲ ನಿಗಮ (ಐಒಸಿ),
ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ
ಮೋಟಾರ್ಸ್, ಭಾರತೀಯ
ಸ್ಟೇಟ್ ಬ್ಯಾಂಕ್ (ಎಸ್ಬಿಐ), ಭಾರತ್
ಪೆಟ್ರೋಲಿಯಂ ಕಾರ್ಪೊರೇಷನ್
ಲಿ. (ಬಿಪಿಸಿಎಲ್), ಹಿಂದೂಸ್ತಾನ್
ಪೆಟ್ರೋಲಿಯಂ ಕಾರ್ಪೊರೇಷನ್
ಲಿ. (ಎಚ್ಪಿಸಿಎಲ್), ತೈಲ ಮತ್ತು
ನೈಸರ್ಗಿಕ ಅನಿಲ ನಿಗಮ (ಒಎನ್ಜಿಸಿ)
'ಫಾರ್ಚ್ಯೂನ್-500 ಲಾರ್ಜೆಸ್ಟ್
ಕಂಪೆನೀಸ್' ಪಟ್ಟಿಗೆ ಸೇರಿವೆ.
ವಿಶ್ವದ ಈ 500 ಬೃಹತ್ ಕಂಪೆನಿಗಳು
2014ರಲ್ಲಿ ಒಟ್ಟಾರೆಯಾಗಿ 31.2 ಲಕ್ಷ
ಕೋಟಿ ಅಮೆರಿಕನ್ ಡಾಲರ್ ವರಮಾನ
ಗಳಿಸಿದ್ದು, ಒಟ್ಟು 1.70 ಲಕ್ಷ ಕೋಟಿ
ಡಾಲರ್ಗಳಷ್ಟು ನಿವ್ವಳ ಲಾಭವನ್ನೂ
ಗಳಿಸಿವೆ.
500 ಕಂಪೆನಿಗಳು ವಿಶ್ವದ 36
ದೇಶಗಳಲ್ಲಿ ವಹಿವಾಟು
ನಡೆಸುತ್ತಿದ್ದು, ಒಟ್ಟಾರೆಯಾಗಿ 65
ಲಕ್ಷ ಮಂದಿಗೆ ಉದ್ಯೋಗಾವಕಾಶ
ನೀಡಿವೆ.
ವಾಲ್ಮಾರ್ಟ್ ಪ್ರಥಮ:
'ಫಾರ್ಚ್ಯೂನ್-500 ಲಾರ್ಜೆಸ್ಟ್
ಕಂಪೆನೀಸ್' ಪಟ್ಟಿಯಲ್ಲಿ ವಾಲ್ಮಾರ್ಟ್
ಮೊದಲ ಸ್ಥಾನದಲ್ಲಿದೆ. ಚೀನಾದ
ತೈಲ ಸಂಸ್ಕರಣೆ ಕಂಪೆನಿ ಸಿನ್ ಒಪೆಕ್
ಗ್ರೂಪ್ ಎರಡನೇ ಸ್ಥಾನದಲ್ಲಿದೆ.
ನೆದರ್ಲೆಂಡ್ನ ರಾಯಲ್ ಡಚ್ ಷೆಲ್,
ಚೀನಾ ನ್ಯಾಷನಲ್
ಪೆಟ್ರೋಲಿಯಂ, ಎಕ್ಸಾನ್ ಮೊಬಿಲ್
ನಂತರದ ಸ್ಥಾನಗಳಲ್ಲಿವೆ.
ಈ 500 ಜಾಗತಿಕ ಮಟ್ಟದ ಕಂಪೆನಿಗಳಲ್ಲಿ
ಆಪಲ್(15), ಜೆ.ಪಿ ಮಾರ್ಗನ್ ಚೇಸ್(61),
ಐಬಿಎಂ(82), ಮೈಕ್ರೊಸಾಫ್ಟ್(95),
ಗೂಗಲ್(124), ಪೆಪ್ಸಿ(141), ಇಂಟೆಲ್(182),
ಗೋಲ್ಡ್ಮನ್ ಸ್ಯಾಷ್(278)
ಸೇರಿದಂತೆ 128 ಕಂಪೆನಿಗಳು ಅಮೆರಿಕ
ಮೂಲದವೇ ಆಗಿವೆ.
ರ್ಯಾಕಿಂಗ್ ಏರಿಳಿತ: ಕಳೆದ ವರ್ಷಕ್ಕೆ
ಹೋಲಿಸಿದರೆ ಈ ಬಾರಿ ಟಾಟಾ
ಮೋಟಾರ್ಸ್ ಮತ್ತು ಎಸ್ಬಿಐ ಉತ್ತಮ
ಸಾಧನೆಯೊಂದಿಗೆ ತಮ್ಮ
ಸ್ಥಾನವನ್ನು
ಮೇಲ್ದರ್ಜೆಗೇರಿಸಿಕೊಂಡಿದ್ದರೆ,
ರಿಲಯನ್ಸ್, ಬಿಪಿಸಿಎಲ್, ಎಚ್ಪಿಸಿಎಲ್, ಒಎನ್ಜಿಸಿ
ಫಾರ್ಚ್ಯೂನ್ ಪಟ್ಟಿಯ
ರ್ಯಾಕಿಂಗ್ನಲ್ಲಿ ಕೆಳಕ್ಕಿಳಿದಿವೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023