ಪ್ಲೂಟೊ ಪೋಟೊ ಕಳಿಸಿದ ’ನ್ಯೂ ಹೊರೈಜನ್’::


0
ಪ್ಲೂಟೊ ಪೋಟೊ ಕಳಿಸಿದ ’ನ್ಯೂ ಹೊರೈಜನ್’
ಕೊನೆ ಗ್ರಹದ ಸನಿಹ ಸರಿದ ನಾಸಾ ವ್ಯೋಮನೌಕೆ ಬೆಳಗ್ಗೆ ವೇಳೆಗೆ ಕುಬ್ಜಗ್ರಹದ ವರ್ಣಚಿತ್ರ
ನಾಸಾ: ಅಮೆರಿಕದ ಬಾಹ್ಯಕಾಶ ಸಂಶೋಧನಾ ಸಂಸ್ಥೆ ನಾಸಾ ಇದೇ ನೊದಲ ಭಾರಿಗೆ ಪ್ಲೂಟೊ ಗ್ರಹದ ವರ್ಣಚಿತ್ರಗಳನ್ನು ಬಿಡುಗಡೆ ಮಾಡಿದೆ.

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕಳುಹಿಸಿರುವ 'ನ್ಯೂ ಹೊರೈಜನ್ಸ್' ವ್ಯೋಮನೌಕೆ ಬಾಹ್ಯಾಕಾಶ ಯಾನದಲ್ಲಿ ಇತಿಹಾಸ ನಿರ್ಮಿಸಿದೆ. ಭೂಮಿಯಿಂದ ಸುಮಾರು 4.8 ಬಿಲಿಯನ್ ಕಿ.ಮೀ ದೂರವಿರುವ ಕುಬ್ಜಗ್ರಹ ಪ್ಲೂಟೋದ ಅತ್ಯಂತ ಸನಿಹಕ್ಕೆ ತಲುಪಿದೆ. ಈ ಹೊಸ ಅಧ್ಯಾಯದ ಕೆಲವು ಇಂಟರೆಸ್ಟಿಂಗ್ ವಿವರಗಳು ಇಲ್ಲಿವೆ.

* ಸಮಾರು 31 ಸಾವಿರ ಮೈಲಿ ವೇಗದಲ್ಲಿ ಸಾಗುತ್ತಿರುವ ನ್ಯೂ ಹೊರೈಜನ್ಸ್, ಪ್ಲೂಟೋ ಗ್ರಹಕ್ಕೆ ಸಮಾರು 2.4 ಲಕ್ಷ ಕಿ.ಮೀ ದೂರ ಇದ್ದಾಗ, ತನ್ನ ವೇಗವನ್ನು ಗಂಟೆಗೆ 50 ಸಾವಿರ ಕಿ.ಮೀಗೆ ಹೆಚ್ಚಿಸಿಕೊಂಡಿದೆ.

* ಪ್ಲೂಟೊ ಸನಿಹಕ್ಕೆ ಸಾಗಿದ ತಕ್ಷಣ ಹೊರೈಜನ್ ತನ್ನೊಳಗಿನ ಆರು ವೈಜ್ಞಾನಿಕ ಉಪಕರಣಗಳನ್ನು ಚಾಲನೆಗೊಳಿಸಿ ಪ್ಲೂಟೋದತ್ತ ತಿರುಗಿಸಿ, ಗ್ರಹದ ಮೇಲ್ಮೈವಿವರಗಳನ್ನು ಸಂಗ್ರಹಿಸಿ ಭೂಮಿಗೆ ರವಾನಿಸುತ್ತದೆ. ಜತೆಗೆ ಕುಬ್ಜಗ್ರಹದ ಆರು ಉಪಗ್ರಹಗಳ ಚಿತ್ರಗಳನ್ನೂ ಕಳಿಸಲಿದೆ.

* ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಈ ವ್ಯೋಮನೌಕೆಯ ನಿಯಂತ್ರಣ ಕೇಂದ್ರವಿದೆ. ಅಲ್ಲಿನ ಕಾಲಮಾನದ ಪ್ರಕಾರ, ನ್ಯೂ ಹೊರೈಜನ್ಸ್ ಜುಲೈ 14ರ ಬೆಳಗ್ಗೆ 7.49ಕ್ಕೆ ಪ್ಲೂಟೋದ ಅತ್ಯಂತ ಸನಿಹ ತಲುಪಿದೆ. ಭಾರತೀಯ ಕಾಲಮಾನದ ಪ್ರಕಾರ, ಸಂಜೆ 5.19ಕ್ಕೆ ಪ್ಲೂಟೋ ಬಳಿ ಸಾರಿದೆ.

* ವ್ಯೋಮನೌಕೆಯಿಂದ ಜುಲೈ 15ರ ಬೆಳಗ್ಗೆ ಸಂದೇಶ ಸ್ವೀಕರಿಸುವ ವಿಜ್ಞಾನಿಗಳು ನೌಕೆಯ ಯಾನ ಯಶಸ್ವಿಯೇ ಇಲ್ಲವೇ ಎನ್ನುವುದನ್ನು ಘೋಷಿಸಲಿದ್ದಾರೆ.

* ಭಾರತೀಯ ಕಾಲಮಾನದಂತೆ ಜುಲೈ 15ರ ಸಂಜೆ 4 ಗಂಟೆ ಸುಮಾರಿಗೆ ಪ್ಲೂಟೋದ ಉಪಗ್ರಹ ಚಾರೋನ್‌ನ ಪೂರ್ಣ ಚಿತ್ರವನ್ನು ವಿಜ್ಞಾನಿಗಳು ಸ್ವೀಕರಿಲಿದ್ದಾರೆ. ಮಧ್ಯರಾತ್ರಿ ವೇಳೆಗೆ ಪ್ಲೂಟೋದ ಮೊದಲ ಹೈ ರೆಸಲ್ಯೂಷನ್ ಚಿತ್ರ ವಿಜ್ಞಾನಿಗಳ ಕೈ ಸೇರಲಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023