Fiji sets football world record with 38-0 win over the Federated States of Micronesia.

ಪುಟ್ಬಾಲ್
ಇತಿಹಾಸದಲ್ಲೇ ಫಿಜಿ ನೂತನ ದಾಖಲೆ ಆ ತಂಡ ಗಳಿಸಿದ್ದು ಒಂದು ಎರಡು ಗೋಲಲ್ಲ ...! ಬರೋಬ್ಬರಿ 38 ಗೋಲುಗಳನ್ನು ದಾಖಲಿಸಿದ್ದೇ ಅಲ್ಲದೆಎದುರಾಳಿ ತಂಡದ ಆಟಗಾರರು ಒಂದೇ ಒಂದು ಗೋಲನ್ನು ಕೂಡ ದಾಖಲಿಸಲು ಬಿಡಲಿಲ್ಲ. ನಿನ್ನೆ ನಡೆದ ಫೆಸಿಫಿಕ್ ಗೇಮ್ಸ್
ಪಂದ್ಯವೊಂದರಲ್ಲಿ ಫಿಜಿ ಟೋರೆನ್ಸ್
ತಂಡದವರು ಫಿಡಿರೆಟೇಟ್ ಸ್ಟೇಟ್ಸ್ ಆಫ್
ಕ್ರೋನೇಷಿಯಾ ತಂಡದ ವಿರುದ್ಧ ಬರೋಬ್ಬರಿ 38 ಗೋಲುಗಳನ್ನು ದಾಖಲಿಸಿತ್ತು. ಇದು ಅಂತಾರಾಷ್ಟ್ರೀಯ ಫುಟ್ಬಾಲ್ ಆಟದಲ್ಲೇ
ದಾಖಲೆಯಾದ ಅತ್ಯಂತ ದೊಡ್ಡ ಗೋಲುಗಳು
ದಾಖಲಾದ ಪಂದ್ಯವೆನಿಸಿದೆ. ಫಿಜಿ
ತಂಡದ ಆಂಟೋನಿಯೋ ಟುಯಿಯುನಾ ಅವರೇ 10 ಗೋಲುಗಳನ್ನು ಗಳಿಸಿ ನೂತನ ದಾಖಲೆ ಬರೆದಿದ್ದಾರೆ. ಪಂದ್ಯ
ಆರಂಭಗೊಂಡ ಮೊದಲ ಹಾಫ್ನಲ್ಲೇ ಪಿಜಿ ತಂಡವು 21-0 ಗೋಲುಗಳನ್ನು ಗಳಿಸಿತ್ತು. ನಂತರ ದ್ವಿತೀಯ ಹಾಫ್ನಲ್ಲೂ ಅದೇ ಹುಮ್ಮಸ್ಸಿನಿಂದ ಆಡಿದ ಫಿಜಿ ಆಟಗಾರರು 17
ಗೋಲುಗಳನ್ನು ದಾಖಲಿಸಿ ಒಟ್ಟಾರೆ ಪಂದ್ಯದಲ್ಲಿ
38 ಗೋಲುಗಳನ್ನು ದಾಖಲಿಸಿ ನೂತನ ದಾಖಲೆ ನಿರ್ಮಿಸಿದರು. ಇದಕ್ಕೂ
ಮುನ್ನ 2001ರಲ್ಲಿ ಆಸ್ಟ್ರೇಲಿಯಾ ತಂಡವು
ಅಮೆರಿಕಾ ಸೊಮೋಹಾ ವಿರುದ್ಧ 31-0
ಗೋಲುಗಳಿಂದ ಪಂದ್ಯವನ್ನು ಜಯಿಸಿತ್ತು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023