ಕೇಂದ್ರದಿಂದ ಸಾಮಾಜಿಕ-ಆರ್ಥಿಕ ಜಾತಿ ಗಣತಿ ಮಾಹಿತಿ ಬಿಡುಗಡೆ


ನವದೆಹಲಿ, ಜು.3- ಕಳೆದ ಎಂಟು ದಶಕಗಳ
ಅವಧಿಯಲ್ಲಿ ಇದೇ ಮೊದಲ ಬಾರಿಗೆ
ಸಾಮಾಜಿಕ-ಆರ್ಥಿಕ ಮತ್ತು ಜಾತಿ
ಗಣತಿಯನ್ನು ಕೇಂದ್ರ ಸರ್ಕಾರ
ಬಿಡುಗಡೆ ಮಾಡಿದ್ದು, ದೇಶದಲ್ಲಿನ
ಎಲ್ಲ ಗ್ರಾಮಾಂತರ ಪ್ರದೇಶದ
ಗೃಹಿಣಿಯರ ಪೈಕಿ ಕೇವಲ ಶೇ.4.6
ಮಂದಿ ಮಾತ್ರವೇ ಆದಾಯ ತೆರಿಗೆ
ಪಾವತಿಸುತ್ತಿದ್ದಾರೆ ಎಂಬ ಅಂಶ
ಬೆಳಕಿಗೆ ಬಂದಿದೆ.
ಆದಾಯ ತೆರಿಗೆ ನೀಡುವ ಪರಿಶಿಷ್ಟ
ಜಾತಿ ಮಹಿಳೆಯರು
ಶೇ.3.49ರಷ್ಟಾದರೆ, ಪರಿಶಿಷ್ಟ
ಪಂಗಡಕ್ಕೆ ಸೇರಿದ ಶೇ.3.34ರಷ್ಟು
ತೆರಿಗೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆ ತೆರಿಗೆ
ಕಟ್ಟುವಷ್ಟು ಆದಾಯ
ಹೊಂದಿದವರ ಸಂಖ್ಯೆ
ಶೇ.10ಕ್ಕೂ ಹೆಚ್ಚಿದೆ ಎಂದು
2011ರಲ್ಲಿ ತಯಾರಿಸಿದ ಸಾಮಾಜಿಕ-
ಆರ್ಥಿಕ ಮತ್ತು ಜಾತಿ ಗಣತಿಯ ವರದಿ
ಸ್ಪಷ್ಟಪಡಿಸಿದೆ. ಈ ಮಾಹಿತಿ ಸಂಗ್ರಹದಿಂದ
ಸರ್ಕಾರಕ್ಕೆ ನೀತಿ ರೂಪಿಸಲು
ಅನುಕೂಲವಾಗಲಿದೆ ಎಂದು ವರದಿ
ಬಿಡುಗಡೆ ಮಾಡಿದ ಕೇಂದ್ರ
ಹಣಕಾಸು ಸಚಿವ ಅರುಣ್ ಜೈಟ್ಲಿ
ಹೇಳಿದ್ದಾರೆ. ಜನರ ಕಲ್ಯಾಣಕ್ಕಾಗಿ
ಜನಪರ ಯೋಜನೆಗಳನ್ನು ರೂಪಿಸಿ,
ಪ್ರತಿಯೊಬ್ಬರಿಗೂ ಸರ್ಕಾರದ
ಯೋಜನೆಗಳ ಲಾಭ
ದೊರೆಯುವಂತೆ
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲು
ಈ ಸಾಮಾಜಿಕ-ಆರ್ಥಿಕ, ಜಾತಿ ಗಣತಿ
ನೆರವಾಗಲಿದೆ ಎಂದು ಜೈಟ್ಲಿ
ಅಭಿಪ್ರಾಯಪಟ್ಟಿದ್ದಾರೆ. 1932ರಲ್ಲಿ
ಸ್ವಾತಂತ್ರ್ಯ ಪೂರ್ವದಲ್ಲಿ ಬಿಡುಗಡೆ
ಮಾಡಲಾಗಿದ್ದ ಇಂತಹ ವರದಿ ಬಿಟ್ಟರೆ
ಇದೀಗ 2015ರಲ್ಲಿ ಬರೋಬ್ಬರಿ 83
ವರ್ಷಗಳ ನಂತರ 2011ರ ಗಣತಿ ಆಧರಿಸಿದ ಈ
ವರದಿ ಬಿಡುಗಡೆ ಮಾಡಲಾಗುತ್ತಿದೆ.
ಇದರಿಂದ ಪ್ರಾಂತೀಯ,
ಪ್ರಾದೇಶಿಕ ಸಮತೋಲನ
ಕಾಪಾಡುವುದು, ನಿರ್ದಿಷ್ಟ
ಸಮುದಾಯ, ಜಾತಿ ಮತ್ತು ಆರ್ಥಿಕ
ತಂಡಗಳ ನಡುವಿನ ತಾರತಮ್ಯ
ಹೋಗಲಾಡಿಸುವುದು ಈ ಗಣತಿಯ
ಮುಖ್ಯ ಉದ್ದೇಶವಾಗಿದೆ. ಅಲ್ಲದೆ,
ಈ ರೀತಿ ಯೋಜನೆಗಳ ಜಾರಿಯಿಂದ
ದೇಶದಲ್ಲಿನ ಗೃಹಿಣಿಯರ ಆರ್ಥಿಕ ಪ್ರಗತಿಗೆ
ಅನುಕೂಲವಾಗಲಿದೆ ಎಂದರು.
ಎಂಟು ದಶಕಗಳ ನಂತರ ಇಂತಹ
ಒಂದು ಸಮಗ್ರ ವರದಿ ಸರ್ಕಾರದ ಕೈ
ಸೇರಿದ್ದು, ಈ ವರದಿ ಭವಿಷ್ಯದಲ್ಲಿ
ಹಲವು ರೀತಿಗಳಲ್ಲಿ
ಅನುಕೂಲವಾಗಲಿದೆ ಎಂದು
ಜೈಟ್ಲಿ ಹೇಳಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023