Drop


Wednesday, July 8, 2015

‘ನರೇಗಾ ವಿಶ್ವದ ಅತಿದೊಡ್ಡ ಲೋಕೋಪಯೋಗಿ ಯೋಜನೆ’-ವಿಶ್ವಬ್ಯಾಂಕ

'ನರೇಗಾ ವಿಶ್ವದ ಅತಿದೊಡ್ಡ
ಲೋಕೋಪಯೋಗಿ ಯೋಜನೆ'
1
ವಾಷಿಂಗ್ಟನ್ (ಪಿಟಿಐ): ಯುಪಿಎ ಸರ್ಕಾರದ
ಮಹತ್ವಾಕಾಂಕ್ಷೆಯ ಮಹಾತ್ಮ ಗಾಂಧಿ
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು
(ನರೇಗಾ) ವಿಶ್ವದ ಅತಿದೊಡ್ಡ
ಲೋಕೋಪಯೋಗಿ ಯೋಜನೆ ಎಂದು ವಿಶ್ವ
ಬ್ಯಾಂಕ್ ಶ್ಲಾಘಿಸಿದೆ.
ನರೇಗಾ ಯೋಜನೆಯು ದೇಶದ ಸುಮಾರು 15ರಷ್ಟು
ಜನಸಂಖ್ಯೆಗೆ ಸಾಮಾಜಿಕ ಭದ್ರತೆ ಒದಗಿಸಿದೆ
ಎಂದೂ ವಿಶ್ವಬ್ಯಾಂಕ್ ವರದಿ ಹೇಳಿದೆ.
'ವಿಶ್ವದ ಅತಿದೊಡ್ಡ ಐದು
ಲೋಕೋಪಯೋಗಿ ಯೋಜನೆಗಳು ಮಧ್ಯಮ ಆದಾಯದ
ರಾಷ್ಟ್ರಗಳಾದ ಚೀನಾ, ಭಾರತ, ದಕ್ಷಿಣ
ಆಫ್ರಿಕಾ ಹಾಗೂ
ಇಥಿಯೊಪಿಯಾಗಳಲ್ಲಿದೆ. ಈ
ಯೋಜನೆಗಳು 52.6 ಕೋಟಿಗೂ ಹೆಚ್ಚಿನ ಜನರನ್ನು
ತಲುಪಿವೆ' ಎಂದಿದೆ ವಿಶ್ವ ಬ್ಯಾಂಕ್
ಸಮೂಹದ 'ಸಾಮಾಜಿಕ ಸುರಕ್ಷಾ ಯೋಜನೆಗಳ ಸ್ಥಿತಿಗತಿ–
2015'ರ ವರದಿ.
ಸಾಮಾಜಿಕ ಸುರಕ್ಷಾ ಯೋಜನೆಗಳಿಗಾಗಿ 2010ರಿಂದ
2014ರ ಅವಧಿಯಲ್ಲಿ 120 ಅಭಿವೃದ್ಧಿ
ಶೀಲರಾಷ್ಟಗಳು 326 ಶತಕೋಟಿ ಅಮೆರಿಕನ್
ಡಾಲರ್ ಹಣವನ್ನು ವಿನಿಯೋಗಿಸಿವೆ ಎಂದೂ ಅದು
ತಿಳಿಸಿದೆ.
ಅದಾಗ್ಯೂ, ಕೆಳ ಹಾಗೂ ಕೆಳ ಮಧ್ಯಮ ಆದಾಯದ
ರಾಷ್ಟ್ರಗಳಲ್ಲಿ ಮೂರು ಭಾಗದಷ್ಟು ಬಡವರು ಹಾಗೂ
ಮಧ್ಯಮ ಆದಾಯದ ದೇಶಗಳಲ್ಲಿ ಒಂದು
ಭಾಗದಷ್ಟು ಬಡವರು ಸಾಮಾಜಿಕ ಸುರಕ್ಷಾ
ವ್ಯಾಪಿಯಿಂದ
ಹೊರಗುಳಿದಿದ್ದಾರೆ ಎಂದು ವರದಿ
ಬೆಳಕು ಚೆಲ್ಲಿದೆ.
ಭಾರತದ ಮಧ್ಯಾಹ್ನದ ಊಟದ ಯೋಜನೆಗೂ
ಮೆಚ್ಚುಗೆ ವ್ಯಕ್ತವಾಗಿದೆ. ಇದು
ಅತಿದೊಡ್ಡ ಶಾಲಾ ಊಟದ ಯೋಜನೆ
ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 10.5 ಕೋಟಿ
ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
18.2 ಕೋಟಿ ಅಥವಾ ಭಾರತದ ಜನಸಂಖ್ಯೆ ಶೇಕಡ
15ರಷ್ಟು ಜನರಿಗೆ ಉದ್ಯೋಗ ಖಾತ್ರಿಯನ್ನು
ಒಗಿಸಿರುವ ನರೇಗಾ ಸಾಮಾಜಿಕ ಸುರಕ್ಷಾ ಯೋಜನೆಗಳ
ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಅಲ್ಲದೇ, ಭಾರತದ ಜನನಿ ಸುರಕ್ಷಾ ಯೋಜನೆ,
ಇಂದಿರಾ ಗಾಂಧಿ ರಾಷ್ಟ್ರೀಯ
ವೃದ್ಧಾಪ್ಯ ಯೋಜನೆಗೂ ವಿಶ್ವ ಬ್ಯಾಂಕ್
ವರದಿಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.