ಐಎಎಸ್ ಮಾದರಿಯಲ್ಲಿ bank exam


ಐಬಿಪಿಎಸ್ 23ಕ್ಕೂ ಹೆಚ್ಚು ರಾಷ್ಟ್ರೀಕೃತ
ಬ್ಯಾಂಕುಗಳ ಪ್ರೊಬೆಷನರಿ
ಆಫೀಸರ್/ಮ್ಯಾನೇಜ್ ಮೆಂಟ್ ಟ್ರೈನಿ
ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಬಾರಿ
ನೇಮಕಾತಿಗೆ ಹೊಸ ವಿಧಾನ
ಅನುಸರಿಸಲಾಗುತ್ತಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.
ನಿರೀಕ್ಷೆಯಂತೆಯೇ ಬ್ಯಾಂಕ್
ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್)
ರಾಷ್ಟ್ರೀಕೃತ ಬ್ಯಾಂಕುಗಳಿಗಾಗಿನ
ನೇಮಕಾತಿ ವಿಧಾನದಲ್ಲಿ ಬದಲಾವಣೆ ತಂದಿದ್ದು,
ಈ ಬಾರಿಯಿಂದ ಕೆಎಎಸ್, ಐಎಎಸ್
ಮಾದರಿಯಲ್ಲಿ ಎರಡು ಲಿಖಿತ
ಪರೀಕ್ಷೆಗಳನ್ನು ನಡೆಸಲಿದೆ. ಸದ್ಯ
ಪ್ರೊಬೆಷನರಿ ಆಫೀಸರ್/
ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಕ್ಕೆ
ಅಧಿಸೂಚನೆ ಹೊರಡಿಸಿದ್ದು, ಪೂರ್ವಭಾವಿ
ಪರೀಕ್ಷೆ (ಪ್ರಿಲಿಮ್ಸ್) ಮತ್ತು
ಮುಖ್ಯಪರೀಕ್ಷೆ (ಮೈನ್ಸ್)ಯನ್ನು
ಅಕ್ಟೋಬರ್ನಲ್ಲಿ ನಡೆಸುವುದಾಗಿ ಪ್ರಕಟಿಸಿದೆ.
ಇದುವರೆಗೆ ಒಂದು ಲಿಖಿತ ಪರೀಕ್ಷೆ
ಮತ್ತು ಸಂದರ್ಶನ ನಡೆಸಿ ನೇಮಕಾತಿ
ಮಾಡಿಕೊಳ್ಳಲಾಗುತ್ತಿತ್ತು.
ಉದ್ಯೋಗಿಗಳ ಗುಣಮಟ್ಟ ಸುಧಾರಿಸುವ
ಉದ್ದೇಶದಿಂದ ಈಗ ಈ ಬದಲಾವಣೆ
ತರಲಾಗಿದೆ. ಸದ್ಯ ಇದೊಂದೇ
ನೇಮಕಾತಿಯಲ್ಲಿ ಈ ವಿಧಾನ ಅನುಸರಿಸಲಾಗುತ್ತಿದೆ.
ಗ್ರಾಮೀಣ ಬ್ಯಾಂಕುಗಳಿಗಾಗಿನ
(ಆರ್ಆರ್ಬಿ) ನೇಮಕಾತಿಗೆ ಮತ್ತು
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ
ವಿಶೇಷ ಹುದ್ದೆಗಳಿಗೆ (ಸ್ಪೆಷಲಿಸ್ಟ್) ಈ
ಹಿಂದಿನಂತೆಯೇ ಒಂದೇ ಒಂದು
ಲಿಖಿತ ಪರೀಕ್ಷೆ ನಡೆಸಲಾಗುವುದು
ಎಂದು ಐಬಿಪಿಎಸ್ ಪ್ರಕಟಿಸಿದೆ. ಕೆನರಾ
ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್,
ಕಾರ್ಪೊರೇಷನ್ ಬ್ಯಾಂಕ್,
ಬ್ಯಾಂಕ್ ಆಫ್ ಇಂಡಿಯಾ, ವಿಜಯ
ಬ್ಯಾಂಕ್, ದೇನಾ ಬ್ಯಾಂಕ್,
