Drop


Thursday, July 9, 2015

Chris Gayle New Record: First Player To Reach 8000 Runs Milestone In T20

ವೆಸ್ಟ್ ಇಂಡೀಸ್ ನ ಸ್ಫೋಟಕ
ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಇದೀಗ ರನ್
ಗಳಿಕೆಯಲ್ಲಿ ವಿಶ್ವ ದಾಖಲೆ ಮಾಡುವ ಮೂಲಕ ಟಿ20
ಪಂದ್ಯಗಳಲ್ಲಿ 8000 ರನ್ ಗಳಿಸಿದ
ಮೊದಲ ಆಟಗಾರ ಎಂಬ
ಖ್ಯಾತಿಗೆ ಪಾತ್ರರಾಗಿದ್ದಾರೆ.
ಕೆರೀಬಿಯನ್ ಪ್ರೀಮಿಯರ್
ಲೀಗ್ ಪಂದ್ಯಾವಳಿಯಲ್ಲಿ
ಕಿಂಗ್ಸ್ಟನ್ನಲ್ಲಿ ಸೇಂಟ್ ಲೂಸಿಯಾ ವಿರುದ್ಧ
ನಡೆದ ಪಂದ್ಯದಲ್ಲಿ ಗೇಲ್ ಅಜೇಯ 64 ರನ್
ಗಳಿಸಿದ ಕ್ರಿಸ್ ಗೇಲ್ ಈ ದಾಖಲೆಯನ್ನು
ತಮ್ಮದಾಗಿಸಿಕೊಂಡರು.
ಒಟ್ಟಾರೆ 217 ಟಿ20 ಪಂದ್ಯಗಳಲ್ಲಿ ಗೇಲ್
8,037 ರನ್ ಗಳಿಸಿದ್ದು ಇದರಲ್ಲಿ 15 ಶತಕ ಹಾಗೂ 52
ಅರ್ಧ ಶತಕಗಳೂ ಇವೆ. ಅತಿ ಹೆಚ್ಚು ರನ್ ಗಳಿಸಿದ 2ನೇ
ಆಟಗಾರ ಎಂಬ ದಾಖಲೆ 6,471 ರನ್ ಗಳಿಸಿರುವ
ಆಸ್ಟ್ರೇಲಿಯಾ ಬ್ರಾಡ್ ಹಾಗ್ ಅವರ ಹೆಸರಲ್ಲಿದೆ.