Drop


Friday, July 17, 2015

ಸುನೀತಾ ವಿಶ್ವನಾಥನ್ ಗೆ ಅಮೆರಿಕದ ‘ ಚಾಂಪಿಯನ್ಸ್ ಆಫ್ ಚೆಂಜ್ ’ ಪುರಸ್ಕಾರ

ವಾಷಿಂಗ್ಟನ್ (ಐಎಎನ್ಎಸ್): ಅಮೆರಿಕದಲ್ಲಿ
ನೆಲೆಸಿರುವ ಭಾರತೀಯ ಮೂಲದ
ಸುನೀತಾ ವಿಶ್ವನಾಥನ್ ಅವರಿಗೆ ಅಮೆರಿಕದ
ಪ್ರತಿಷ್ಠಿತ 'ಚಾಂಪಿಯನ್ಸ್ ಆಫ್ ಚೆಂಜ್'
ಪುರಸ್ಕಾರ ಸಂದಿದೆ.
ಹವಾಮಾನ ಬದಲಾವಣೆ ಮತ್ತು ಹಿಂದೂ
ಸಂಸ್ಕೃತಿ ರಕ್ಷಣೆಗಾಗಿ ಅವರ ಅವಿರತ ಹೋರಾಟಕ್ಕೆ
ವೈಟ್ ಹೌಸ್ ಈ ಪುರಸ್ಕಾರ ನೀಡಿದೆ. ಒಟ್ಟು
12 ಜನ ಸಾಧಕರಿಗೆ ಈ ಪುರಸ್ಕಾರ ಸಂದಿದ್ದು
ಇವರಲ್ಲಿ ಸುನೀತಾ ವಿಶ್ವನಾಥನ್ ಕೂಡ
ಒಬ್ಬರು.
ಸಾಧನಾ ಎಂಬ ಸ್ವಯಂ ಸೇವಾ ಸಂಸ್ಥೆ
ನಡೆಸುತ್ತಿರುವ ಸುನೀತಾ ಹಿಂದೂ ಧರ್ಮದ
ರಕ್ಷಣೆಯ ಜೊತೆಯಲ್ಲೇ
ಜಾಗತಿಕವಾಗಿ ತಾಪಮಾನ ಬದಲಾವಣೆ ಬಗ್ಗೆ ಜಾಗೃತಿ
ಮೂಡಿಸುತ್ತಿದ್ದಾರೆ.
ಏಕತೆ ಮತ್ತು ಅಹಿಂಸೆ ಕುರಿತಂತೆ
ಅಮೆರಿಕದಲ್ಲಿ ಜನ ಜಾಗೃತಿ ಮೂಡಿಸುವ ಕಾಯಕದಲ್ಲಿ
ಸುನೀತಾ ನಿರತರಾಗಿದ್ದಾರೆ.
ಸುನೀತಾ ವಿಶ್ವನಾಥನ್ ಮೂಲತಃ ಚೆನ್ನೈ
ಮೂಲದವರು.