Drop


Tuesday, July 14, 2015

ISRO's GPS-Aided Geo Augmented Navigation ( GAGAN) Satellite-Based Navigation System Launched

ಜಿಪಿಎಸ್ ಆಧಾರಿತ 'ಗಗನ್'ಗೆ ಚಾಲನೆ

ನವದೆಹಲಿ (ಪಿಟಿಐ): ಅತ್ಯಂತ
ಸಂಕೀರ್ಣವಾದ ವಿಮಾನ ಹಾರಾಟ
ವ್ಯವಸ್ಥೆಯನ್ನು ಸುಗಮಗೊಳಿಸುವ
ಅತ್ಯಾಧುನಿಕ ಜಿಪಿಎಸ್ ಆಧಾರಿತ
ಪಥದರ್ಶಕ ವ್ಯವಸ್ಥೆ 'ಗಗನ್'ಗೆ ನಾಗರಿಕ
ವಿಮಾನಯಾನ ಸಚಿವ ಅಶೋಕ್ ಗಜಪತಿ
ರಾಜು ಸೋಮವಾರ ವಿಧ್ಯುಕ್ತ
ಚಾಲನೆ ನೀಡಿದರು.
ಭಾರತೀಯ ಬಾಹ್ಯಾಕಾಶ
ಸಂಶೋಧನಾ ಸಂಸ್ಥೆ (ಇಸ್ರೊ)
ಹಾಗೂ ವಿಮಾನಯಾನ ಪ್ರಾಧಿಕಾರ
ಜಂಟಿಯಾಗಿ ₨ 774 ಕೋಟಿ
ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ 'ಗಗನ್'
ದೇಶದ ವಿಮಾನಯಾನ ಪಥದರ್ಶಕ
ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಕ
ಹೆಜ್ಜೆಯಾಗಿದೆ.
ದೇಶದ 50 ವಿಮಾನ ನಿಲ್ದಾಣಗಳು
ಹೊಸ ವ್ಯವಸ್ಥೆಯ ಲಾಭ
ಪಡೆಯಲಿದ್ದು, ಸುಗಮ ವಿಮಾನ
ಸಂಚಾರ, ಸುರಕ್ಷತೆ, ಇಂಧನ ಕ್ಷಮತೆ,
ದರ ಕಡಿತಕ್ಕೆ ಈ ವ್ಯವಸ್ಥೆ ನೆರವಾಗಲಿದೆ.
ಸೇನೆ, ರಸ್ತೆ ಸಂಚಾರ, ಕೃಷಿ, ಪ್ರಕೃತಿ
ವಿಕೋಪದಂಥ ಸಂದರ್ಭದಲ್ಲಿ ಗಗನ್
ನೆರವಿಗೆ ಬರಲಿದ್ದು, ಪೈಲಟ್ ಸೇರಿದಂತೆ
ವಿಮಾನದ ಸಿಬ್ಬಂದಿ ಹಾಗೂ
ವಾಯು ಸಂಚಾರ ನಿಯಂತ್ರಣ
ಕೇಂದ್ರದ ಸಿಬ್ಬಂದಿಯ
ಕಾರ್ಯಭಾರ ಮತ್ತು ಒತ್ತಡವನ್ನು
ಅರ್ಧದಷ್ಟು ಕಡಿಮೆ ಮಾಡಲಿದೆ.
ವಾಯುಮಾರ್ಗ, ಸಂಚಾರ ದಟ್ಟಣೆ,
ರನ್ವೇ ಬಗ್ಗೆ ಗಗನ್ ಸ್ಪಷ್ಟ ಮತ್ತು
ಕರಾರುವಾಕ್ಕಾದ ಚಿತ್ರಣ ನೀಡಲಿದೆ.
ಕಳೆದ ಫೆಬ್ರುವರಿಯಿಂದ ಜಿಸ್ಯಾಟ್ 8
ಮತ್ತು ಜಿಸ್ಯಾಟ್ 10
ಉಪಗ್ರಹಗಳೊಂದಿಗೆ ಸಂಪರ್ಕ
ಸಾಧಿಸಿರುವ ಗಗನ್ ವಿಮಾನಯಾನ
ಕ್ಷೇತ್ರದಲ್ಲಿ ಭಾರಿ ಬದಲಾವಣೆ ತರಲಿದೆ
ಎಂದು ನಂಬಲಾಗಿದೆ.