Drop


Friday, July 10, 2015

ಅನುದಾನಿತ ಶಾಲೆಗಳ ಶಿಕ್ಷಕರಿಗೆ ಸೇರಿದ ದಿನದಿಂದಲೇ ವೇತನ ಮತ್ತು ಪಿಂಚಣಿ: -ಹೈಕೋರ್ಟ್ ತೀರ್ಪು


Published 10-Jul-2015 18:06 IST
ಬೆಂಗಳೂರು: ಅನುದಾನಿತ ಶಾಲಾ
ಶಿಕ್ಷಕರಿಗೆ ವೇತನ, ಪಿಂಚಣಿ
ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ರಚಿಸಿದ್ದ
ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿ
ಶುಕ್ರವಾರ ಆದೇಶ
ಹೊರಡಿಸಿದೆ.
ರಾಜ್ಯ ಸರ್ಕಾರ ರಚಿಸಿದ್ದ ಕಾಯ್ದೆ
ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ
ವಿಚಾರಣೆ ಹೈಕೋರ್ಟ್ನಲ್ಲಿ
ನಡೆಯಿತು. ವಾದ-ಪ್ರತಿವಾದ ಆಲಿಸಿದ
ನ್ಯಾಯಪೀಠ, ಶಾಲೆಗಳು
ಅನುದಾನಕ್ಕೊಳಪಟ್ಟ
ವರ್ಷದಿಂದ ವೇತನ, ಪಿಂಚಣಿ
ಸೇರಿದಂತೆ ಇತರೆ
ಸೌಲಭ್ಯಗಳನ್ನು ಶಿಕ್ಷಕರಿಗೆ
ನೀಡುವುದು ಸರಿಯಲ್ಲ. ಶಿಕ್ಷಕರು
ಸೇವೆಗೆ ಎಂದು ಸೇರಿರುತ್ತಾರೋ
ಆ ದಿನಾಂಕದಿಂದಲೇ ಸೌಲಭ್ಯಗಳನ್ನು
ಶಿಕ್ಷಕರಿಗೆ ನೀಡಬೇಕು
ಎಂದು ಮಹತ್ವದ ತೀರ್ಪು
ಪ್ರಕಟಿಸಿತು.
ಹೈಕೋರ್ಟ್ ತೀರ್ಪಿನಿಂದಾಗಿ ಅನುದಾನಿತ
ಶಾಲೆಗಳ ಶಿಕ್ಷಕರು ಫುಲ್
ಖುಷಿಯಾಗಿದ್ದಾರೆ.
ಸೇವೆಗೆ ಸೇರಿದ
ದಿನದಿಂದಲೇ ಪಿಂಚಣಿ, ವೇತನ ಇತ್ಯಾದಿ
ಸೌಲಭ್ಯಗಳನ್ನು
ಪಡೆದುಕೊಳ್ಳಲು
ಅರ್ಹತೆ
ಪಡೆದುಕೊಂಡಿದ್ದಾರೆ