Thursday, July 16, 2015

ವೈದ್ಯಲೋಕದಲ್ಲೇ ಅಚ್ಚರಿ : ಮಹಿಳೆಗೆ ಬದುಕು ನೀಡಿದ ಹಸುವಿನ ಹೃದಯದ ಕವಾಟ..!

ಚೆನ್ನೈ, ಜು.16-ವೈದ್ಯಲೋಕದಲ್ಲೇ
ಇದೊಂದು ಅಚ್ಚರಿ ಪ್ರಕರಣ.
81 ವರ್ಷ ವಯಸ್ಸಿನ
ಮಹಿಳೆಯೊಬ್ಬಳಿಗೆ ಹೃದಯದ
ಕವಾಟ ವಿಫಲವಾಗಿತ್ತು. ಆಕೆಗೆ ಉಸಿರಾಟದ
ತೊಂದರೆಯಾಗಿ ಪರಿಸ್ಥಿತಿ
ಗಂಭೀರವಾಗಿತ್ತು. ಆಗ ವೈದ್ಯರು
ಹಸುವಿನ ಹೃದಯದ ಕವಾಟ (ಓರ್ಟಿಕ್ವ್ಯಾಲ್ಸ್)ನನ್ನು
ಜೋಡಿಸುವಲ್ಲಿ ಯಶಸ್ವಿಯಾಗಿದ್ದು, ವೃದ್ಧೆ ಈಗ
ಆರೋಗ್ಯವಾಗಿದ್ದಾರೆ.
ಹೈದ್ರಾಬಾದಿನ ಮಹಿಳೆ ಹೃದಯದ
ತೊಂದರೆಯಿಂದ
ಚೆನ್ನೈಯ ಫ್ರಾಂಟಿಯರ್ಲೈಫ್ಲೈನ್ ಆಸ್ಪತ್ರೆಗೆ
ದಾಖಲಾಗಿದ್ದಳು. ಶಸ್ತ್ರಚಿಕಿತ್ಸೆ ಮಾಡಿ ಬೇರೆ
ಒಂದು ವ್ಯಾಲ್ಸ್ ಅಳವಡಿಸದೆ ಮಹಿಳೆ
ಬದುಕುಳಿಯುವುದು ಕಷ್ಟವಾಗಿತ್ತು. ಆದರೆ ನಮ್ಮ
ಶಸ್ತ್ರಚಿಕಿತ್ಸಾ ತಂಡ ರಿಸ್ಕ್
ತೆಗೆದುಕೊಂಡು ಹಸುವಿನ
ಹೃದಯದ ವ್ಯಾಲ್ಸ್ ತರಿಸಿ ಜೋಡಿಸಿದೆವು. ಅದು
ಯಶಸ್ವಿಯಾಯಿತು ಎನ್ನುತ್ತಾರೆ ಮುಖ್ಯ ವೈದ್ಯ
ಡಾ.ಈ.ಎಂ.ಚೆರಿಯನ್. ವಿಶೇಷವೆಂದರೆ,
81 ವರ್ಷದ ಈ ಮಹಿಳೆ ಇಲ್ಲಿಗೆ 4 ವರ್ಷಗಳ
ಹಿಂದೆ ಆಗಲೇ ಒಂದು ಬಾರಿ ಶಸ್ತ್ರಚಿಕಿತ್ಸೆ
ನಡೆಸಿ ವ್ಯಾಲ್ಸ್ ಅಳವಡಿಸಲಾಗಿತ್ತು. ಕಳೆದ ಕೆಲವು
ದಿನಗಳಿಂದ ಆಕೆಗೆ ಹೃದಯದ ಸಮಸ್ಯೆ
ಉಂಟಾಗಿತ್ತು.
ದೇಶದ ಹಲವು ಹೆಸರಾಂತ ಆಸ್ಪತ್ರೆಗಳಿಗೆ ಆ
ಮಹಿಳೆ ಅಲೆದಾಡಿದರೂ ಎಲ್ಲರೂ ಕೈ ಚೆಲ್ಲಿದ್ದಾರೆ.
ಹಾಗಾಗಿ ಕಳೆದ ಏಪ್ರಿಲ್ನಲ್ಲಿ ಮಹಿಳೆ ಚೆನ್ನೈ
ಫ್ರಾಂಟಿಯರ್ಫ್ರಂಟ್ಲೈನ್ಗೆ ಭೇಟಿ
ನೀಡಿ ವಿಚಾರಿಸಿದ್ದಾಳೆ. ಉಸಿರಾಟಕ್ಕೆ
ಭಾರೀ
ತೊಂದರೆಯಾಗಿದ್ದರಿಂದ
ಪದೇ ಪದೇ ಆಸ್ಪತ್ರೆಗೆ
ದಾಖಲಾಗತೊಡಗಿದರು. ತಪಾಸಣೆ
ನಡೆಸಿದಾಗ ಈ ಹಿಂದೆ ಅಳವಡಿಸಿದ್ದ ಓರ್ಟಿಕ್
ವ್ಯಾಲ್ಸ್ ಕುಗ್ಗಿ ಉಸಿರಾಟ ದುಸ್ತರವಾಗಿತ್ತು.
ನಂತರ ನಾವು ಈ ಪ್ರಯತ್ನ ಮಾಡಿದೆವು. ಅದು
ಸಕ್ಸಸ್ ಆಯ್ತು ಎಂಬುದು
ಅಂತಾರಾಷ್ಟ್ರೀಯ ಹೃದಯ ತಜ್ಞ
ಡಾ. ಆರ್.ಅನಂತರಾಮನ್ ಅವರ ಹೇಳಿಕೆ.