ಕರ್ನಾಟಕದಲ್ಲಿ ಅಂಚೆ ಇಲಾಖೆಯಿಂದ ಮೂರು ಹೊಸ ಸೇವೆ

ಕರ್ನಾಟಕದಲ್ಲಿ ಅಂಚೆ ಇಲಾಖೆಯಿಂದ ಮೂರು ಹೊಸ ಸೇವೆ
(PSGadyal Teacher Vijayapur )

ಬೆಂಗಳೂರು, ಜುಲೈ 11 : ಅಂಚೆ ಇಲಾಖೆ ಕರ್ನಾಟಕದಲ್ಲಿ ಮೂರು ನೂತನ ಸೇವೆಗಳಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಿದೆ. ಕ್ಯಾಡ್ಸ್‌ ಸೇವೆ, ತುರಂತ್‌ ಸೇವಾ, ಪಿಕ್‌ ಪೋಸ್ಟ್‌ ಎಂಬ ಸೇವೆಗಳು ಆರಂಭವಾಗಲಿದೆ. ಇವುಗಳಲ್ಲಿ ತುರಂತ್ ಸೇವಾ ಈಗಾಗಲೇ ಆಂಧ್ರಪ್ರದೇಶದಲ್ಲಿ ಯಶಸ್ವಿಯಾಗಿದೆ.
ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್, ಬಿ.ವಿ.ಸುಧಾಕರ್ ಅವರು ನೂತನ ಸೇವೆಗಳ ಕುರಿತು ಮಾಹಿತಿ ನೀಡಿದರು. ಜುಲೈ ಅಂತ್ಯದ ವೇಳೆಗೆ ರಾಜ್ಯದಲ್ಲಿ ಮೂರು ನೂತನ ಸೇವೆ ಜಾರಿಗೆ ಬರಲಿದೆ ಎಂದು ತಿಳಿಸಿದರು.

ತುರಂತ್‌ ಸೇವಾ :

ತುರಂತ್‌ ಸೇವಾ ಮೂಲಕ ಗ್ರಾಹಕರು ಯಾವುದೇ ಬ್ಯಾಂಕ್ ಡೆಬಿಟ್ ಅಥವ ಕ್ರೆಡಿಟ್ ಕಾರ್ಡ್ ಬಳಸಿ 26 ಬಗೆಯ ಶುಲ್ಕಗಳನ್ನು ಪಾವತಿ ಮಾಡಬಹುದಾಗಿದೆ. ಈ ಸೇವೆ ಈಗಾಗಲೇ ಆಂಧ್ರಪ್ರದೇಶದಲ್ಲಿ ಜಾರಿಗೆ ಬಂದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಈ ಸೇವೆ ಆರಂಭಿಸುವ ಕುರಿತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಜೊತೆ ಮಾತುಕತೆ ನಡೆಸಲಾಗಿದೆ.

ಕಚೇರಿಯಲ್ಲಿಯೇ ಸ್ಟಾಂಪ್, ಕವರ್ ಸಿಗುತ್ತೆ :

ಪಿಕ್ ಪೋಸ್ಟ್‌ ಎಂಬ ಸೇವೆಯನ್ನು ಇಲಾಖೆ ಆರಂಭಿಸಲಿದೆ. ಇದರ ಅನ್ವಯ ಗ್ರಾಹಕರಿಗೆ ಮನೆ ಅಥವಾ ಕಚೇರಿಗೆ ಅಂಚೆ ಸಾಮಗ್ರಿಗಳನ್ನು ತಲುಪಿಸಲಾಗುತ್ತದೆ. ಗ್ರಾಹಕರು ಸಮೀಪದ ಅಂಚೆ ಕಚೇರಿಗೆ ದೂರವಾಣಿ ಕರೆ ಅಥವಾ ಇಮೇಲ್‌ ಕಳುಹಿಸಿದರೆ ಈ ಸೇವೆ ದೊರೆಯಲಿದೆ.

ಹಿರಿಯ ನಾಗರಿಕರಿಗಾಗಿ ಕ್ಯಾಡ್ ಸೇವೆ :

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುವ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಇಲಾಖೆ 'ಕ್ಯಾಡ್ಸ್‌' (ಕ್ಯಾಷ್‌ ಡೆಲಿವರಿ ಎಟ್‌ ದಿ ಡೋರ್‌ ಸ್ಟೆಪ್‌) ಸೇವೆಯನ್ನು ಆರಂಭಿಸಲಿದೆ.

ಉಳಿತಾಯ ಖಾತೆ ಹೊಂದಿರುವವರು ಅಂಚೆ ಕಚೇರಿಗೆ ಕರೆ ಮಾಡಿ ಖಾತೆ ಸಂಖ್ಯೆ, ಬೇಕಾದ ಹಣವ ಮೊತ್ತವನ್ನು ಹೇಳಿದರೆ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಹಣವನ್ನು ನೀಡುತ್ತಾರೆ. ಒಮ್ಮೆ 20 ಸಾವಿರ ಹಣವನ್ನು ಈ ಸೇವೆಯ ಮೂಲಕ ಪಡೆಯಬಹುದಾಗಿದೆ. ಇದಕ್ಕೆ 20 ರೂ. ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023