ಬಿಪಿಎಲ್‌ ಕಾರ್ಡುದಾರರಿಗೆ ಇನ್ನು ಎಸ್ಸೆಮ್ಮೆಸ್‌ನಲ್ಲಿ ಮಾಹಿತಿ

ಬಿಪಿಎಲ್‌ ಕಾರ್ಡುದಾರರಿಗೆ ಇನ್ನು ಎಸ್ಸೆಮ್ಮೆಸ್‌ನಲ್ಲಿ ಮಾಹಿತಿ
Educationgknews.

ವಿಧಾನಸಭೆ: ಪಡಿತರ ವ್ಯವಸ್ಥೆಯಡಿ ಪ್ರತಿ ಬಿಪಿಎಲ್‌ ಕುಟುಂಬಕ್ಕೆ ಆಯಾ ತಿಂಗಳು ಸಿಗುವ ಅಕ್ಕಿ, ಗೋಧಿ, ಸೀಮೆ ಎಣ್ಣೆ, ತಾಳೆಎಣ್ಣೆ, ಉಪ್ಪು ಎಷ್ಟು? ಅದಕ್ಕೆ ಪಾವತಿಸಬೇಕಾದ ದರ ಏನು ಎಂಬ ಬಗ್ಗೆ ಇನ್ನು ಮುಂದೆ ಬಿಪಿಎಲ್‌ ಕಾರ್ಡ್‌ದಾರರ ಮೊಬೈಲ್‌ಗೆ ಪ್ರತಿ ತಿಂಗಳು ಇಲಾಖೆಯಿಂದ ಎಸ್‌ಎಂಎಸ್‌ ಬರಲಿದೆ.

ಹೌದು, ನ್ಯಾಯಬೆಲೆ ಅಂಗಡಿಗಳಲ್ಲಿ ಹೆಚ್ಚು ದರ ವಸೂಲಿ ಮಾಡುವುದು, ನಿಗದಿತ ಪ್ರಮಾಣದಲ್ಲಿ ಪಡಿತರ ವಿತರಿಸದೇ ಇರುವುದನ್ನು ತಡೆಗಟ್ಟಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ವ್ಯವಸ್ಥೆ ಜಾರಿಗೆ ತರಲಿದೆ.

ಪ್ರಶ್ನೋತ್ತರ ಅವಧಿಯಲ್ಲಿ ಗುರುವಾರ ಜೆಡಿಎಸ್‌ ಸದಸ್ಯ ಅಖಂಡ ಶ್ರೀನಿವಾಸಮೂರ್ತಿ ಅವರ ಪರವಾಗಿ ಗೋಪಾಲಯ್ಯ ಕೇಳಿದ ಪ್ರಶ್ನೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ಈ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ ಜತೆಗೆ ಕಾರ್ಡ್‌ದಾರರ ಮೊಬೈಲ್‌ ಸಂಖ್ಯೆಗಳನ್ನು ಜೋಡಿಸಲಾಗುತ್ತಿದ್ದು, ಪ್ರಸ್ತುತ 80 ಲಕ್ಷ ಮಂದಿ ತಮ್ಮ ಮೊಬೈಲ್‌ ಸಂಖ್ಯೆಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಡ್‌ದಾರರಿಗೆ ಪ್ರತಿ ತಿಂಗಳು ಲಭ್ಯವಿರುವ ಪಡಿತರ ಮತ್ತು ಅದಕ್ಕೆ ಎಷ್ಟು ದರ ಪಾವತಿಸಬೇಕು ಎಂಬ ಬಗ್ಗೆ ಈ ಮೊಬೈಲ್‌ ಸಂಖ್ಯೆಗಳಿಗೆ ಎಸ್‌ಎಂಎಸ್‌ ಸಂದೇಶ ರವಾನಿಸಲು ತೀರ್ಮಾನಿಸಲಾಗಿದೆ ಎಂದರು.

ಅಕ್ರಮ ಬಿಪಿಎಲ್‌ ಕಾರ್ಡ್‌ ವಿರುದ್ಧ ಕಾರ್ಯಾ ಚರಣೆ: ರಾಜ್ಯದಲ್ಲಿ ಅಕ್ರಮವಾಗಿ ಅಥವಾ ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಬಿಪಿಎಲ್‌ ಕಾರ್ಡ್‌ಗಳಿದ್ದರೆ ಅದನ್ನು ಇಲಾಖೆಗೆ ಶರಣಾಗತಿ ಮಾಡುವಂತೆ ನಿರ್ದೇಶನ ನೀಡಲಾಗಿದ್ದು, ಇದಕ್ಕೆ ಜುಲೈ 30ರ ಗಡುವು ನೀಡಲಾಗಿದೆ. ನಂತರವೂ ಅಕ್ರಮ ಕಾರ್ಡ್‌ಗಳನ್ನು ವಾಪಸ್‌ ಮಾಡದೇ ಇದ್ದರೆ ಆಗಸ್ಟ್‌ 1ರಿಂದ ಅಕ್ರಮ ಪಡಿತರ ಚೀಟಿಗಳ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳ ಲಾಗುವುದು. ಜತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಅಕ್ರಮ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023