ಶಾಲೆ ಮಕ್ಕಳಿಂದ ಶೌಚಾಲಯ ತೊಳಿಸಲು ನೀತಿ: ಅರ್ಜಿಗಳ ಸಮಿತಿ ಶಿಫಾರಸು


ಉದಯವಾಣಿ, Jul 18, 2015, 3:40 AM IST
ವಿಧಾನಸಭೆ: ರಾಜ್ಯದಲ್ಲಿನ 8ರಿಂದ 10ನೇ
ತರಗತಿ ವರೆಗಿನ ಎಲ್ಲಾ ಜಾತಿ ಹಾಗೂ ಧರ್ಮದ ಮಕ್ಕಳು
ಸಾಮೂಹಿಕವಾಗಿ ತಿಂಗಳಲ್ಲಿ ಎರಡು ದಿನ
ಶೌಚಾಲಯ (ಸಂಡಾಸ್) ಸ್ವತ್ಛಗೊಳಿಸಬೇಕು ಹಾಗೂ ಶಾಲಾ
ಸಮೀಪದ ರಸ್ತೆ ಶುಚಿತ್ವದಲ್ಲಿ
ತೊಡಗಿಕೊಳ್ಳುವಂತೆ ಮಾಡುವ
ನೀತಿಯನ್ನು ಅಳವಡಿಸಿ ಕೊಳ್ಳುವಂತೆ
ವಿಧಾನಸಭೆಯ ಅರ್ಜಿಗಳ ಸಮಿತಿಯು ರಾಜ್ಯ
ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸಮಿತಿಯ ಅಧ್ಯಕ್ಷರೂ ಆಗಿರುವ ವಿಧಾನಸಭೆಯ
ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ
ಶುಕ್ರವಾರ ಸದನದಲ್ಲಿ ವರದಿ ಮಂಡಿಸಿದೆ. ಶಾಲಾ
ಮಕ್ಕಳಲ್ಲಿ ಸ್ವತ್ಛತೆ ಹಾಗೂ ಶುಚಿತ್ವ ಬಗ್ಗೆ ಬದ್ಧತೆ
ಮೂಡುವಂತೆ ಮಾಡಲು ಈ ನೀತಿ
ಅಳವಡಿಸಿಕೊಳ್ಳಬೇಕು. ಈ ರೀತಿಯ ಶಿಸ್ತು
ಮೈಸೂರಿನ ಶ್ರೀ ರಾಮಕೃಷ್ಣ ವಸತಿ ಶಾಲೆಯ
ಮಕ್ಕಳಲ್ಲಿ ಇದೆ. ಇದನ್ನು ರಾಜ್ಯದ ಎಲ್ಲ
ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಮತ್ತು ಅನುದಾನಿತ
ಶಾಲೆಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಶಾಲಾ
ಮಕ್ಕಳಿಗೆ ಈ ಸಂಬಂಧ ತರಬೇತಿ ಸಹ
ನೀಡಬೇಕು ಎಂದು ಸಮಿತಿ
ಶಿಫಾರಸಿನಲ್ಲಿ ತಿಳಿಸಿದೆ.
ಸ್ವತ್ಛತಾ ಕಾರ್ಯವನ್ನು ಆಯ್ದ ಕೆಲವು
ಸಮುದಾಯಗಳು ಮಾತ್ರವೇ ನಿರ್ವಹಿಸಬೇಕೆಂಬುದು
ಭಾರತೀಯ ಸಮಾಜದಲ್ಲಿ
ನಡೆದುಕೊಂಡು ಬಂದ
ಪರಂಪರೆಯಾಗಿತ್ತಾದರೂ ಇತ್ತೀಚಿನ
ದಿನಗಳಲ್ಲಿ ಆ ಸಮುದಾಯಗಳು ಈ ಕಾರ್ಯವನ್ನು
ಮಾನವೀಯತೆಗೆ ವಿರೋಧ ಎಂದು
ಭಾವಿಸಿವೆ. ಹೀಗಾಗಿ, ಇದು ಸಮಾಜದ ಎಲ್ಲ
ವರ್ಗದ ಜವಾಬ್ದಾರಿ ಎಂಬ ಅರಿವು ಮೂಡಿಸಬೇಕಿದೆ
ಎಂದು ವರದಿಯಲ್ಲಿ ತಿಳಿಸಲಾಗಿದೆ.
