Thursday, July 9, 2015

ಶಾಲಾ ಟಾಯ್ಲೆಟ್ ಇನ್ ಸ್ಪೆಕ್ಷನ್: ನಗರ ವಲಯ ೧೫ ,ಗ್ರಾಮೀಣ ೧೦ ೩೦೦ ಅಧಿಕಾರಿಗಳ ತಂಡದ ಭೇಟಿ


ನವದೆಹಲಿ, ಜು. 09: ಶಿಕ್ಷಕರೇ, ನಿಮ್ಮ
ಶಾಲೆಗಳ ಶೌಚಾಲಯದ ಸ್ಥಿತಿ ಗತಿ
ಹೇಗಿದೆ? ಬಳಕೆ ಮಾಡುತ್ತಿಲ್ಲವೇ?
ಕಾರಣ ಏನು? ಈ ಎಲ್ಲ ಪ್ರಶ್ನೆಗಳಿಗೂ
ಉತ್ತರ ರೆಡಿ ಮಾಡಿ ಇಟ್ಟುಕೊಳ್ಳಿ.
ಕೇಂದ್ರ ಸರ್ಕಾರದ ನಿರ್ದೇಶಕ
ಮತ್ತು ಕಾರ್ಯದರ್ಶಿ ಹುದ್ದೆ
ಅಧಿಕಾರಿಗಳಿಗೆ ಈಗ ಟಾಯ್ಲೆಟ್
ಪರಿಶೀಲನೆ ಮಾಡುವ ಕಾಯಕ.
ಕೇಂದ್ರ ಸರ್ಕಾರ
ಆದೇಶವೊಂದನ್ನು
ಹೊರಡಿಸಿದ್ದು ಶಾಲೆಗಳಲ್ಲಿ
ಶೌಚಾಲಯ ನಿರ್ಮಾಣ ಕೆಲಸಗಳು
ಹೇಗಿದೆ? ಬಳಕೆ ಹೇಗಿದೆ?
ಎಂಬುದನ್ನು ಪರಿಶೀಲನೆ ಮಾಡಿ
ವಾರದೊಳಗೆ ಸಲ್ಲಿಸುವಂತೆ 300 ಜನ
ಹಿರಿಯ ಅಧಿಕಾರಿಗಳಿಗೆ ತಿಳಿಸಿದೆ.
ಶೌಚಾಲಯ ನಿರ್ಮಾಣ ಕೆಲಸ
ಕಾರ್ಯಗಳು ನಿಧಾನಗತಿಯಲ್ಲಿ
ಸಾಗಿರುವ ಅಸಮಾಧಾನ
ವ್ಯಕ್ತಪಡಿಸುರುವ ಪ್ರಧಾನ ಮಂತ್ರಿ
ಸಚಿವಾಲಯ ಆದೇಶ ನೀಡಿದೆ.
ಪರಿಶೀಲನೆ ಜವಾಬ್ದಾರಿ
ಹೊತ್ತಿರುವ ಅಧಿಕಾರಿ ನಗರ ಭಾಗದ
15 ಶಾಲೆ, ಗ್ರಾಮೀಣ ಭಾಗದ 10
ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ
ಕಲೆಹಾಕಬೇಕು.
ನೀರಿನ ಸಂಪರ್ಕ ಸರಿಯಾಗಿದೆಯೇ?
ಬಾಲಕರು ಮತ್ತು ಬಾಲಕಿಯರಿಗೆ
ಬೇರೆ ಬೇರೆ ಶೌಚಾಲಯಗಳಿವೆಯೇ?
ನಿರ್ಮಾಣ ಹಂತದಲ್ಲಿ
ಇರುವುದಷ್ಟು? ಬಳಕೆಯಿಲ್ಲದೆ
ಇರುಚುದು ಎಷ್ಟು? ಎಂಬ ಸಕಲ
ಮಾಹಿತಿಯನ್ನು ಕಲೆ ಹಾಕಿ ಸ್ಥಳೀಯ
ಅಧಿಕಾರಿಗಳು ಅಲ್ಲಿನ ಜಿಲ್ಲಾಧಿಕಾರಿಗೆ
ವರದಿ ಸಲ್ಲಿಕೆ ಮಾಡಬೇಕು.
ಶಾಲೆಗೆ ತೆರಳುವ ಅಧಿಕಾರಿಗಳು
ಬಿಸಿಯೂಟ, ಸರ್ವ ಶಿಕ್ಷ ಅಭಿಯಾನ ಪ್ರಗತಿ,
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ
ಅಭಿಯಾನದ ಬಗ್ಗೆಯೂ ಮಾಹಿತಿ
ಕಲೆಹಾಕಬೇಕು ಎಂದು
ಸಚಿವಾಲಯ ತಿಳಿಸಿದೆ.