ಭಾರತೀಯ ಮಹಿಳಾ ಬ್ಯಾಂಕ್
ಸೇರಿದಂತೆ ದೇಶದ 23ಕ್ಕೂ ಹೆಚ್ಚು
ರಾಷ್ಟ್ರೀಕೃತ ಬ್ಯಾಂಕುಗಳ
ನೇಮಕಾತಿಗಾಗಿ ಈಗ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ
10ರಿಂದ ಆಗಸ್ಟ್ 1ರ ಒಳಗೆ ಆನ್ಲೈನ್ನಲ್ಲಿ
ಅರ್ಜಿ ಸಲ್ಲಿಸಬಹುದಾಗಿದೆ. ಕೆಎಎಸ್
ಪರೀಕ್ಷೆಯಂತೆ ಪ್ರಿಲಿಮ್ಸ್ ಮತ್ತು
ಮೈನ್ಸ್ಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗಿಯೇನೂ
ಇಲ್ಲ. ಹೊಸ ನಿಯಮದ ಪ್ರಕಾರ
ಮೊದಲಿಗೆ ಆನ್ಲೈನ್ನಲ್ಲಿ ಪೂರ್ವಭಾವಿ
ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ
ಅರ್ಹತೆ ಪಡೆದವರು ಮಾತ್ರ ಮುಖ್ಯ
ಪರೀಕ್ಷೆಗೆ ಹಾಜರಾಗಬಹುದು. ಮುಖ್ಯ
ಪರೀಕ್ಷೆಯೂ ಆನ್ಲೈನ್ನಲ್ಲಿಯೇ
ನಡೆಯಲಿದ್ದು, ಇದರಲ್ಲಿ ಶಾರ್ಟ್ ಲಿಸ್ಟ್
ಮಾಡಲ್ಪಟ್ಟವರನ್ನು ಸಂದರ್ಶನಕ್ಕೆ
ಆಹ್ವಾನಿಸಲಾಗುತ್ತದೆ. ಈ ನೇಮಕ ಪ್ರಕ್ರಿಯೆಯಲ್ಲಿ
ಭಾಗವಹಿಸಿದ ರಾಷ್ಟ್ರೀಕೃತ
ಬ್ಯಾಂಕುಗಳು ಸಂದರ್ಶನ ನಡೆಸಿ ನೇಮಕಾತಿ
ಮಾಡಿಕೊಳ್ಳಲಿದ್ದು, ಪ್ರತಿ ರಾಜ್ಯದ
ನೋಡಲ್ ಬ್ಯಾಂಕುಗಳು ಈ
ಸಂದರ್ಶನವನ್ನು ಕೋಆರ್ಡಿನೇಟ್ ಮಾಡಲಿವೆ.
ಗಮನಿಸಿ. ಪೂರ್ವಭಾವಿ ಪರೀಕ್ಷೆಯನ್ನು
ಕೇವಲ ಅರ್ಹತೆಯನ್ನು ಪರೀಕ್ಷಿಸಲಷ್ಟೇ
ನಡೆಸಲಾಗುತ್ತದೆಯೇ ಹೊರತು
ಇದರಲ್ಲಿ ಪಡೆದ ಅಂಕವನ್ನು ಮೆರಿಟ್ ಲಿಸ್ಟ್ಗೆ
ಪರಿಗಣಿಸಲಾಗುವುದಿಲ್ಲ. ಈ ಪರೀಕ್ಷೆ
ಮೂಲಕ ಪಡೆದ ಅರ್ಹತೆಯು 31-03-2017ರವರೆಗೆ
ಮಾತ್ರ ವ್ಯಾಲಿಡಿಟಿ
ಹೊಂದಿರುತ್ತದೆ.
ಅರ್ಹತೆ ಏನು? ಯಾವುದೇ ವಿಷಯದಲ್ಲಿ ಪದವಿ
ಪಡೆದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ
ತಾವು ಪಡೆದಿರುವ ಶೇಕಡಾವಾರು ಅಂಕವನ್ನು
ದಾಖಲಿಸಬೇಕಾಗಿರುತ್ತದೆ. 20ರಿಂದ 30
ವರ್ಷದೊಳಗಿನವರು ಅರ್ಜಿ ಸಲ್ಲಿಸಲು
ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತರು www.ibps.
ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ
ಪಡೆಯಬಹುದು. ಆನ್ಲೈನ್ ಮೂಲಕವೇ ಅರ್ಜಿ
ಸಲ್ಲಿಸಬೇಕಾಗಿದ್ದು, 600 ರೂ. ಪ್ರವೇಶ ಶುಲ್ಕವಿರುತ್ತದೆ
(ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 100ರೂ). ರಾಜ್ಯದ
ಬೆಳಗಾವಿ, ಬೆಂಗಳೂರು, ಬೀದರ್,
ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು,
ಶಿವಮೊಗ್ಗ, ಉಡುಪಿಯಲ್ಲಿ
ಪರೀಕ್ಷೆ ನಡೆಯುವ ಸಾಧ್ಯತೆಗಳಿದ್ದು,
ಸ್ಥಳವನ್ನು ಅಭ್ಯರ್ಥಿಗಳಿಗೆ ಕಾಲ್ ಲೆಟರ್ನಲ್ಲಿ
ತಿಳಿಸಲಾಗುತ್ತದೆ.
ಬದಲಾವಣೆ ಏನೇನು? *ಈ ನೇಮಕಾತಿಯಲ್ಲಿ ಎರಡು
ಹಂತದ ಪರೀಕ್ಷೆ ನಡೆಸುವುದಲ್ಲದೆ,
ಇನ್ನೂ ಕೆಲ ಬದಲಾವಣೆಗಳನ್ನು ಐಬಿಪಿಎಸ್ ಜಾರಿಗೆ
ತಂದಿದೆ. * ಇದುವರೆಗೆ ಪದವಿಯ
ಅಂತಿಮ ವರ್ಷದಲ್ಲಿರುವ ಅಭ್ಯರ್ಥಿ ಗಳೂ
ಈ ಪರೀಕ್ಷೆ
ತೆಗೆದುಕೊಳ್ಳಬಹುದಿತ್ತು. ಆದರೆ ಈ
ಬಾರಿಯಿಂದ ಪದವಿ ಪಡೆದಿರುವ ಅಭ್ಯರ್ಥಿಗಳು
ಮಾತ್ರ ಅರ್ಜಿ ಸಲ್ಲಿಸಬಹುದು. * ಇದುವರೆಗೆ
ಪದವಿಯಲ್ಲಿ ಶೇಕಡ 60ರಷ್ಟು ಅಂಕ
ಪಡೆದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
ನೀಡಲಾಗಿತ್ತು. ಈ ಬಾರಿಯಿಂದ ಈ
ನಿರ್ಬಂಧವಿರುವುದಿಲ್ಲ. * ಈ
ಬಾರಿಯಿಂದ ಆನ್ಲೈನ್ನಲ್ಲಿ ಮಾತ್ರ ಅರ್ಜಿ
ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. *
ಮುಖ್ಯ ಪರೀಕ್ಷೆಯು ಬಯೋಮೆಟ್ರಿಕ್
ವ್ಯವಸ್ಥೆಯನ್ನು ಒಳ
ಗೊಂಡಿರಲಿದೆ.
ಪರೀಕ್ಷಾ ಕೊಠಡಿಯ ಒಳಗೆ
ಹೋಗುವಾಗಲೇ ಬಯೋಮೆಟ್ರಿಕ್ ಐಡೆಂಟಿಫಿಕೇಷನ್
ಕೇಳಲಾಗುತ್ತದೆ. ಇದನ್ನೇ ಬ್ಯಾಂಕ್ಗೆ ನೇಮಕಾತಿ
ಮಾಡಿಕೊಳ್ಳುವವರೆಗೂ ಬಳಸಲಾಗುತ್ತದೆ.
ಆನ್ಲೈನ್ ರಿಜಿಸ್ಟೇಷನ್: 10-07-2015 ರಿಂದ
01-08-2015 ಪೂರ್ವಭಾವಿ ಪರೀಕ್ಷೆಯ
ದಿನಾಂಕ: 3-10-2015, 04-10-2015,
10-10-2015, 11-10-2015 ಪೂರ್ವಭಾವಿ
ಪರೀಕ್ಷೆಯ ಫಲಿತಾಂಶ: ಅಕ್ಟೋಬರ್,
2015 ಮುಖ್ಯ ಪರೀಕ್ಷೆಯ
ದಿನಾಂಕ: 31-10-2015 ಮುಖ್ಯ
ಪರೀಕ್ಷೆಯ ಫಲಿತಾಂಶ
ನವೆಂಬರ್ 2015. ಸಂದರ್ಶನ ನಡೆಯುವ
ಸಮಯ : 2016ರ ಜನವರಿ. ಹುದ್ದೆಗೆ ನೇಮಕ :
2016ರ ಏಪ್ರಿಲ್.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023