ಶೌಚಾಲಯ ಸ್ವತ್ಛತೆ ಹಾಗೂ ಸಾರ್ವಜನಿಕ ಅರ್ಜಿ
ಸಮಿತಿಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದಾಗ
ನಗರಾಭಿವೃದ್ಧಿ ಕಾರ್ಯದರ್ಶಿಗಳು ಸಹಮತ
ವ್ಯಕ್ತಪಡಿಸಿದ್ದಾರೆ. ಸಮಿತಿಯು ಶಿಕ್ಷಣ ಇಲಾಖೆ
ಕಾರ್ಯದರ್ಶಿ ಅಭಿಪ್ರಾಯವನ್ನೂ ಕೋರಿತ್ತು. ಆದರೆ,
ನಿಗದಿತ ಅವಧಿಯಲ್ಲಿ ಶಿಕ್ಷಣ ಇಲಾಖೆ ತನ್ನ
ಅಭಿಪ್ರಾಯ ಸಲ್ಲಿಸಿರುವುದಿಲ್ಲ ಎಂದು
ತಿಳಿಸಲಾಗಿದೆ.
ಸ್ಥಳೀಯ ಸಂಸ್ಥೆಗಳಿಗೆ
ಪೊಲೀಸ್ ಪವರ್:
ಮುನ್ಸಿಪಲ್ ನಿಯಮ ಉಲ್ಲಂ ಸಿದವರನ್ನು
ವಾರಂಟ್ ಇಲ್ಲದೆ ಬಂಧಿಸುವುದು ಮತ್ತು
ನ್ಯಾಯಾಧೀಶರ ಮುಂದೆ
ಹಾಜರುಪಡಿಸುವುದು, ಎಫ್ಐಆರ್ ಹಾಕುವುದು,
ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದು,
ದಂಡ ವಿಧಿಸುವ
ಪೊಲೀಸ್ ಅಧಿಕಾರವನ್ನು
ಸ್ಥಳೀಯ ಸಂಸ್ಥೆಗಳಿಗೆ
ನೀಡುವಂತೆಯೂ ಸಮಿತಿ ಶಿಫಾರಸು
ಮಾಡಿದೆ.
ನಗರ ಸ್ಥಳೀಯ ಸಂಸ್ಥೆಗಳ
ವ್ಯಾಪ್ತಿಯಲ್ಲಿ ಒತ್ತುವರಿ, ಭೂ ಕಬಳಿಕೆ
ಸೇರಿದಂತೆ ನಿಯಮಾವಳಿ ಉಲ್ಲಂ ಸುವವರ
ವಿರುದ್ಧ ಕ್ರಮ ಕೈಗೊಳ್ಳಲು ಆಯಾ ನಗರಸಭೆ/ಪುರಸಭೆ,
ಪಟ್ಟಣ ಪಂಚಾಯಿತಿಗಳಿಗೆ ಅಧಿಕಾರ
ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು
ವರದಿಯಲ್ಲಿ ತಿಳಿಸಲಾಗಿದೆ. ಕೆಎಂಸಿ ಕಾಯ್ದೆ
1976ರ ಕಲಂ 491 ರಲ್ಲಿ
ಸ್ಥಳೀಯ ಸರ್ಕಾರಗಳಿಗೆ
ಪೊಲೀಸ್ ಅಧಿಕಾರ
ನೀಡಲು ಕಾಯ್ದೆಗೆ ತಿದ್ದುಪಡಿ ತಂದು
38 ವರ್ಷಗಳಾಗಿದ್ದರೂ ಇದುವರೆಗೂ ಜಾರಿಗೊಳಿಸಿಲ್ಲ.
ಅರಣ್ಯ ಇಲಾಖೆಗೆ ನೀಡಿರುವ
ಪೊಲೀಸ್ ಅಧಿಕಾರಗಳನ್ನು
ಸ್ಥಳೀಯ ಸಂಸ್ಥೆಗಳ ಅಧಿಕಾರಿ/
ಸಿಬ್ಬಂದಿಗೂ ನೀಡಲು ಕ್ರಮ
ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ "ಸ್ವತ್ಛತೆಗೆ' ಸಮಿತಿ
ಹೊಗಳಿಕೆ!
ಈ ನಿರ್ಣಯಕ್ಕೆ ಪೂರಕವಾಗಿ ಪ್ರಧಾನಮಂತ್ರಿ
ನರೇಂದ್ರಮೋದಿ ಅವರು ಸ್ವತಃ ರಸ್ತೆ ಕಸಗುಡಿಸಿ
ರಾಷ್ಟ್ರಕ್ಕೆ ಮಾದರಿಯಾಗಿರುತ್ತಾರೆ ಎಂದು
ಅಭಿಪ್ರಾಯ ಪಟ್ಟಿರುವ ಸಮಿತಿ, "ದೇವಸ್ಥಾನ
ನಿರ್ಮಿಸುವ ಮೊದಲು ಶೌಚಾಲಯ
ನಿರ್ಮಿಸಿ ಎಂದು ಪ್ರಧಾನಿ ಕರೆ
ನೀಡಿರುವುದನ್ನೂ ಉಲ್ಲೇಖೀಸಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023