Billgates couples RICHEST IN THE WORLD

ವೆಲ್ತ್ ಎಕ್ಸ್ ಜಾಗತಿಕ ಸಂಪತ್ತು
ಸಮೀಕ್ಷೆ :
ಬಿಲ್ ಗೇಟ್ಸ್ ದಂಪತಿ ಜಗದ ಸಿರಿವಂತರು
ಬಿಲ್ ಮತ್ತು ಮೆಲಿಂಡಾ ಗೇಟ್ಸ್
ನ್ಯೂಯಾರ್ಕ್ (ಪಿಟಿಐ): ಎಂಟು ಸಾವಿರದ ಐನೂರು
ಕೋಟಿ ಡಾಲರ್ (ಅಂದಾಜು ₹5.44 ಲಕ್ಷ ಕೋಟಿ)
ಮೌಲ್ಯದ ಸಂಪತ್ತು
ಹೊಂದಿರುವ ಬಿಲ್ ಮತ್ತು
ಮೆಲಿಂಡಾ ಗೇಟ್ಸ್ ಜಗತ್ತಿನ
ಶ್ರೀಮಂತ ದಂಪತಿ
ಎಂದು ಜಾಗತಿಕ ಸಂಪತ್ತು
ಸಮೀಕ್ಷಾ ಸಂಸ್ಥೆ ವೆಲ್ತ್ ಎಕ್ಸ್ ವರದಿ
ಬುಧವಾರ ಹೇಳಿದೆ.
1975ರಲ್ಲಿ ಸ್ಥಾಪನೆಗೊಂಡ
ಮೈಕ್ರೊಸಾಫ್ಟ್ ಸಂಸ್ಥೆಗೆ ಬಿಲ್
ಗೇಟ್ಸ್ ಸಹ ಸಂಸ್ಥಾಪಕರಾಗಿದ್ದರು. ಇದೇ
ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ
ಮೆಲಿಂಡಾ ಅವರನ್ನು ಗೇಟ್ಸ್ 1994ರಲ್ಲಿ
ಮದುವೆಯಾದರು. 2000ನೇ ಇಸವಿಯಲ್ಲಿ ಗೇಟ್ಸ್
ದಂಪತಿ ಬಿಲ್ ಅಂಡ್ ಮೆಲಿಂಡಾ
ಗೇಟ್ಸ್ ಪ್ರತಿಷ್ಠಾನ ಆರಂಭಿಸಿದರು.
ಕೃಷಿ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಮತ್ತು ಇತರ
ಸಮಾಜ ಸುಧಾರಣಾ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವುದು ಪ್ರತಿಷ್ಠಾನದ
ಮುಖ್ಯ ಗುರಿ. ಏಳು ಸಾವಿರ ಕೋಟಿ ಡಾಲರ್ (ಸುಮಾರು
₹4.40 ಲಕ್ಷ ಕೋಟಿ) ಮೌಲ್ಯದ ಸಂಪತ್ತು
ಹೊಂದಿರುವ ಸ್ಪೇನ್ ಮೂಲದ
ಚಿಲ್ಲರೆ ವ್ಯಾಪಾರ ಕ್ಷೇತ್ರದ ದಿಗ್ಗಜ
ಆ್ಯಮಾನ್ಸಿಯೊ ಒರ್ಟೆಗ
ಗೊವಾನ್ ಮತ್ತು ಅವರ ಎರಡನೇ
ಹೆಂಡತಿ ಪ್ಲೋರ್ ಪೆರೆಝ್ 'ವೆಲ್ತ್ ಎಕ್ಸ್'
ಪ್ರಕಟಿಸಿದ ಶ್ರೀಮಂತ
ದಂಪತಿ ಪಟ್ಟಿಯಲ್ಲಿ ಎರಡನೇ ಸ್ಥಾನ
ಪಡೆದಿದ್ದಾರೆ.
ಆರು ಸಾವಿರದ ಐನೂರು ಕೋಟಿ ಡಾಲರ್ (ಸುಮಾರು ₹4. 13
ಲಕ್ಷ ಕೋಟಿ) ಮೌಲ್ಯದ ಸಂಪತ್ತು
ಹೊಂದಿರುವ ವಾರನ್ ಬಫೆಟ್
ಮತ್ತು ಆ್ಯಸ್ಟ್ರಿಡ್ ಮೆಂಕ್ಸ್ ದಂಪತಿ
ಮೂರನೇ ಸ್ಥಾನದಲ್ಲಿದ್ದಾರೆ. 3.8 ಸಾವಿರ ಕೋಟಿ ಡಾಲರ್
(ಸುಮಾರು ₹2. 44 ಲಕ್ಷ ಕೋಟಿ) ಮೌಲ್ಯದ
ಸಂಪತ್ತು ಹೊಂದಿರುವ 31
ವರ್ಷದ ಮಾರ್ಕ್ ಜುಕರ್ಬರ್ಗ್ ಮತ್ತು ಅವರ
ಹೆಂಡತಿ 30 ವರ್ಷದ ಪ್ರೆಸಿಲ್ಲಾ ಚಾನ್ 9ನೇ
ಸ್ಥಾನದಲ್ಲಿದ್ದು, ವೆಲ್ತ್ ಎಕ್ಸ್ ಪ್ರಕಟಿಸಿದ
ಪಟ್ಟಿಯಲ್ಲಿರುವ ಅತಿ ಕಿರಿಯ
ಶ್ರೀಮಂತ ದಂಪತಿಯಾಗಿದ್ದಾರೆ
ಜುಕರ್ ಬರ್ಗ್ ಫೇಸ್ಬುಕ್ನ ಸಹಸಂಸ್ಥಾಪಕ.
*
ಯಾರ ಆದಾಯ ಎಷ್ಟು (ಲಕ್ಷ ಕೋಟಿಗಳಲ್ಲಿ )
₹5.44 ಬಿಲ್, ಮೆಲಿಂಡಾ ಗೇಟ್ಸ್ ದಂಪತಿ
ಸಂಪತ್ತು ಮೌಲ್ಯ
₹4.40 ಒರ್ಟೆಗ ಗೊವಾನ್-ಪ್ಲೋರ್
ಪೆರೆಝ್ ದಂಪತಿ
₹2.44ಜುಕರ್ಬರ್ಗ್–ಪ್ರೆಸಿಲ್ಲಾ ದಂಪತಿ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023