Drop


Monday, July 6, 2015

' BHARATI , is India's Third and newest permanent research base. It is situated in Antarctica

ಅಂಟಾರ್ಟಿಕಾದಲ್ಲಿ ಸಂಶೋಧನಾ ನಿರತ 'ಭಾರತಿ'

ಅಂಟಾರ್ಟಿಕಾ: ಮೊದಲ ನೋಟದಲ್ಲಿ ಅಂತರಿಕ್ಷ ಕೇಂದ್ರದಂತೆ ಕಾಣುತ್ತಿರುವ ಮತ್ತು ತನ್ನ ರಚನೆಯಿಂದಲೇ ಎಲ್ಲರನ್ನೂ ಸೆಳೆಯುತ್ತಿರುವ ನೂತನ ಸಂಶೋಧನಾ ಕೇಂದ್ರವೊಂದನ್ನು ಭಾರತವು ಅಂಟಾರ್ಟಿಕಾ ಖಂಡದಲ್ಲಿ ಸ್ಥಾಪಿಸಿದೆ.

ಅಂಟಾಟಿಕಾ ಖಂಡದಲ್ಲಿ ಸ್ಥಾಪಿಸುತ್ತಿರುವ ಮೂರನೇ ಸಂಶೋಧನಾ ಕೇಂದ್ರ ಇದಾಗಿದೆ. ಅಂಟಾರ್ಟಿಕಾ ಖಂಡದಲ್ಲಿ 52 ದೇಶಗಳು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಅಲ್ಲಿ ವಿವಿಧ ಸಂಶೋಧನೆಗಳನ್ನು ನಡೆಸುತ್ತಿದೆ.

ಅದರಂತೆ ಭಾರತ ಸಹ ಮೊದಲ ಬಾರಿಗೆ 1983-84ರಲ್ಲಿ ಅಂಟಾರ್ಟಿಕಾದ ದಕ್ಷಿಣ ಗಂಗೋತ್ರಿಯಲ್ಲಿ ತನ್ನ ಮೊದಲ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿತ್ತು. ಆದರೆ ಸಮುದ್ರ ಮಟ್ಟ ಹೆಚ್ಚಾದ ಕಾರಣ 1989ರಲ್ಲಿ ಅದು ನೀರಿನಲ್ಲಿ ಮುಳುಗಡೆ ಆಯಿತು. ಆ ನಂತರ ಭಾರತವು 'ಮೈತ್ರಿ' ಎಂಬ ಸಂಶೋಧನಾ ಕೇಂದ್ರವನ್ನು 1990ರಲ್ಲಿ ಸ್ಥಾಪಿಸಿತು. ಅಂಟಾರ್ಟಿಕಾ ಮತ್ತು ಸಾಗರ ಸಂಶೋಧನಾ ರಾಷ್ಟ್ರೀಯ ಕೇಂದ್ರ (ಎನ್​ಸಿಎಒಆರ್) ಈ ಕೇಂದ್ರವನ್ನು ನಿರ್ವಹಿಸುತ್ತಿದೆ.

ಭಾರತವು ಹೊಸದಾಗಿ 'ಭಾರತಿ' ಎಂಬ ಸಂಶೋಧನಾ ಕೇಂದ್ರದ ನಿರ್ಮಾಣ ಕಾರ್ಯವನ್ನು 2009ರಲ್ಲಿ ಪ್ರಾರಂಭಿಸಿತು. ಈ ಕೇಂದ್ರವು 2013ರಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿತು. ಈ ಸಂಶೋಧನಾ ಕೇಂದ್ರದಲ್ಲಿ ಹಿಮಾವೃತ ಭೂಭಾಗ ಮತ್ತು ಮಂಜುಗಡ್ಡೆಯ ಕುರಿತು ಸಂಶೋಧನೆ ನಡೆಸಲಾಗುತ್ತಿದೆ. ಜತೆಗೆ ಹವಾಮಾನ ವೈಪರೀತ್ಯದ ಕುರಿತು ಸಂಶೋಧನೆ ಸಹ ನಡೆಸಲಾಗುತ್ತಿದೆ.

ಹೊಸ ಕೇಂದ್ರವು ಅಂಟಾರ್ಟಿಕಾದ ತೀರ ಪ್ರದೇಶದಲ್ಲಿ ಈ ಪ್ರದೇಶದಲ್ಲಿ -40 ಡಿಗ್ರಿ ತಾಪಮಾನವಿರುತ್ತದೆ ಮತ್ತು ಸುಮಾರು 200 ಮೈಲಿ ಪ್ರತಿ ಕಿ.ಮೀ. ವೇಗದಲ್ಲಿ ಹಿಮಗಾಳಿ ಬೀಸುತ್ತಿರುತ್ತದೆ. ಇಂತಹ ಪ್ರತಿಕೂಲ ಹವಾಮಾನದಲ್ಲೂ ಸಹ ಭಾರತೀಯ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ತೊಡಗಿದ್ದಾರೆ.